ಪುರಿ ಜಗನ್ನಾಥ್‌ ನಿರ್ದೇಶನದಲ್ಲಿ ವಿಜಯ್‌ ದೇವರಕೊಂಡ ನಟಿಸಿರುವ ‘ಲೈಗರ್‌’ ಆಕ್ಷನ್‌ – ಲವ್‌ ಸಿನಿಮಾ ತೆರೆಗೆ ಸಿದ್ಧವಾಗಿದೆ. ಹೀಗಿರುವಾಗಲೇ ಇವರಿಬ್ಬರ ಕಾಂಬಿನೇಷನ್‌ನಲ್ಲಿ ‘JGM’ ಆಕ್ಷನ್‌ ಡ್ರಾಮಾ ಸೆಟ್ಟೇರಿದೆ. ಬಿಡುಗಡೆ ದಿನಾಂಕ ‘2023ರ ಆಗಸ್ಟ್‌ 3’ ಎಂದು ಚಿತ್ರತಂಡ ಘೋಷಿಸಿದೆ.

ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟ ವಿಜಯ್ ದೇವರಕೊಂಡ ಜೋಡಿಯ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಇವರಿಬ್ಬರ ‘ಲೈಗರ್’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದ್ದು, ‘JGM’ (ಜನಗಣಮನ?) ಆಕ್ಷನ್‌ – ಡ್ರಾಮಾ ಸಿನಿಮಾ ಘೋಷಣೆಯಾಗಿದೆ. ಅದರ ಮೊದಲ ಭಾಗವೆಂಬಂತೆ ಇಂದು ಈ ಪ್ಯಾನ್‌ ಇಂಡಿಯಾ ಸಿನಿಮಾಗೆ ಮುಂಬೈನಲ್ಲಿ ಮುನ್ನುಡಿ ಬರೆಯಲಾಯಿತು. ‘JGM’ಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದಾರೆ. ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್‌ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡುತ್ತಿದ್ದು, ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಕಾಣಲಿದೆ.

“ನಮ್ಮ ಮುಂದಿನ ಸಿನಿಮಾ ‘JGM’ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುವುದು ಖುಷಿಯಾಗುತ್ತಿದೆ. ವಿಜಯ್ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಪಕ್ಕಾ ಆಕ್ಷನ್ ಎಂಟರ್ ಟೈನರ್ ಸಿನಿಮಾ ಆಗಲಿದೆ” ಎನ್ನುತ್ತಾರೆ ನಿರ್ದೇಶಕ ಪುರಿ ಜಗನ್ನಾಥ್. “ಈ ಪ್ರಾಜೆಕ್ಟ್‌ನ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ” ಎನ್ನುತ್ತಾರೆ ನಟ ವಿಜಯ್‌ ದೇವರಕೊಂಡ. ವಿದೇಶಗಳಲ್ಲಿ ಶೂಟಿಂಗ್ ನಡೆಸಲು ಪ್ಲ್ಯಾನ್ ಹಾಕಿದ್ದು, ಏಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಕ್ಷನ್ ಎಂಟರ್‌ಟೇನರ್‌ ‘JGM’ 2023ರ ಆಗಸ್ಟ್‌ಗೆ ತೆರೆಕಾಣಲಿದೆ.

Previous articleಸತ್ಯಜಿತ್ ರೇ ಅವರ ನಾಯಕಿಯರು
Next articleಬಾದಾಮಿಯಲ್ಲಿ ಯೋಗರಾಜ್ ಭಟ್ಟರ ‘ಗರಡಿ’; ಸೂರ್ಯ – ಸೋನಾಲ್‌ ಸಿನಿಮಾ

LEAVE A REPLY

Connect withPlease enter your comment!
Please enter your name here