ಆಸ್ಟ್ರೇಲಿಯಾ ಕ್ರಿಕೆಟರ್‌ ಡೇವಿಡ್‌ ವಾರ್ನರ್‌ ಅವರು ‘ಪುಷ್ಪ’ ಚಿತ್ರದ ಅಲ್ಲು ಅರ್ಜುನ್‌ರನ್ನು ಇಮಿಟೇಟ್‌ ಮಾಡಿರುವ ವೀಡಿಯೋ ವೈರಲ್‌ ಆಗಿದೆ. ‘ತಗ್ಗೆದೆ ಲೆ’ ಡೈಲಾಗ್‌ ಹೇಳಿರುವ ವಾರ್ನರ್‌ಗೆ ಹೀರೋ ಅಲ್ಲು ಅರ್ಜುನ್‌ ಧನ್ಯವಾದ ಹೇಳಿದ್ದಾರೆ.

ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟರ್‌ ಡೇವಿಡ್‌ ವಾರ್ನರ್‌ ಅವರಿಗೆ ಭಾರತೀಯ ಸಿನಿಮಾಗಳ ಬಗ್ಗೆ ಅಪಾರ ಪ್ರೀತಿ, ಆಸಕ್ತಿ. ಆಗಿಂದಾಗ್ಗೆ ಅವರು ಬಾಲಿವುಡ್‌, ತೆಲುಗು ಸಿನಿಮಾಗಳ ಡೈಲಾಗ್‌ಗಳನ್ನು ಹೇಳಿ ಆ ವೀಡಿಯೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಹಾಕುತ್ತಿರುತ್ತಾರೆ. ಭಾರತೀಯ ಸಿನಿಮಾ ಹಾಡುಗಳಿಗೆ ಅವರು ಡ್ಯಾನ್ಸ್‌ ಮಾಡಿರುವ ವೀಡಿಯೋಗಳು ವೈರಲ್‌ ಆಗಿವೆ. ಈ ಬಾರಿ ಅವರು ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ಚಿತ್ರದ ಡೈಲಾಗ್‌ ಹೇಳಿರುವ ವೀಡಿಯೋ ವೈರಲ್‌ ಆಗಿದೆ. ಚಿತ್ರದಲ್ಲಿ ಅಲ್ಲು ಅವರ ಜನಪ್ರಿಯ ‘ಯೆವ್ವ ತಗ್ಗೆದೆ ಲೆ’ ಡೈಲಾಗನ್ನು ವಾರ್ನರ್‌ ಹೇಳಿದ್ದು, “#duet #pushpa Caption this” ಎನ್ನುವ ಕಾಮೆಂಟ್‌ನೊಂದಿಗೆ ವೀಡಿಯೋ ಪೋಸ್ಟ್‌ ಮಾಡಿದ್ದಾರೆ. ಅವರ ವೀಡಿಯೋಗೆ ಭಾರತೀಯರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹೀರೋ ಅಲ್ಲು ಅರ್ಜುನ್‌ ಕೂಡ ಅವರ ಪೋಸ್ಟ್‌ಗೆ ಕಾಮೆಂಟ್‌ ಮಾಡಿ ಧನ್ಯವಾದ ಹೇಳಿದ್ದಾರೆ. ಡೇವಿಡ್‌ ವಾರ್ನರ್‌ ‘ಪುಷ್ಪ’ ಚಿತ್ರದ ‘ಯೇ ಬಿಡ್ಡ ಇದಿ ನಾ ಅಡ್ಡ’ ಹಾಡನ್ನು ಫೇಸ್‌ ಸ್ವ್ಯಾಪ್‌ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’ ತೆಲುಗು ಚಿತ್ರದ ಸನ್ನಿವೇಶವೊಂದರಲ್ಲಿ ಡೇವಿಡ್‌ ವಾರ್ನರ್‌ ಫೇಸ್‌ ಸ್ವ್ಯಾಪ್‌ ಆಕ್ಟ್‌

Previous articleಮಂಸೋರೆ ನಿರ್ದೇಶನದ ಕಿರುಚಿತ್ರ ‘ದಿ ಕ್ರಿಟಿಕ್‌’; ಛಾಯಾಗ್ರಾಹಕ ಸತ್ಯ ಹೆಗಡೆ ನಿರ್ಮಾಣ
Next articleಟೀಸರ್‌ | ‘ಲೈಗರ್‌’ ಫಸ್ಟ್‌ಲುಕ್‌ ವೀಡಿಯೋ ಶೇರ್‌ ಮಾಡಿದ ಹೀರೋ ವಿಜಯ್‌ ದೇವರಕೊಂಡ

LEAVE A REPLY

Connect withPlease enter your comment!
Please enter your name here