ಪತಿ ಸ್ಯಾಮ್ ಬಾಂಬೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಟಿ ಪೂನಂ ಪಾಂಡೆ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಯಾಮ್‌ರನ್ನು ಬಂಧಿಸಿದ್ದು, ಹಲ್ಲೆಯಿಂದಾಗಿ ಗಾಯಗೊಂಡಿರುವ ನಟಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟಿ, ರೂಪದರ್ಶಿ ಪೂನಂ ಪಾಂಡೆ ಅವರ ಮೇಲೆ ಪತಿ ಸ್ಯಾಮ್ ಬಾಂಬೆ ಮತ್ತೆ ಹಲ್ಲೆ ನಡಿಸಿದ್ದಾರೆ. ಈ ಬಗ್ಗೆ ನಟಿ ಮುಂಬಯಿ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಯಾಮ್‌ರನ್ನು ಬಂಧಿಸಿದ್ದಾರೆ ಎಂದು ANI ಟ್ವೀಟ್ ಮಾಡಿದೆ. ಪತಿ ನಡೆಸಿರುವ ಹಲ್ಲೆಯಿಂದ ಗಾಯಗೊಂಡಿರುವ ಪೂನಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2020ರ ಜುಲೈ 27ರಂದು ಪೂನಂ ಪಾಂಡೆ ತಮ್ಮ ಬಹುಕಾಲದ ಸ್ನೇಹಿತ ಸ್ಯಾಮ್‌ರನ್ನು ಮದುವೆ ಆಗುವ ಸುದ್ದಿ ಹೊರಗೆಡಹಿದ್ದರು. 2020ರ ಸೆಪ್ಟೆಂಬರ್‌ 10ರಂದು ಅವರ ವಿವಾಹ ನೆರವೇರಿತ್ತು. ಮದುವೆ ನಂತರ ದಂಪತಿ ಹನಿಮೂನ್‌ಗೆಂದು ಗೋವಾಗೆ ತೆರಳಿದ್ದರು. ಆಗ ಪೂನಂ ಪಾಂಡೆ ಮೊದಲ ಬಾರಿ ತಮ್ಮ ಪತಿ ವಿರುದ್ಧ ಗೋವಾದಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಪತಿ ಬೆದರಿಕೆ ಒಡ್ಡುತ್ತಿದ್ದಾರೆ, ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಪೊಲೀಸರು ಸ್ಯಾಮ್‌ರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರೂ, ಮರುದಿನ ಬೇಲ್ ಮೇಲೆ ಬಿಡುಗಡೆಗೊಳಿಸಿದ್ದರು. ದಾಂಪತ್ಯ ಕೊನೆಗೊಳಿಸುವುದಾಗಿ ಪೂನಂ ಹೇಳಿದ್ದರಾದರೂ, ಮತ್ತೆ ಇಬ್ಬರೂ ಮಾತುಕತೆಯ ಮೂಲಕ ಒಂದಾಗಿದ್ದರು. ಈಗ ಮತ್ತೆ ಹಲ್ಲೆ ಆರೋಪಗಳು ಕೇಳಿ ಬಂದಿದ್ದು, ಪೊಲೀಸರು ಸ್ಯಾಮ್‌ರನ್ನು ಬಂಧಿಸಿದ್ದಾರೆ.

LEAVE A REPLY

Connect with

Please enter your comment!
Please enter your name here