ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಚಿತ್ರದ ದೊಡ್ಡ ಅಪ್ಡೇಟ್‌ ಸಿಕ್ಕಿದೆ. ಆಗಸ್ಟ್‌ 15ಕ್ಕೆ ತೆರೆ ಕಾಣಲಿರುವ ಸಿನಿಮಾದ ಟೀಸರ್‌ ರಿಲೀಸ್‌ಗೆ ದಿನಾಂಕ ನಿಗದಿಯಾಗಿದೆ.

‘ಪುಷ್ಪ’ ಸಿನಿಮಾದ ದೊಡ್ಡ ಯಶಸ್ಸಿನ ನಂತರ ‘ಪುಷ್ಪ 2’ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿದೆ. ನೆಚ್ಚಿನ ನಟನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಅಂತ ಅಭಿಮಾನಿಗಳು ಬೇಸರಗೊಂಡಿದ್ದರು. ಹೀಗಿರುವಾಗಲೇ ಟಾಲಿವುಡ್‌ ನಟ ಅಲ್ಲು ಅರ್ಜುನ್‌ ‘ಪುಷ್ಪ 2’ ಬಗ್ಗೆ ದೊಡ್ಡ ಅಪ್ಡೇಟ್‌ ಕೊಟ್ಟಿದ್ದಾರೆ. ಏಪ್ರಿಲ್‌ 8ಕ್ಕೆ ಅಲ್ಲು ಅರ್ಜುನ್‌ ಹುಟ್ಟುಹಬ್ಬ. ಈ ವಿಶೇಷ ದಿನದಂದೇ ‘ಪುಷ್ಪ 2’ ಸಿನಿಮಾದ ಟೀಸರ್‌ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈ ಖುಷಿಯ ವಿಚಾರವನ್ನು ಖುದ್ದು ಅಲ್ಲು ಅರ್ಜುನ್‌ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಜೊತೆಗೆ ಹೊಸ ಪೋಸ್ಟರ್‌ ಅನ್ನೂ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ಗೆಜ್ಜೆ ಕಟ್ಟಿಕೊಂಡಿರುವ ಕಾಲಿನ ಚಿತ್ರ ಇದೆ. ಇದನ್ನ ನೋಡಿದ್ರೆ ಅಲ್ಲು ಅರ್ಜುನ್‌ ಲುಕ್‌ ರಗಡ್‌ ಆಗಿ ಇರಲಿದೆ ಅನ್ನೋದು ತಿಳಿಯುತ್ತದೆ.

ಪುಷ್ಪರಾಜ್‌ ಈ ಸಲ ‘ಡಬಲ್‌ ಫೈರ್‌’ ಜೊತೆ ಬರಲಿದ್ದಾರೆ. ಇನ್ನು ಏಪ್ರಿಲ್‌ 8ಕ್ಕೆ ಅಲ್ಲು ಅರ್ಜುನ್‌ ಹುಟ್ಟುಹಬ್ಬವಿದ್ದು ಅದನ್ನು ಪುಷ್ಪ 2 ಮಾಸ್‌ ಜಾತ್ರೆ ಎಂದು ಆಚರಿಸಲಾಗುತ್ತಿದೆ. ಸುಕುಮಾರ್‌ ನಿರ್ದೇಶನದ ‘ಪುಷ್ಪ 2’ ಸಿನಿಮಾವನ್ನು ‘ಮೈತ್ರಿ ಮೂವೀ ಮೇಕರ್ಸ್’ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದಲ್ಲೂ ರಶ್ಮಿಕಾ ಮಂದಣ್ಣ, ಧನಂಜಯ್​, ಫಹಾದ್​ ಫಾಸಿಲ್​ ಕಾಣಿಸಿಕೊಳ್ಳಲಿದ್ದಾರೆ. ಈ ಬಹು ಭಾಷಾ ಚಿತ್ರ ಇದೇ ಆಗಸ್ಟ್ 15ರಂದು ರಿಲೀಸ್ ಆಗಲಿದೆ.

LEAVE A REPLY

Connect with

Please enter your comment!
Please enter your name here