ರಾಮ್‌ಕುಮಾರ್‌ ಬಾಲಕೃಷ್ಣನ್‌ ನಿರ್ದೇಶನದ ‘ಪಾರ್ಕಿಂಗ್‌’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಹರೀಶ್‌ ಕಲ್ಯಾಣ್‌, ಎಂ ಎಸ್‌ ಭಾಸ್ಕರ್‌ ಮತ್ತು ಇಂದೂಜಾ ರವಿಚಂದ್ರನ್‌ ಮುಖ್ಯಪಾತ್ರಗಳಲ್ಲಿ ನಟಿಸಿರುವ ಫ್ಯಾಮಿಲಿ ಡ್ರಾಮಾ ಸಿನಿಮಾ ಇದೇ ಡಿಸೆಂಬರ್‌ 1ರಂದು ತೆರೆಕಾಣಲಿದೆ.

ಹರೀಶ್ ಕಲ್ಯಾಣ್ ಮತ್ತು ಇಂದೂಜಾ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪಾರ್ಕಿಂಗ್’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಾಮ್‌ಕುಮಾರ್ ಬಾಲಕೃಷ್ಣನ್ ನಿರ್ದೇಶಿಸಿದ್ದಾರೆ. ಇಳವರಸು, ರವಿಚಂದ್ರನ್, ಎಂ ಎಸ್ ಭಾಸ್ಕರ್, ರಮಾ, ಪ್ರಾರ್ಥನಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹರೀಶ್ ತನ್ನ ಪತ್ನಿ ಇಂದೂಜಾಳೊಟ್ಟಿಗೆ ತಿರುಚ್ಚಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುತ್ತಾನೆ. ಐಟಿ ವೃತ್ತಿಪರನಾದ ಅವನು ಹೊಸ ಕಾರನ್ನು ಮನೆಗೆ ತಂದಾಗ ವಿಷಯಗಳು ತಿರುವು ಪಡೆಯುತ್ತವೆ. ಬಾಡಿಗೆ ಮನೆಯಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಸೀಮಿತವಾಗಿರುವುದರಿಂದ ಮನೆ ಮಾಲೀಕರೊಂದಿಗೆ (ಎಂ ಎಸ್ ಭಾಸ್ಕರ್) ಜಗಳವಾಡುತ್ತಿರುತ್ತಾರೆ.

ಪರಸ್ಪರರ ವಾಹನಗಳಿಗೆ ಹಾನಿ ಮಾಡುವುದು ಸೇರಿದಂತೆ ವಿಷಯಗಳು ತೀವ್ರ ರೂಪ ಪಡೆಯುತ್ತದೆ. ಒಬ್ಬರಿಗೊಬ್ಬರು ಹಾನಿ ಮಾಡಿಕೊಳ್ಳುತ್ತಾರೆ. ನಂತರ ಈ ಇಬ್ಬರೂ ಪೊಲೀಸ್ ಠಾಣೆಗೆ ಬರುತ್ತಾರೆ. ಪಾರ್ಕಿಂಗ್ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಅವರು ಹರಸಾಹಸ ಪಡುವುದನ್ನು ಚಿತ್ರದ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಚಿತ್ರವನ್ನು ಸುಧನ್ ಸುಂದರಂ, ಕೆ ಎಸ್ ಸಿನಿಶ್ ನಿರ್ಮಿಸಿದ್ದಾರೆ. ಸ್ಯಾಮ್ ಸಿ ಎಸ್ ಸಂಗೀತ ಸಂಯೋಜನೆ, ಜಿಜು ಸನ್ನಿ ಛಾಯಾಗ್ರಹಣ, ಫಿಲೋಮಿನ್ ರಾಜ್ ಸಂಕಲನ, ಎನ್ ಕೆ ರಾಹುಲ್ ಕಲಾ ನಿರ್ದೆಶನ ಚಿತ್ರಕ್ಕಿದೆ. ಡಿಸೆಂಬರ್‌ 1 ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here