ಧನುಷ್‌ ನಟಿಸಲಿರುವ ನೂತನ ತೆಲುಗು – ತಮಿಳು ದ್ವಿಭಾಷಾ ಸಿನಿಮಾದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದರು. ಶೇಖರ್‌ ಕಮ್ಮುಲ ನಿರ್ದೇಶನದ ಈ ಸಿನಿಮಾ ತಂಡಕ್ಕೆ ಇದೀಗ ನಟ ನಾಗಾರ್ಜುನ ಸೇರ್ಪಡೆಯಾಗಿದ್ದಾರೆ.

ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬಾಲಿವುಡ್‌ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಶೇಖರ್‌ ಕಮ್ಮುಲ ನಿರ್ದೇಶನದ ತೆಲುಗು – ತಮಿಳು ದ್ವಿಭಾಷಾ ಸಿನಿಮಾದಲ್ಲಿ ಅವರು ನಾಯಕಿಯಾಗುತ್ತಿರುವ ಸುದ್ದಿ ಮೊನ್ನೆ ಹೊರಬಿದ್ದಿತ್ತು. ಧನುಷ್‌ ಹೀರೋ ಆಗಿ ನಟಿಸುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗುವ ಸುದ್ದಿಯನ್ನು ಅವರೇ ವಿಶೇಷ ವೀಡಿಯೋ ಮೂಲಕ ತಿಳಿಸಿದ್ದರು. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಈ ಸಿನಿಮಾತಂಡಕ್ಕೆ ನಾಗಾರ್ಜುನ ಸೇರ್ಪಡೆಗೊಂಡಿದ್ದಾರೆ. ಹಾಗಾಗಿ ಚಿತ್ರದಲ್ಲಿ ರಶ್ಮಿಕಾ ಇಬ್ಬರು ಖ್ಯಾತನಾಮ ನಟರೊಂದಿಗೆ ತೆರೆಹಂಚುವ ಅವಕಾಶ ಪಡೆದಂತಾಗಿದೆ.

ಚಿತ್ರದಲ್ಲಿ ರಾಜಕೀಯ ವಸ್ತು ಇರಲಿದೆ ಎನ್ನುತ್ತಾರೆ ನಿರ್ದೇಶಕ ಶೇಖರ್‌ ಕಮ್ಮುಲ. ‘ಲೀಡರ್‌’ ತೆಲುಗು ಸಿನಿಮಾದ ಬಳಿಕ ಶೇಖರ್‌ ಅವರ ಎರಡನೇ ರಾಜಕೀಯ ಕಥಾವಸ್ತು ಹೊಂದಿರುವ ಸಿನಿಮಾ ಇದು. ತೆಲುಗು ಮತ್ತು ತಮಿಳು ಎರಡೂ ಭಾಷೆಗಳಲ್ಲಿಯೂ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ರಶ್ಮಿಕಾ ಅವರು ರಣಬೀರ್‌ ಕಪೂರ್‌ ನಟನೆಯ ‘ಅನಿಮಲ್‌’ ಹಿಂದಿ ಚಿತ್ರದಲ್ಲಿ ಅನಿಲ್‌ ಕಪೂರ್‌, ಪರಿಣಿತಿ ಚೋಪ್ರಾ ಅವರೊಟ್ಟಿಗೆ ನಟಿಸಿದ್ದಾರೆ. ಮತ್ತೊಂದೆಡೆ ಅವರ ‘ಪುಷ್ಟ 2’ ತೆಲುಗು ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ. ಟೈಗರ್ ಶ್ರಾಫ್​ ಜೊತೆಗೆ ಹೊಸ ಹಿಂದಿ ಚಿತ್ರದಲ್ಲಿ ಅವರು ನಟಿಸಲಿದ್ದು, ಅಧಿಕೃತ ಮಾಹಿತಿಯಿನ್ನೂ ಹೊರಬರಬೇಕಿದೆ.

Previous article‘ಅಯ್ಯೋ ದೈವವೇ’ | ನಿಶ್ಚಿತ್‌ ಕೊರೋಡಿ ನಟನೆಯ ‘Supplier ಶಂಕರ್’ ಸಾಂಗ್‌ ಬಿಡುಗಡೆ
Next article‘ಒಟ್ಟ’ ಟೀಸರ್‌ ಬಿಡುಗಡೆ ಮಾಡಿದ ರೆಹಮಾನ್‌ | ರಸೂಲ್‌ ಪೂಕುಟ್ಟಿ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here