ಅಲ್ಲು ಅರ್ಜುನ್‌ ಅಭಿನಯದ ಬಹುನಿರೀಕ್ಷಿತ ‘ಪುಷ್ಪ’ ತೆಲುಗು ಸಿನಿಮಾದ ಡ್ಯಾನ್ಸ್ ವೀಡಿಯೋ ಲೀಕ್ ಆಗಿದೆ. ಹಬ್ಬದ ಸಂಭ್ರಮವೊಂದರಲ್ಲಿ ನೂರಾರು ಡ್ಯಾನ್ಸರ್‌ಗಳ ಜೊತೆ ಅಲ್ಲು ಅರ್ಜುನ್ ಕುಣಿಯುವ ಈ ಸನ್ನಿವೇಶದ ವೀಡಿಯೋ ತುಣುಕು ವೈರಲ್ ಆಗಿದೆ.

ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ತೆಲುಗು ಚಿತ್ರದ ‘ಹೇ ಬಿಡ್ಡ ಇದಿ ನಾ ಅಡ್ಡಾ’ ಹಾಡನ್ನು ಮೊನ್ನೆ ಚಿತ್ರಿಸಲಾಯ್ತು. ಈ ಹಾಡಿನಲ್ಲಿ ಸುಮಾರು ಸಾವಿರ ಡ್ಯಾನ್ಸರ್‌ಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ಹಾಡಿನ ಚಿತ್ರೀಕರಣ ಸಂದರ್ಭದ ಒಂದು ವೀಡಿಯೋ ಲೀಕ್ ಆಗಿದ್ದು, ಸಿನಿಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ತುಣುಕನ್ನು ಹಂಚಿ ಸಂಭ್ರಮಿಸಿದ್ದಾರೆ. ಉತ್ತಮ ಡ್ಯಾನ್ಸರ್ ಕೂಡ ಆದ ಅಲ್ಲು ಅರ್ಜುನ್‌ ಅವರ ಈ ಎನರ್ಜಿಟಿಕ್ ಡ್ಯಾನ್ಸ್‌ ಅಭಿಮಾನಿಗಳಿಗೆ ಇಷ್ಟವಾಗಿದೆ. ಅವರು ಸಿನಿಮಾ ಕುರಿತಂತೆ ತಮ್ಮದೇ ಆದ ವ್ಯಾಖ್ಯಾನ ನೀಡುತ್ತಾ ಈ ವೀಡಿಯೋ ಶೇರ್ ಮಾಡುತ್ತಿದ್ದಾರೆ.

ಇನ್ನು ಚಿತ್ರತಂಡ ಈ ಹಾಡಿನ ಚಿತ್ರೀಕರಣ ಕುರಿತಂತೆ ಟ್ವಿಟರ್‌ನಲ್ಲಿ ವಿವರಗಳನ್ನು ಹಂಚಿಕೊಂಡಿತ್ತು. “ಸುಮಾರು ಒಂದು ಸಾವಿರ ಡ್ಯಾನ್ಸರ್‌ಗಳೊಂದಿಗೆ ಪುಷ್ಪ ಚಿತ್ರದ ರಾಕಿಂಗ್ ಡ್ಯಾನ್ಸ್ ನಂಬರ್ ಚಿತ್ರಿಸಲಾಗುತ್ತಿದೆ. ದೊಡ್ಡ ಪರದೆ ಮೇಲೆ ಇದರ ವೈಭವವನ್ನು ನೀವು ನೋಡಬಹುದು” ಎಂದು ಟ್ವಿಟರ್‌ನಲ್ಲಿ ಸಂದೇಶ ಹಾಕಿದ್ದರು. ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅವರ ಮೂರನೇ ಸಿನಿಮಾ ‘ಪುಷ್ಪ’. ರಕ್ತಚಂದನ ಮಾಫಿಯಾ ಕುರಿತ ಕಥಾನಕವಿದು. ರಶ್ಮಿಕಾ ಮಂದಣ್ಣ, ಧನಂಜಯ, ಫಹಾದ್ ಫಾಸಿಲ್‌, ರಾವ್ ರಮೇಶ್‌ ಇತರರಿದ್ದಾರೆ. ಮೂಲ ತೆಲುಗು ಜೊತೆ ತಮಿಳು, ಕನ್ನಡ ಮತ್ತು ಮಲಯಾಳಂ ಅವತರಣಿಕೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Previous articleಪತಿ ಸ್ಯಾಮ್‌ ಬಾಂಬೆ ವಿರುದ್ಧ ಪೂನಂ ಪಾಂಡೆ ಹಲ್ಲೆ ಆರೋಪ; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟಿ
Next articleಹಿಂಸೆಯನ್ನು ಮಾನೆಟೈಸ್ ಮಾಡುವ ತಂತ್ರದಿಂದ ನಾವು ಹೊರಬರಲಾರೆವೇ?; ‘ಜೈ ಭೀಮ್‌’ ಕುರಿತ ವಿಶ್ಲೇಷಣೆ

LEAVE A REPLY

Connect with

Please enter your comment!
Please enter your name here