ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಜೋಡಿಯ ಬಹುನಿರೀಕ್ಷಿತ ಸಿನಿಮಾ ‘ರಾಧೆ ಶ್ಯಾಮ್‌’ ಬಿಡುಗಡೆ ದಿನಾಂಕ ನಿಗಧಿಯಾಗಿದೆ. 2022ರ ಸಕ್ರಾಂತಿಗೆ ಸಿನಿಪ್ರಿಯರು ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ರಾಧಾಕೃಷ್ಣ ಕುಮಾರ್‌ ನಿರ್ದೇಶನದಲ್ಲಿ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ‘ರಾಧೆ ಶ್ಯಾಮ್‌’ ಸಿನಿಮಾ ಆರಂಭದಿಂದಲೂ ಸುದ್ದಿಯಲ್ಲಿದೆ. ‘ಬಾಹುಬಲಿ’ ಯಶಸ್ಸಿನ ನಂತರ ಪ್ರಭಾಸ್‌ಗೆ ‘ಸಲಾರ್‌’ನಲ್ಲಿ ಗೆಲುವು ಸಿಗಲಿಲ್ಲ. ಹಾಗಾಗಿ ರೊಮ್ಯಾಂಟಿಕ್ ಲವ್‌ ಸ್ಟೋರಿ ‘ರಾಧೆ ಶ್ಯಾಮ್‌’ ಸಿನಿಮಾ ಕುರಿತಾಗಿ ಪ್ರಭಾಸ್‌ ಕೂಡ ಭಾರಿ ಭರವಸೆ ಹೊಂದಿದ್ದಾರೆ. ಸುಮಾರು ದಶಕದ ನಂತರ ಅವರಿಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ತೆರೆಗೆ ಮರಳುತ್ತಿರುವುದು ವಿಶೇ‍ಷ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2021ರ ಜುಲೈನಲ್ಲಿ ಸಿನಿಮಾ ತೆರೆಕಾಣಬೇಕಿತ್ತು. ಕೋವಿಡ್ ಸಂಕಷ್ಟದಿಂದಾಗಿ ಚಿತ್ರೀಕರಣ ಸ್ಥಗಿತಗೊಂಡು ಬಿಡುಗಡೆ ಮುಂದಕ್ಕೆ ಹೋಯ್ತು. ಅಂತಿಮವಾಗಿ 2022ರ ಜನವರಿ 14ರ ಸಕ್ರಾಂತಿಯಂದು ಸಿನಿಮಾ ಬಿಡುಗಡೆಯಾಗುವುದು ಖಚಿತವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜಾರಿಯಲ್ಲಿವೆ. ಕನ್ನಡತಿ ಪೂಜಾ ಹೆಗ್ಡೆ ಅವರಿಗೂ ಇದು ಪ್ರಮುಖ ಸಿನಿಮಾ. ಇಟಲಿಯಲ್ಲಿ ಬಹುಪಾಲು ಚಿತ್ರೀಕರಣ ನಡೆದಿದ್ದು, ಟೀಸರ್ ಮತ್ತು ಚಿತ್ರದ ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ. ಲವರ್ ಬಾಯ್‌ ಆಗಿ ಪ್ರಭಾಸ್‌ರನ್ನು ನೋಡಲು ಅವರ ಅಭಿಮಾನಿಗಳು ಕಾತರರಾಗಿದ್ದಾರೆ.

Previous articleಓಟಿಟಿಗೆ ನಟ ಸುನೀಲ್ ಶೆಟ್ಟಿ
Next articleಕೋಟಿಗೊಬ್ಬನೂ ಅಲ್ಲ, ಒಂಟಿಸಲಗನೂ ಅಲ್ಲ; ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬರಬೇಡಿ!

LEAVE A REPLY

Connect with

Please enter your comment!
Please enter your name here