ನಟ ಅಜಯ್ ದೇವಗನ್‌ ಖಡಕ್ ಪೊಲೀಸ್ ಆಫೀಸರ್ ‘ಬಾಜಿರಾವ್ ಸಿಂಗಂ’ ಪಾತ್ರದಲ್ಲಿ ಮತ್ತೆ ತೆರೆಗೆ ಬರಲಿದ್ದಾರೆ. ‘ಸೂರ್ಯವಂಶಿ’ ಹಿಂದಿ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ರೋಹಿತ್ ಶೆಟ್ಟಿ ‘ಸಿಂಗಂ 3’ ಹಿಂದಿ ಸಿನಿಮಾಗೆ ಯೋಜನೆ ರೂಪಿಸಿದ್ದು, ನಟ ಅಜಯ್‌ ದೇವಗನ್‌ ಮತ್ತೊಮ್ಮೆ ಖಾಕಿ ತೊಡಲಿದ್ದಾರೆ.

ನಿನ್ನೆ ತೆರೆಕಂಡ ರೋಹಿತ್ ಶೆಟ್ಟಿ ನಿರ್ದೇಶನದ ‘ಸೂರ್ಯವಂಶಿ’ ಹಿಂದಿ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್‌, ಕತ್ರಿಕಾ ಕೈಫ್ ನಟನೆಯ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ‘ಸಿಂಗಂ 3’ ಸಿನಿಮಾ ಘೋಷಿಸಿದ್ದಾರೆ. ಮೊದಲೆರೆಡು ಚಿತ್ರಗಳಲ್ಲಿ ‘ಬಾಜಿರಾವ್‌ ಸಿಂಗಂ’ ಪಾತ್ರಗಳಲ್ಲಿ ಘರ್ಜಿಸಿದ್ದ ಅಜಯ್ ದೇವಗನ್ ಮತ್ತೊಮ್ಮೆ ಖಾಕಿ ತೊಟ್ಟು ಅಭಿಮಾನಿಗಳನ್ನು ರಂಜಿಸಲಿದ್ದಾರೆ. ನಿರ್ದೇಶಕ ರೋಹಿತ್ ಸಿಂಗಂ ಸೀಕ್ವೆಲ್‌ ಚಿತ್ರವನ್ನಷ್ಟೇ ಪ್ರಸ್ತಾಪಿಸಿಲ್ಲ, ಈ ಚಿತ್ರದ ಬಡುಗಡೆ ದಿನಾಂಕವನ್ನೂ ಘೋಷಿಸಿದ್ದಾರೆ. 2023ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಸಿನಿಮಾ ಥಿಯೇಟರ್‌ಗೆ ತರುವುದು ಅವರ ಯೋಜನೆ.

ದೇಶಭಕ್ತಿ ಕತೆಯೊಂದಿಗೆ ಸಿನಿಮಾ ಮಾಡಲು ರೋಹಿತ್‌ ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಈ ಬಾರಿ ಭಾರತ – ಪಾಕಿಸ್ತಾನದ ಭಾವನಾತ್ಮಕ ವಿಷಯವೊಂದನ್ನು ಆಧರಿಸಿ ಚಿತ್ರಕಥೆ ಹೆಣೆಯಲಿದ್ದು, ಕಾಶ್ಮೀರ ಇಶ್ಯೂ ಪ್ರಸ್ತಾಪವಾಗಲಿದೆಯಂತೆ. ಸದ್ಯ ‘ಸೂರ್ಯವಂಶಿ’  ತೆರೆಕಂಡಿದ್ದು, ಮುಂದೆ ರೋಹಿತ್ ನಿರ್ದೇಶನದಲ್ಲಿ ರಣವೀರ್ ಸಿಂಗ್ ನಟಿಸಿರುವ ಕಾಮಿಡಿ ಸಿನಿಮಾ ‘ಸರ್ಕಸ್‌’ ತೆರೆಗೆ ಬರಲಿದೆ. ಸಿದ್ದಾರ್ಥ್ ಮಲ್ಹೋತ್ರಾ ಜೊತೆಗೂಡಿ ರೋಹಿತ್ ಶೆಟ್ಟಿ ಓಟಿಟಿಗಾಗಿ ಪೊಲೀಸ್ ಕತೆಯೊಂದನ್ನು ನಿರ್ಮಿಸಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಮುಂದಿನ ವರ್ಷ ಈ ವೆಬ್ ಸರಣಿಗೆ ಚಿತ್ರೀಕರಣ ನಡೆಯಲಿದೆ.

Previous articleಸಕ್ರಾಂತಿಗಿಲ್ಲ ಮಹೇಶ್ ಬಾಬು ‘SVP’; ತ್ರಿವಿಕ್ರಮ್ ನಿರ್ದೇಶನದ ಸಿನಿಮಾಗೆ ಚಾಲನೆ
Next articleಡಬ್ಬಿಂಗ್ ಸಿನಿಮಾ ವೃತ್ತಿಪರತೆ ಹೆಚ್ಚಲಿ; ‘ಶ್ಯಾಂ ಸಿಂಗಾ ರಾಯ್’ಗೆ ಹಾಡು ಬರೆದ ಕವಿರಾಜ್ ಆಶಯ

LEAVE A REPLY

Connect with

Please enter your comment!
Please enter your name here