ಬಾಲಿವುಡ್‌ ನಟಿ ಕೃತಿ ಸನೂನ್‌ ‘ಟೈಗರ್‌ ನಾಗೇಶ್ವರ ರಾವ್‌’ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ತಮ್ಮ ಸಹೋದರಿ ನೂಪುರ್‌ ಸನೂನ್‌ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದಾರೆ. ರವಿತೇಜಾ ಹೀರೋ ಆಗಿ ನಟಿಸುತ್ತಿರುವ ಈ ತೆಲುಗು ಚಿತ್ರವನ್ನು ವಂಶಿ ನಿರ್ದೇಶಿಸುತ್ತಿದ್ದಾರೆ.

‘ಟೈಗರ್‌ ನಾಗೇಶ್ವರ ರಾವ್‌’ ತೆಲುಗು ಸಿನಿಮಾದಲ್ಲಿನ ನಟಿ ನೂಪುರ್‌ ಸನೂನ್‌ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಬಾಲಿವುಡ್‌ ನಟಿ ಕೃತಿ ಸನೂನ್‌ ಅವರ ಕಿರಿಯ ಸಹೋದರಿ ಈ ನೂಪುರ್‌ ಸನೂನ್‌. ಕೃತಿ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಫಸ್ಟ್‌ಲುಕ್‌ ಬಿಡುಗಡೆ ಮಾಡಿ, ”ನನ್ನ ಸಹೋದರಿಯ ಮೊದಲ ಪ್ಯಾನ್ ಇಂಡಿಯಾ ಫಿಲ್ಮ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದಕ್ಕಿಂತ ಹೆಮ್ಮೆಯ ಸಂಗತಿ ನನಗ್ಯಾವುದೂ ಇಲ್ಲ. ‘ಟೈಗರ್‌ ನಾಗೇಶ್ವರ ರಾವ್‌’ ತಂಡದಿಂದ ನೂಪುರ್‌ ಸನೂನ್‌ ‘ಸಾರಾ’ ಪಾತ್ರದಲ್ಲಿ ಪರಿಚಯವಾಗುತ್ತಿದ್ದಾಳೆ. ಅಕ್ಟೋಬರ್ 20ರಿಂದ ಪ್ರಪಂಚದಾದ್ಯಂತ ಟೈಗರ್‌ ಅಬ್ಬರಿಸಲಿದೆ” ಎಂದು ಬರೆದಿದ್ದಾರೆ. ಪೋಸ್ಟರ್‌ನಲ್ಲಿ ನೂಪುರ್ ಗುಲಾಬಿ ಮತ್ತು ನೀಲಿ ಬಣ್ಣದ ಬಟ್ಟೆ ಧರಿಸಿ ರೈಲಿನ ಕಿಟಕಿಯಿಂದ ಹೊರಗೆ ನೋಡುತ್ತಿದ್ದಾರೆ.

ಈ ಚಿತ್ರವು ವರ್ಷದ ಬಹುನಿರೀಕ್ಷಿತ ತೆಲುಗು ಚಿತ್ರಗಳಲ್ಲೊಂದು. ಮೂಲ ತೆಲುಗು ಸೇರಿದಂತೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ವಂಶಿ ಚಿತ್ರಕಥೆ ಬರೆದು ಚಿತ್ರ ನಿರ್ದೇಶಿಸಿದ್ದು, Abhishek Agarwal Arts ಬ್ಯಾನರ್‌ ಅಡಿ ಅವರೇ ನಿರ್ಮಿಸಿದ್ದಾರೆ ಮತ್ತು ತೇಜ್ ನಾರಾಯಣ್ ಅಗರ್‌ವಾಲ್‌ ಪ್ರಸ್ತುತಪಡಿಸಿದ್ದಾರೆ. ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಸಂಭಾಷಣೆ, ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆಯಿದೆ. ಆರ್ ಮಧಿ ಛಾಯಾಗ್ರಹಣ ಹಾಗೂ ಅವಿನಾಶ್ ಕೊಲ್ಲಾ ಪ್ರೊಡಕ್ಷನ್ ಡಿಸೈನರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅನುಪಮ್‌ ಖೇರ್‌, ಗಾಯತ್ರಿ ಭಾರದ್ವಾಜ್‌, ಜಾನ್‌ ಅಬ್ರಹಾಂ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ತಮಿಳು ನಟ ಕಾರ್ತಿ ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here