‘ಇನ್ವಿಸಿಬಲ್ ವುಮನ್‌’ ವೆಬ್‌ ಸರಣಿಯೊಂದಿಗೆ ಹಿಂದಿ ನಟ ಸುನೀಲ್ ಶೆಟ್ಟಿ ಓಟಿಟಿ ಪ್ರವೇಶಿಸುತ್ತಿದ್ದಾರೆ. ‘ತೂಂಗಾ ವನಂ’, ‘ಕಡರಂ ಕೊಂಡನ್‌’ ತಮಿಳು ಚಿತ್ರಗಳ ಖ್ಯಾತಿಯ ನಿರ್ದೇಶಕ ರಾಜೇಶ್ ಸೆಲ್ವ ನಿರ್ದೇಶನದ ಸರಣಿಯಿದು.

ಬಾಲಿವುಡ್‌ನ ಬಹುತೇಕ ನಟ-ನಟಿಯರು ಇದೀಗ ವೆಬ್‌ ಸರಣಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಸುನೀಲ್ ಶೆಟ್ಟಿ ಈ ಪಟ್ಟಿಗೆ ಹೊಸ ಸೇರ್ಪಡೆ. ‘ಇನ್ವಿಸಿಬಲ್ ವುಮನ್‌’ ವೆಬ್‌ ಸರಣಿಯ ಪ್ರಮುಖ ಪಾತ್ರದಲ್ಲಿ ಸುನೀಲ್ ಶೆಟ್ಟಿ ನಟಿಸಲಿದ್ದಾರೆ. ಸರಿಗಮ ಇಂಡಿಯಾ ಮತ್ತು ಯೂಡ್ಲೀ ಫಿಲ್ಮ್ಸ್‌ ಈ ಸರಣಿ ನಿರ್ಮಿಸುತ್ತಿವೆ. ಇದೊಂದು ನಾಯಿರ್‌ ಆಕ್ಷನ್‌ ಥ್ರಿಲ್ಲರ್‌ ಎನ್ನಲಾಗಿದ್ದು, ‘ತೂಂಗಾ ವನಂ’, ‘ಕಡರಂ ಕೊಂಡನ್‌’ ತಮಿಳು ಚಿತ್ರಗಳ ಖ್ಯಾತಿಯ ನಿರ್ದೇಶಕ ರಾಜೇಶ್ ಸೆಲ್ವ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

“ವೆಬ್‌ ಸರಣಿಗಳು ಹೊಸ ಮಾರ್ಗ ಸೃಷ್ಟಿಸುತ್ತಿವೆ. ಏಕತಾನತೆಯ ಕತೆ, ನಿರೂಪಣೆಯ ಹೊರತಾದ ಈ ಮಾದರಿ ಜನರಿಗೂ ಇಷ್ಟವಾಗುತ್ತಿದೆ. ಇನ್ವಿಸಿಬಲ್ ವುಮನ್‌ ಕತೆ ಒಮ್ಮೆಗೇ ನನ್ನ ಗಮನ ಸೆಳೆಯಿತು. ಇಂಥದ್ದೊಂದು ವಿಶಿಷ್ಟ ಪ್ರಾಜೆಕ್ಟ್‌ನೊಂದಿಗೆ ನನ್ನ ಡಿಜಿಟಲ್ ಪ್ರವೇಶವಾಗುತ್ತಿರುವುದು ಖುಷಿ ತಂದಿದೆ” ಎಂದಿದ್ದಾರೆ ಸುನೀಲ್ ಶೆಟ್ಟಿ. ಬಾಲಿವುಡ್ ನಟಿ ಇಶಾ ಗುಪ್ತಾ ಅವರೂ ಈ ಸರಣಿಯ ಪ್ರಮುಖ ಪಾತ್ರದಲ್ಲಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

LEAVE A REPLY

Connect with

Please enter your comment!
Please enter your name here