ರಮೇಶ್ ಅರವಿಂದ್ ಅಭಿನಯದ ಯಶಸ್ವೀ ‘ಶಿವಾಜಿ ಸುರತ್ಕಲ್‌’ ಸಿನಿಮಾದ ಮುಂದುವರೆದ ಭಾಗವಾಗಿ ‘ಶಿವಾಜಿ ಸುರತ್ಕಲ್‌ 2’ ಸಿನಿಮಾಗೆ ಚಾಲನೆ ಸಿಕ್ಕಿದೆ. ಈ ಹಿಂದಿನ ಚಿತ್ರದಲ್ಲಿದ್ದ ಕಲಾವಿದರ ಜೊತೆ ಯುವನಟರಾದ ರಾಕೇಶ್ ಮಯ್ಯ, ವಿನಾಯಕ ಜೋಷಿ ಚಿತ್ರತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ನಟ ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್‌ 2’ ಸಿನಿಮಾಗೆ ಇಂದು ಮುಹೂರ್ತ ನೆರವೇರಿದ್ದು, ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ. ‘ಮಗಳು ಜಾನಕಿ’ ಧಾರಾವಾಹಿ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ರಾಕೇಶ್ ಮಯ್ಯ ಚಿತ್ರತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ಈಗಾಗಲೇ ‘ಶುಭಮಂಗಳ’, ಇಲ್ಲಿ ಅವರು ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್’ಗಳಿದ್ದು ಇದು ಚಿತ್ರದುದ್ದಕ್ಕೂ ಪ್ರಾಮುಖ್ಯತೆ ವಹಿಸುವ ಪಾತ್ರವಂತೆ. ಈ ತಂಡಕ್ಕೆ ಮತ್ತೊಂದು ಆಗಮನ, ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದು ತಮ್ಮದೇ ಆದ ಶೈಲಿಯಿಂದ ಗುರುತಿಸಿಕೊಂಡಿರುವಂತಹ, ಬಿಗ್ ಬಾಸ್ ಖ್ಯಾತಿಯ ವಿನಾಯಕ ಜೋಷಿ. ಈ ಚಿತ್ರದಲ್ಲಿ ಇವರದ್ದು ರಫ್ ಅ್ಯಂಡ್ ಟಫ್  ಪೋಲೀಸ್ ಅಧಿಕಾರಿ ಪಾತ್ರ.

ತಂಡಕ್ಕೆ ಇನ್ನಷ್ಟು ಕಲಾವಿದರ ಆಗಮನವಾಗಲಿದ್ದು ಮುಂದಿನ ದಿನಗಳಲ್ಲಿ ಆ ವಿವರಗಳು ಲಭ್ಯವಾಗಲಿವೆ. ಉದಯೋನ್ಮುಖ ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಈ ಚಿತ್ರಕ್ಕೆ ಸಂಗೀತ ಸಂಯೊಜಿಸುತ್ತಿದ್ದಾರೆ. ಅವರು ಈ ಹಿಂದೆ ‘ಕನ್ನಡ್ ಗೊತ್ತಿಲ್ಲ’ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದರು. ಅವರ ಸಂಗೀತ ಸಂಯೋಜನೆಯ ‘ಲವ್ ಮಾಕ್ಟೇಲ್ 2’ ಚಿತ್ರಕ್ಕೆ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ನಡೆಯುತ್ತಿವೆ. ಅದಕ್ಕೂ ಮೊದಲೂ ಅವರು ಮ್ಯೂಸಿಕ್ ಸೆನ್ಸೇಷನ್‌ ಎ.ಆರ್.ರೆಹಮಾನ್ ಅವರಲ್ಲಿ ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಬಹಳಷ್ಟು ಹೆಸರು ಮಾಡಿದ ‘ಪರಮ ಸುಂದರಿ’ ಹಾಡಿಗೂ ಸಹ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದಾರೆ. ಇದು ನಟ ರಮೇಶ್ ಅರವಿಂದ್ ಅವರ 103 ನೇ ಸಿನಿಮಾ. ಕಳೆದ ವಾರ ತೆರೆಕಂಡ ಅವರ ನಟನೆ, ನಿರ್ದೇಶನದ ‘100’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಧಿಕಾ ನಾರಾಯಣ್ , ಮೇಘನ ಗಾಂವ್ಕರ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ಇತರೆ ಪ್ರಮುಖ ಪಾತ್ರಧಾರಿಗಳು. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದ್ದು, ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here