ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ‘ಪೊನ್ನಿಯಿನ್‌ ಸೆಲ್ವನ್‌’ ತಮಿಳು ಐತಿಹಾಸಿಕ ಸಿನಿಮಾದ ಟ್ರೈಲರ್‌ ಬಿಡುಗುಡೆಯಾಗಿದೆ. ಪಾತ್ರವೈವಿಧ್ಯ, ಮೇಕಿಂಗ್‌ನಿಂದಾಗಿ ಸಹಜವಾಗಿಯೇ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ‘ಬಾಹುಬಲಿ’ ನಂತರದ ದುಬಾರಿ ಬಜೆಟ್‌, ಸ್ಟಾರ್‌ಕಾಸ್ಟ್‌ನ ಸಿನಿಮಾದ ಟ್ರೈಲರ್‌ಗೆ ಸಿನಿಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೆಪ್ಟೆಂಬರ್‌ 30ರಂದು ಸಿನಿಮಾ ತೆರೆಕಾಣುತ್ತಿದೆ.

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್‌ ಸೆಲ್ವನ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು ಸಿನಿವಲಯದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕರು ಚಿತ್ರದ ಎಲ್ಲಾ ಪ್ರಮುಖ ಪಾತ್ರಗಳನ್ನು ಟ್ರೈಲರ್‌ನಲ್ಲಿ ಪರಿಚಯಿಸಿದ್ದಾರೆ. ವಿಶೇಷವಾಗಿ ವಿಕ್ರಂ ಮತ್ತು ಐಶ್ವರ್ಯಾ ರೈ ಪಾತ್ರಗಳು ಗಮನ ಸೆಳೆಯುತ್ತವೆ. ಲೇಖಕ ಕಲ್ಕಿ ಕೃಷ್ಣಮೂರ್ತಿ ಅವರ ಕೃತಿ ಆಧರಿಸಿದ ಚಿತ್ರವಿದು. ಕಲ್ಕಿ ಕೃಷ್ಣಮೂರ್ತಿ ಅವರ ಈ ಕೃತಿ, ‘ಅರುಲ್‌ಮೋಝಿ ವರ್ಮನ್‌’ ಚರಿತ್ರೆಯ ಕುರಿತಾಗಿದೆ. ರಾಜರಾಜಚೋಳ ಎಂದು ಕರೆಸಿಕೊಂಡಿದ್ದ ತಂಜಾವೂರಿನ ಬೃಹದೇಶ್ವರ ದೇವಾಲಯ ಕಟ್ಟಿದ ಚಕ್ರವರ್ತಿ. ಇದು ಭಾರತದ ಬಹುದೊಡ್ಡ ದೇವಾಲಯಗಳಲ್ಲೊಂದು. ಮದ್ರಾಸ್‌ ಟಾಕೀಸ್‌ ಮತ್ತು ಲೈಕಾ ಪ್ರೊಡಕ್ಷನ್ಸ್‌ ನಿರ್ಮಿಸಿರುವ ಸಿನಿಮಾ. ವಿಕ್ರಂ, ಕಾರ್ತಿ, ಐಶ್ವರ್ಯಾ ರೈ, ಜಯಂ ರವಿ, ತ್ರಿಷಾ, ಕಿಶೋರ್‌ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಐತಿಹಾಸಿಕ ದೇವಾಲಯಗಳ ಸೆಟ್‌ಗಳನ್ನು ಹಾಕಿ ಸಿನಿಮಾ ಚಿತ್ರಿಸಿದ್ದು ಎ.ಆರ್.ರೆಹಮಾನ್‌ ಸಂಗೀತ ಸಂಯೋಜಿಸಿದ್ದಾರೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಬರುತ್ತಿದ್ದು, ಫಸ್ಟ್‌ ಪಾರ್ಟ್‌ ಸೆಪ್ಟೆಂಬರ್‌ 30ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here