ಬಾಲಿವುಡ್‌ನ ಪ್ರತಿಷ್ಠಿತ ಯಶ್ ರಾಜ್‌ ಫಿಲ್ಮ್ಸ್‌ನ ನಾಲ್ಕು ಹಿಂದಿ ಚಿತ್ರಗಳ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಂ ವೀಡಿಯೋ ಖರೀದಿಸಿದೆ. ಥಿಯೇಟರ್‌ಗಳಲ್ಲಿ ತೆರೆಕಂಡ ನಾಲ್ಕು ವಾರಗಳ ನಂತರ ಈ ಸಿನಿಮಾಗಳು OTTಯಲ್ಲಿ ಸ್ಟ್ರೀಮ್ ಆಗಲಿವೆ.

ಸೈಫ್ ಅಲಿ ಖಾನ್‌ ಮತ್ತು ರಾಣಿ ಮುಖರ್ಜಿ ಅಭಿನಯದ ‘ಬಂಟಿ ಔರ್ ಬಬ್ಲಿ 2’, ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್‌’, ರಣಬೀರ್ ಕಪೂರ್ ಅವರ ‘ಶಮ್ಶೇರಾ’ ಮತ್ತು ರಣವೀರ್ ಸಿಂಗ್ ನಟನೆಯ ‘ಜಯೇಶ್‌ಭಾಯ್‌ ಜೋರ್‌ದಾರ್‌’ ಸಿನಿಮಾಗಳ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೇಜಾನ್‌ ಪ್ರೈಂ ಖರೀದಿಸಿದೆ. ಥಿಯೇಟರ್‌ನಲ್ಲಿ ತೆರೆಕಂಡ ನಾಲ್ಕು ವಾರಗಳ ನಂತರ ಈ ಚಿತ್ರಗಳು ಪ್ರೈಂ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿವೆ. 2005ರ ‘ಬಂಟಿ ಔರ್ ಬಬ್ಲಿ’ ಸೀಕ್ವೆಲ್‌ ನವೆಂಬರ್‌ 19ರಂದು ಥಿಯೇಟರ್‌ಗೆ ಬರುತ್ತಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ರಾಣಿಮುಖರ್ಜಿ ಜೊತೆ ಯುವ ಜೋಡಿ ಸಿದ್ಧಾರ್ಥ್ ಚತುರ್ವೇದಿ ಮತ್ತು ಶಾರ್ವರಿ ನಟಿಸಿದ್ದಾರೆ. ಬಾಲಿವುಡ್‌ನ ಬಹುನಿರೀಕ್ಷೆಯ ಕಾಮಿಡಿ ಚಿತ್ರವಿದು.

ಚಕ್ರವರ್ತಿ ಪೃಥ್ವಿರಾಜ್ ಚೌವ್ಹಾಣ್‌ ಕುರಿತ ಐತಿಹಾಸಿಕ ಸಿನಿಮಾ ‘ಪೃಥ್ವಿರಾಜ್‌’ 2022ರ ಜನವರಿ 21ರಂದು ತೆರೆಕಾಣಲಿದೆ. ಅಕ್ಷಯ್ ಕುಮಾರ್ ಚಿತ್ರದ ಶೀರ್ಷಿಕೆ ಪಾತ್ರ ನಿರ್ವಹಿಸಿದ್ದು, ಸಂಜಯ್ ದತ್‌, ಮಾನುಷಿ ಚಿಲ್ಲಾರ್ ಮತ್ತು ಸೋನು ಸೂದ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಣವೀರ್ ಸಿಂಗ್‌ ನಟನೆಯ ಫ್ಯಾಮಿಲಿ ಎಂಟರ್‌ಟೇನರ್‌ ‘ಜಯೇಶ್‌ಭಾಯ್‌ ಜೋರ್‌ದಾರ್‌’ 2022ರ ಫೆಬ್ರವರಿ 25ರಂದು ತೆರೆಕಾಣಲಿದೆ. ‘ಅರ್ಜುನ್ ರೆಡ್ಡಿ’ ಸಿನಿಮಾ ಖ್ಯಾತಿಯ ಶಾಲಿನಿ ಪಾಂಡೆ ಚಿತ್ರದ ನಾಯಕಿ. ಮೆಗಾ ಆಕ್ಷನ್‌ ಎಂಟರ್‌ಟೇನರ್‌ ‘ಶಮ್ಶೇರಾ’ 2022ರ ಮಾರ್ಚ್‌ 18ರಂದು ತೆರೆಕಾಣಲಿದೆ.

Previous articleಅಲ್ಲು ಅರ್ಜುನ್ – ರಶ್ಮಿಕಾ ‘ಪುಷ್ಪ’ ಸಿನಿಮಾ; ಕನ್ನಡ ಅವತರಣಿಕೆಯ ಹಾಡೂ ರಿಲೀಸ್
Next articleನಟ ಪುನೀತ್ ರಾಜಕುಮಾರ್ ಇನ್ನಿಲ್ಲ; ಪ್ರೀತಿಯ ‘ಅಪ್ಪು’ ನಿಧನಕ್ಕೆ ಕನ್ನಡಿಗರ ಕಂಬನಿ

LEAVE A REPLY

Connect with

Please enter your comment!
Please enter your name here