ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ 94ನೇ ಆಸ್ಕರ್‌ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. ನಿರೀಕ್ಷೆಯಂತೆ DeBose ಅತ್ಯುತ್ತಮ ಪೋಷಕ ನಟಿ, Troy Kotsur ಅತ್ಯುತ್ತಮ ಪೋಷಕ ನಟ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ ಆಸ್ಕರ್‌ ಸಮಾರಂಭ ಸಂಭ್ರಮದಿಂದ ಆಯೋಜನೆಗೊಂಡಿದೆ. ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ರೆಡ್‌ ಕಾರ್ಪೆಟ್‌ ಸಂಭ್ರಮದೊಂದಿಗೆ ಸಮಾರಂಭ ಆರಂಭವಾಯ್ತು. Amy Schumer, Regina Hall ಮತ್ತು Wanda Sykes ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ. ಹತ್ತು ನಾಮಿನೇಷನ್ಸ್‌ ಪಡೆದಿದ್ದ ‘Dune’ ಸಿನಿಮಾ ಈಗಾಗಲೇ ಆರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ನಿರೀಕ್ಷೆಯಂತೆ Ariana DeBose ಅವರು ‘Wes Side Story’ ಸಿನಿಮಾದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ. ‘CODA’ ಚಿತ್ರಕ್ಕಾಗಿ Troy Kotsur ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಒಲಿದಿದೆ.

ರೆಡ್‌ ಕಾರ್ಪೆಟ್‌ ನೊಂದಿಗೆ ಆಸ್ಕರ್‌ ಸಮಾರಂಭ ಆರಂಭವಾಯ್ತು. ಲಾಸ್‌ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಹಾಲಿವುಡ್‌ ತಾರೆಯರು ಅಕರ್ಷಕ ಉಡುಗೆಗಳೊಂದಿಗೆ ಮಿಂಚಿದರು. ತಾರೆಯರ ರೆಡ್‌ ಡ್ರೆಸ್‌, ಬ್ಲ್ಯೂ ರೆಬ್ಬನ್ಸ್‌ನೊಂದಿಗೆ ಸಂಭ್ರಮ ಕಳೆಗಟ್ಟಿತ್ತು. ಕಳೆದ ವರ್ಷ ಕೋವಿಡ್‌ನಿಂದಾಗಿ ಸರಳವಾಗಿ ನಡೆದ ಆಸ್ಕರ್‌ ಸಮಾರಂಭವನ್ನು ಮರೆಸುವಂತೆ ಇಂದು ತಾರೆಯರು ಉತ್ಸಾಹದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

LEAVE A REPLY

Connect with

Please enter your comment!
Please enter your name here