ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಕಣ್ಣಪ್ಪ’ ಪೌರಾಣಿಕ ಚಿತ್ರತಂಡಕ್ಕೆ ನಟ ಪ್ರಭಾಸ್‌ ಸೇರ್ಪಡೆಗೊಂಡಿದ್ದಾರೆ. ಆಪ್ತ ಸ್ನೇಹಿತನ ಚಿತ್ರದಲ್ಲಿ ಪ್ರಭಾಸ್‌ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ವಿಷ್ಣು ಮಂಚು ಅವರ ಬಹುಕಾಲದ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಅಚಲ ಭಕ್ತಿಗೆ ಮತ್ತೊಂದು ಹೆಸರಾದ ಶಿವನ ಅಪ್ರತಿಮ ಭಕ್ತನಾದ ‘ಕಣ್ಣಪ್ಪ’ನ ಚರಿತ್ರೆಯನ್ನು ತೆರೆ ಮೇಲೆ ಚಿತ್ರಿಸಲಿರುವ ‘ಕಣ್ಣಪ್ಪ’ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ಈ ಕನಸನ್ನು ನನಸಾಗಿಸಲು ಇನ್ನಷ್ಟು ಮೆರಗು ನೀಡಿರುವುದು ವಿಷ್ಣು ಮಂಚು ಅವರ ಆಪ್ತ ಸ್ನೇಹಿತರಾದ ನಟ ಪ್ರಭಾಸ್‍ ಅವರ ಈ ಸಿನಿಮಾದ ಸೇರ್ಪಡೆ. ಚಿತ್ರದಲ್ಲಿ ಪ್ರಭಾಸ್‍ ಒಂದು ವಿಶೇಷ ಮತ್ತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಈ ಚಿತ್ರಕ್ಕಾಗಿ ಕಾಯುತ್ತಿರುವ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಾಗಿದೆ. ಚಿತ್ರದಲ್ಲಿ ಅವರು ಶಿವನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

‘ವಿಷ್ಣು ಮಂಚು ಅವರ ಶ್ರದ್ಧೆ ಮತ್ತು ಸಮರ್ಪಣಾ ಭಾವವು ಚಿತ್ರವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲಿದೆ. ಇದು ಬರೀ ಚಿತ್ರ ಎನ್ನುವುದಕ್ಕಿಂತ ಭಾರತೀಯ ಪುರಾಣದ ಆಳವನ್ನು ಪರಿಚಯಿಸುವ ಮಹಾಕಾವ್ಯವಾಗಿದೆ’ ಎನ್ನುತ್ತಾರೆ ಚಿತ್ರವನ್ನು ನಿರ್ದೇಶಿಸುತ್ತಿರುವ ಮುಖೇಶ್‌ ಕುಮಾರ್‌ ಸಿಂಗ್‌. Ava Entertainment ಮತ್ತು 24 Frames Factory ಬ್ಯಾನರ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ವಿಷ್ಣು ಮಂಚು ಅವರ ಸಮರ್ಪಣೆ, ಪ್ರಭಾಸ್ ಅವರ ಸ್ಟಾರ್ ಪವರ್‌ ಜೊತೆಗೆ ಭಕ್ತಿಯ ಪರಾಕಾಷ್ಠೆಯನ್ನು ಬಿಂಬಿಸುವ ‘ಕಣ್ಣಪ್ಪ’ ಜನರ ಮನಸ್ಸನ್ನು ಸೂರೆಗೊಳ್ಳುವ ಚಿತ್ರವಾಗಲಿದೆ ಎನ್ನುತ್ತಿದ್ದಾರೆ ವಿಷ್ಣು ಮಂಚು ಅಭಿಮಾನಿಗಳು.

Previous articleಹಾರರ್‌ ‘ದೈಜಿ’ | ಆಕಾಶ್‌ ಶ್ರೀವಾತ್ಸವ್‌ ನಿರ್ದೇಶನದಲ್ಲಿ ರಮೇಶ್‌ ಅರವಿಂದ್‌
Next articleರಮೇಶ್‌ ಅರವಿಂದ್‌ – ಗಣೇಶ್‌ ಕಾಂಬಿನೇಷನ್‌ ಸಿನಿಮಾ | ಪೋಸ್ಟರ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here