‘ಪುದಮ್‌ ಪುದು ಕಾಲೈ’ ತಮಿಳು ಆಂಥಾಲಜಿಯ ನೂತನ ಸರಣಿ ‘ಪುದಮ್‌ ಪುದು ಕಾಲೈ ವಿದಿಯಾಥ’ 2022ರ ಜನವರಿ 14ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ನೂತನ ಸರಣಿಯಲ್ಲಿ ಐದು ಕತೆಗಳಿವೆ.

ಕೋವಿಡ್‌ -19 ಎರಡನೇ ಅಲೆಯ ಹೊತ್ತಿನಲ್ಲಿ ಅಮೇಜಾನ್‌ ಪ್ರೈಮ್‌ ‘ಪುದಮ್‌ ಪುದು ಕಾಲೈ’ ಆಂಥಾಲಜಿ ಸರಣಿ ಸ್ಟ್ರೀಮ್‌ ಮಾಡಿತ್ತು. ಇದೀಗ ಇದರ ನೂತನ ಆಂಥಾಲಜಿ ಸರಣಿ ‘ಪುದಮ್‌ ಪುದು ಕಾಲೈ ವಿದಿಯಾಥ’ ಸಿದ್ಧವಾಗಿದೆ. ಹೊಸ ಸರಣಿಯಲ್ಲೂ ಐದು ಕತೆಗಳಿದ್ದು, ಟೀಸರ್‌ ಬಿಡುಗಡೆಯಾಗಿದೆ. ಕೋವಿಡ್‌ನಿಂದ ಜನರು ಎದುರಿಸಿದ ಸಂಕಷ್ಟಗಳು, ಕುಸಿದ ಆರ್ಥಿಕತೆಯಿಂದಾಗಿ ಜನರ ಸಾಮಾಜಿಕ ಬದುಕಿನಲ್ಲಾದ ಪಲ್ಲಟಗಳು, ಮನುಷ್ಯ ಸಂಬಂಧಗಳ ಸುತ್ತ ಐದು ಕತೆಗಳನ್ನು ಹೆಣೆಯಲಾಗಿದೆ. ಪ್ರಾಣಹಾನಿ, ನಿರುದ್ಯೋಗ, ಆರ್ಥಿಕ ಹಿನ್ನೆಡೆಯ ಮಧ್ಯೆಯೂ ಬದುಕಿನ ಕುರಿತು ಸಕಾರಾತ್ಮಕ ಮನೋಭಾವ ಮೂಡಿಸುವುದು ಮೊದಲ ಆಂಥಾಲಜಿ ಸರಣಿಯ ಉದ್ದೇಶವಾಗಿತ್ತು. ಎರಡನೇ ಸರಣಿಯಲ್ಲಿಯೂ ಇದೇ ಮಾದರಿಯ ಕತೆಗಳಿವೆ ಎಂದು ಪ್ರೈಮ್‌ ವೀಡಿಯೋ ಹೇಳಿಕೊಂಡಿದೆ.

ಹೊಸ ಆಂಥಾಲಜಿಯಲ್ಲಿ ಐದು ಭಿನ್ನ ಕತೆಗಳಿವೆ. ಮೊದಲನೆಯದ್ದು ಬಾಲಾಜಿ ಮೋಹನ್‌ ನಿರ್ದೇಶನದ ‘ಮುಗಕವಾಸ ಮುದಂ’. ಗೌರಿ ಕಿಶನ್‌ ಮತ್ತು ಟಿ.ಜೆ.ಅರುಣಾಚಲಂ ಅಭಿನಯಿಸಿದ್ದಾರೆ. ಎರಡನೆಯ ಕತೆ ‘ಲೋನರ್ಸ್‌’. ಹಲಿತಾ ಶಮೀಮ್‌ ನಿರ್ದೇಶನದ ಕಿರುಚಿತ್ರದಲ್ಲಿ ‘ಜೈ ಭೀಮ್‌’ ಸಿನಿಮಾ ಖ್ಯಾತಿಯ ಲಿಜಮೋಲ್‌ ಜೋಸ್‌ ಮತ್ತು ಅರ್ಜುನ್‌ ದಾಸ್‌ ನಟಿಸಿದ್ದಾರೆ. ಮಧುಮಿತ ನಿರ್ದೇಶನದ ‘ಮೌನಮೇ ಪಾರ್ವಯೈ’ ಚಿತ್ರದಲ್ಲಿ ನಾಡಿಯಾ ಮೊಯಿದು ಮತ್ತು ಜೋಜು ಜಾರ್ಜ್‌ ಅಭಿನಯಿಸಿದ್ಧಾರೆ. ರಿಚರ್ಡ್‌ ಆಂಟೋನಿ ನಿರ್ದೇಶನದ ‘ನಿಝಾಲ್‌ ತುರಮ್‌ ಇಧಮ್‌’ನಲ್ಲಿ ಐಶ್ವರ್ಯ ಲಕ್ಷ್ಮಿ ಮತ್ತು ನಿರ್ಮಲ್‌ ಪಿಳ್ಳೈ ನಟಿಸಿದ್ದಾರೆ. ಸೂರ್ಯಕೃಷ್ಣ ನಿರ್ದೇಶನದ ‘ದಿ ಮಾಸ್ಕ್‌’ ಕಿರುಚಿತ್ರದಲ್ಲಿ ಸನಂತ್‌ ಮತ್ತು ದಿಲೀಪ್‌ ಸುಬ್ಬರಾಯನ್‌ ನಟಿಸಿದ್ದಾರೆ. 2022ರ ಜನವರಿ 14ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ‘ಪುದಮ್‌ ಪುದು ಕಾಲೈ ವಿದಿಯಾಥ’ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here