ರಿಷಿ, ಪ್ರಣೀತಾ ಸುಭಾಷ್‌, ಶುಭ್ರ ಅಯ್ಯಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರಾಮನ ಅವತಾರ’ ಸಿನಿಮಾದ ಲಿರಿಕಲ್‌ ಸಾಂಗ್‌ ರಿಲೀಸ್‌ ಆಗಿದೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯ ಈ ಶೀರ್ಷಿಕೆ ಗೀತೆಗೆ ಅಭಿನಂದನ್‌ ಮಹಿಶಾಲೆ ದನಿಯಾಗಿದ್ದಾರೆ.

ರಿಷಿ ನಟನೆಯ ‘ರಾಮನ ಅವತಾರ’ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರುವ ‘ರಾಮ ಈಸ್ ಜೆಂಟಲ್ ಮ್ಯಾನ್’ ಹಾಡಿಗೆ ಅಭಿನಂದನ್ ಮಹಿಶಾಲೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಟೈಟಲ್ ಸಾಂಗ್‌ನಲ್ಲಿ ರಿಷಿ ನಾಯಕಿ ಶುಭ್ರಗೆ ತನ್ನ ಪ್ರೀತಿ ವ್ಯಕ್ತಪಡಿಸುತ್ತಾ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಚಿತ್ರೀಕರಣ ಸಾವನದುರ್ಗ ಮತ್ತು ಶಿವಗಂಗೆ ಸ್ಥಳಗಳಲ್ಲಿ ನಡೆದಿದೆ. ವೆಸ್ಟೆರ್ನ್ ಶೈಲಿಯ ಸಂಗೀತಕ್ಕೆ ದೇಸಿ ಟಚ್‌ ಇದ್ದು ಹಾಡು ಎಂಗೇಜಿಂಗ್‌ ಆಗಿದೆ. ತಮ್ಮದೇ ವಿಭಿನ್ನ ಶೈಲಿಯ ನಟನೆಯಿಂದ ಜನರ ಮನಸ್ಸನ್ನು ಗೆದ್ದಿರುವ ರಿಷಿ ಹಾಡಿನಲ್ಲಿ ಕುಣಿದು ರಂಜಿಸಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಇತರೆ ಹಾಡುಗಳನ್ನು ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

ಟೀಸರ್ ಮೂಲಕ ಕಾಮಿಡಿ ಚಿತ್ರದ ಸುಳಿವು ನೀಡಿರುವ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ಅರುಣ್ ಸಾಗರ್ ಅವರಿಗೆ ಪ್ರಮುಖ ಪಾತ್ರವಿದೆ. ‘ನಾಟಿ ಫ್ಯಾಕ್ಟರಿ’ ‘ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಮಾಡಿರುವ ವಿಕಾಸ್ ಪಂಪಾಪತಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ‘ರಾಮನ ಅವತಾರ’. ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಬಹುಪಾಲು ಚಿತ್ರೀಕರಣ ನಡೆದಿದ್ದು, ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

Previous articleಯಾರಿಗಾಗಿಯೋ ತುಡಿವ ಸಂಬಂಧವಿರದ ಜೀವಗಳು!
Next articleರಿಷಿ ವೆಬ್‌ ಸರಣಿ ‘ಶೈತಾನ್‌’ | ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಜೂನ್‌ 15ರಿಂದ

LEAVE A REPLY

Connect with

Please enter your comment!
Please enter your name here