ಬಾಲಿವುಡ್‌ ತಾರೆ ರಿಚಾ ಛಡ್ಡಾ ನಟನೆಯ ಚೊಚ್ಚಲ ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ ‘Aaina’ ಲಂಡನ್‌ನಲ್ಲಿ ಸೆಟ್ಟೇರಿದೆ. ‘Chronicle of Narnia’ ಖ್ಯಾತಿಯ William Moseley ಚಿತ್ರದ ಹೀರೋ. ನೈಜ ಘಟನೆಗಳನ್ನು ಆಧರಿಸಿದ ಚಿತ್ರವನ್ನು Markus Meedt ನಿರ್ದೇಶಿಸುತ್ತಿದ್ದಾರೆ.

ಹಾಲಿವುಡ್‌ ಸಿನಿಮಾದಲ್ಲಿ ನಟಿಸಿದ ಭಾರತೀಯ ನಟಿಯರ ಪಟ್ಟಿಗೆ ರಿಚಾ ಛಡ್ಡಾ ಸೇರ್ಪಡೆಗೊಂಡಿದ್ದಾರೆ. ಅವರ ಚೊಚ್ಚಲ ಅಂತಾರಾಷ್ಟ್ರೀಯ ಸಿನಿಮಾ ‘Aaina’ ಲಂಡನ್‌ನಲ್ಲಿ ಸೆಟ್ಟೇರಿದೆ. ‘ಈ ಮೊದಲು ಎರಡು ಹಾಲಿವುಡ್‌ ಸಿನಿಮಾಗಳಿಗೆ ಆಫರ್‌ಗಳಿದ್ದವು. ಸದೃಢ ಸ್ಕ್ರಿಪ್ಟ್‌ಗಾಗಿ ಎದುರು ನೋಡುತ್ತಿದ್ದೆ. Aaina ಕತೆ ತುಂಬಾ ಇಷ್ಟವಾಗಿದೆ. ಇಂಗ್ಲೆಂಡ್‌ನಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಚಿತ್ರೀಕರಣ ನಡೆಯಲಿದೆ. ಹಾಲಿವುಡ್‌ ವರ್ಕಿಂಗ್‌ ಸ್ಟೈಲ್‌ ತೀರಾ ಭಿನ್ನ. ಭಾರತದಲ್ಲಿ ನಟಿಯಾಗಿ ನನಗೆ ಸಾಕಷ್ಟು ಅನುಭವವಿದ್ದರೂ, ಇಲ್ಲಿ ಹೊಸಬಳು ಎಂದೇ ಫೀಲ್‌ ಆಗುತ್ತಿದೆ’ ಎನ್ನುತ್ತಾರೆ ರಿಚಾ.

ನೈಜ ಘಟನೆಗಳನ್ನು ಆಧರಿಸಿದ ಚಿತ್ರವನ್ನು Markus Meedt ನಿರ್ದೇಶಿಸುತ್ತಿದ್ದಾರೆ. ‘Chronicle of Narnia’ ಖ್ಯಾತಿಯ William Moseley ಚಿತ್ರದ ಹೀರೋ. ಇಂಗ್ಲೆಂಡ್‌ ಚಿತ್ರೀಕರಣದ ನಂತರ ಭಾರತದ ಹಲವೆಡೆ ಶೂಟಿಂಗ್‌ ನಡೆಯಲಿದೆ. Big Cat Films ಬ್ಯಾನರ್‌ನಡಿ ಗೀತಾ ಭಲ್ಲಾ ಮತ್ತು ಪಿ ಜೆ ಸಿಂಗ್‌ ಚಿತ್ರ ನಿರ್ಮಿಸುತ್ತಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ರಿಚಾ ‘ಫಕ್ರೀ 3’ ಚಿತ್ರದ ‘ಭೋಲಿ ಪಂಜಾಬನ್‌’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರೇ ನಿರ್ಮಿಸಿ, ನಟಿಸುತ್ತಿರುವ ‘Girls will be Girls’ ಹಿಂದಿ ಸಿನಿಮಾ ಕೂಡ ಮುಕ್ತಾಯದ ಹಂತದಲ್ಲಿದೆ.

Previous articleಪಿ ಸಿ ಶೇಖರ್‌ ಸಿನಿಮಾ ‘BAD’ | ಪ್ರೀತಿಯ ಪ್ರತಿನಿಧಿಯಾಗಿ ಅಪೂರ್ವ ಭಾರದ್ವಾಜ್‌
Next articleಆಫ್ರಿಕಾದಲ್ಲಿ ಚಿತ್ರೀಕರಣಗೊಳ್ಳಲಿದೆ ‘RRR 2’ | ಸಿದ್ಧವಾಗುತ್ತಿದೆ ವಿಜಯೇಂದ್ರ ಪ್ರಸಾದ್‌ ಚಿತ್ರಕಥೆ

LEAVE A REPLY

Connect with

Please enter your comment!
Please enter your name here