ವೇಣು ಉಡುಗುಲ ನಿರ್ದೇಶನದಲ್ಲಿ ರಾಣಾ ದಗ್ಗುಬಾಟಿ ಮತ್ತುಸಾಯಿ ಪಲ್ಲವಿ ನಟಿಸಿರುವ ‘ವಿರಾಟ ಪರ್ವಂ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಕ್ಸಲ್‌ ಚಳವಳಿ ಹಿನ್ನೆಲೆಯ ಕತೆ. ರಾಜಕೀಯ ಮತ್ತು ಪ್ರೀತಿಯ ಕತೆ ಹೇಳಲಿರುವ ಸಿನಿಮಾ ಜೂನ್‌ 17ರಂದು ತೆರೆಕಾಣಲಿದೆ.

ಮೂರು ನಿಮಿಷಗಳ ‘ವಿರಾಟ ಪರ್ವಂ’ ತೆಲುಗು ಸಿನಿಮಾದ ಟ್ರೈಲರ್‌ ನಕ್ಸಲ್‌ ಹೋರಾಟ, ರಾಜಕೀಯ ಮತ್ತು ಪ್ರೀತಿಯ ಕತೆ ಹೇಳುತ್ತದೆ. ನಟಿ ಸಾಯಿ ಪಲ್ಲವಿ ಅವರಿಗೆ ಇಲ್ಲಿ ‘ವೆನ್ನೆಲ’ ಪಾತ್ರ. ರಾಣಾ ದಗ್ಗುಬಾಟಿ ‘ಕಾಮ್ರೇಡ್‌ ರವಣ್ಣ’ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ‘ಅರಣ್ಯ’ ಎನ್ನುವ ಹೆಸರೂ ಇದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುವ ನಕ್ಸಲ್‌ ‘ಅರಣ್ಯ’ನೆಡೆಗೆ ವೆನ್ನಲಳಿಗೆ ಒಲವು. ಹಳ್ಳಿಗರ ಸಮಸ್ಯೆಗೆ ಸ್ಪಂದಿಸುತ್ತಾ ದುಷ್ಟ ರಾಜಕಾರಣಿಗಳ ವಿರುದ್ದ ತೊಡೆ ತಟ್ಟುವ ನಕ್ಸಲರ ಹೋರಾಟದಲ್ಲಿ ವೆನ್ನಲ ಕೂಡ ಭಾಗಿಯಾಗುತ್ತಾಳೆ. ಈ ಹೋರಾಟದ ಜೊತೆ ಪ್ರೀತಿಯ ಕತೆಯೂ ಕಾಣಿಸುತ್ತದೆ. ಚುರುಕು ಸಂಭಾಷಣೆ, ಆಕರ್ಷಕ ಹಿನ್ನೆಲೆ ಸಂಗೀತದ ಟ್ರೈಲರ್‌ ಸಿನಿಮಾ ಒಳ್ಳೆಯ ಥಿಯೇಟರ್‌ ಎಕ್ಸ್‌ಪೀರಿಯನ್ಸ್‌ ಕೊಡಲಿದೆ ಎನ್ನುವ ಸೂಚನೆ ಸಿಗುತ್ತದೆ.

“The biggest moments in history have originated from simple incidents. The key lies in the purity of emotion. This is one such story of honesty, love and adventure. I’m proud to share with you all the trailer of VIRATA PARVAM.” ಎನ್ನುವ ಸಂದೇಶದೊಂದಿಗೆ ನಟಿ ಸಾಯಿ ಪಲ್ಲವಿ ಟ್ರೈಲರ್‌ ಹಂಚಿಕೊಂಡಿದ್ದಾರೆ. ಖ್ಯಾತ ಚಿತ್ರನಿರ್ದೇಶಕ ಪಾ ರಂಜಿತ್‌, “ಗಟ್ಟಿ ಕಥಾವಸ್ತು, ಸೂಪರ್‌ ವಿಶ್ಯುಯಲ್ಸ್‌ಗಳೊಂದಿಗೆ ಟ್ರೈಲರ್‌ ಗಮನ ಸೆಳೆಯುತ್ತದೆ. ಈ ಸಿನಿಮಾ ಖಂಡಿತವಾಗಿ ಚರ್ಚೆ ಹುಟ್ಟುಹಾಕಲಿದೆ” ಎಂದು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಪ್ರಿಯಾಮಣಿ, ನಿವೇತಾ ಪೇತುರಾಜ್‌, ನಂದಿತಾ ದಾಸ್‌ ಮತ್ತು ನವೀನ್‌ ಚಂದ್ರ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಜೂನ್‌ 17ರಂದು ಸಿನಿಮಾ ತೆರೆಕಾಣಲಿದೆ.

Previous articleಅಭಿಮಾನಿಗಳಿಗಾಗಿ ಅಭಿಮಾನಿ ನಿರ್ದೇಶಕನ ಸಿನಿಮಾ
Next article‘ಪ್ಲೀಸ್‌ ಮಮ್ಮಿ’ ಹಾಡಿಗೆ ಉತ್ತಮ ರೆಸ್ಪಾನ್ಸ್‌; ಜೂನ್‌ 24ಕ್ಕೆ ವಿಕ್ರಮ್‌ ‘ತ್ರಿವಿಕ್ರಮ’

LEAVE A REPLY

Connect with

Please enter your comment!
Please enter your name here