ನೀರಜ್‌ ಪಾಂಡೆ ರಚಿಸಿ, ಭಾವ್‌ ಧುಲಿಯಾ ನಿರ್ದೇಶಿಸಿರುವ ‘ದಿ ಫ್ರೀಲ್ಯಾನ್ಸರ್‌’ ಹಿಂದಿ ವೆಬ್‌ ಸರಣಿ ಟ್ರೈಲರ್‌ ರಿಲೀಸ್‌ ಆಗಿದೆ. ಹಿರಿಯ ನಟ ಅನುಪಮ್‌ ಖೇರ್‌, ಮೋಹಿತ್‌ ರೈನಾ ಮುಖ್ಯ ಪಾತ್ರಗಳಲ್ಲಿರುವ ಸರಣಿ ಸೆಪ್ಟೆಂಬರ್‌ 1ರಿಂದ DisneyPlus Hotstarನಲ್ಲಿ ಸ್ಟ್ರೀಮ್‌ ಆಗಲಿದೆ.

‘ಇದೊಂದು high – scale ಥ್ರಿಲ್ಲರ್ ಸರಣಿ. ಯುದ್ಧಪೀಡಿತ ಸಿರಿಯಾ ಪ್ರದೇಶದಲ್ಲಿ, ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದ ಯುವತಿಯ ರಕ್ಷಣಾ ಕಾರ್ಯಾಚರಣೆಯನ್ನು ಸರಣಿ ತೆರೆದಿಟ್ಟಿದೆ. ಈ ಸರಣಿಯು ಶಿರೀಶ್ ಥೋರಟ್ ಅವರ ‘ಎ ಟಿಕೆಟ್ ಟು ಸಿರಿಯಾ’ ಪುಸ್ತಕವನ್ನು ಆಧರಿಸಿದೆ. ಸರಣಿಯಲ್ಲಿ ಮೋಹಿತ್ ರೈನಾ ‘Freelancer’ ಆಗಿ ಕಾಣಿಸಿಕೊಂಡಿದ್ದು, ಅನುಪಮ್ ಖೇರ್ ವಿಶ್ಲೇಷಕ ‘ಡಾ ಖಾನ್‌’ ಪಾತ್ರ ನಿರ್ವಹಿಸಿದ್ದಾರೆ. ವಿದೇಶಗಳಲ್ಲಿ ಸರಣಿಯನ್ನು ಚಿತ್ರಿಸಿಲಾಗಿದ್ದು, ಒಂದು ಹೊಸ ಜಗತ್ತನ್ನು ತೆರೆಯ ಮೇಲೆ ತರಲಾಗಿದೆ’ ಎಂದು ತಮ್ಮ ಸರಣಿ ಬಗ್ಗೆ ಹೇಳುತ್ತಾರೆ ನೀರಜ್‌ ಪಾಂಡೆ. ಅವರು ಚಿತ್ರಕಥೆ ರಚಿಸಿರುವ ‘ದಿ ಫ್ರೀಲ್ಯಾನ್ಸರ್‌’ ಸರಣಿಯನ್ನು ಭಾವ್‌ ಧುಲಿಯಾ ನಿರ್ದೇಶಿಸಿದ್ದಾರೆ. ಬಾಲಿವುಡ್‌ ಹಿರಿಯ ನಟ ಅನುಪಮ್‌ ಖೇರ್‌ ಮತ್ತು ಮೋಹಿತ್‌ ರೈನಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ದಿ ಫೀಲಾನ್ಸರ್‌’ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್‌ ಹಿಂದಿ ವೆಬ್‌ ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ಹೆಲಿಕಾಪ್ಟರ್‌ ಮತ್ತು ವಿಮಾನಗಳ ಮನಮೋಹಕ ದೃಶ್ಯಗಳು, ಪೊಲೀಸ್‌ ಪಡೆಯ ರಹಸ್ಯ ಕಾರ್ಯಾಚರಣೆಗಳನ್ನು ಟೀಸರ್‌ ಒಳಗೊಂಡಿದೆ. ಸರಣಿ ಸೆಪ್ಟೆಂಬರ್‌ 1ರಿಂದ DisneyPlus Hotstarನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಅಕ್ಷಯ್‌ ಕುಮಾರ್‌ ‘OMG2’ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸದ್ಗುರು
Next article‘Spider Man – Across the Spider Verse’ | ZEE5ನಲ್ಲಿ ಲಭ್ಯವಿದೆ ಸೂಪರ್‌ ಹೀರೋ ಸಿನಿಮಾ

LEAVE A REPLY

Connect with

Please enter your comment!
Please enter your name here