ಬಿಡುಗಡೆ ಆಗಲು ಕಾದು ನಿಂತಿರುವ ಹಲವು ಚಿತ್ರಗಳ ಪಟ್ಟಿಯಲ್ಲಿ ಈಗ ಮೊದಲು ಅಡಿ ಇಡುತ್ತಿರೋದು ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ‘ಸಲಗ’. ಇನ್ನು ಇದರ ಜೊತೆಗೆ, ಕರೋನಾ ಮೂರನೇ ಅಲೆ ಬರಲ್ಲ ಅನ್ನೋ ನಂಬಿಕೆಯಲ್ಲಿ ‘ಕೋಟಿಗೊಬ್ಬ 3’ ಕೂಡ ಬಿಡುಗಡೆಯಾಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಮತ್ತೆ ಹೊಸ ಚಿತ್ರಗಳ ಆರ್ಭಟ ಶುರುವಾಗಿದೆ. ಚಿತ್ರಮಂದಿರಗಳು ಮತ್ತೆ ಕಟೌಟ್, ಹೂವಿನ ಹಾರಗಳೊಂದಿಗೆ ನಳನಳಿಸಲು ರೆಡಿಯಾಗಿವೆ. ಎರಡು ದೊಡ್ಡ ಚಿತ್ರಗಳ ಬಿಡುಗಡೆಯ ಮೂಲಕ ಕರೋನಾ ಬ್ರೇಕ್‌ನ ನಂತರ ಸಿನಿಮಾ ಹಬ್ಬ ಮುಂದುವರೆಯುತ್ತಿದೆ.

ಬಿಡುಗಡೆ ಆಗಲು ಕಾದು ನಿಂತಿರುವ ಹಲವು ಚಿತ್ರಗಳ ಪಟ್ಟಿಯಲ್ಲಿ ಈಗ ಮೊದಲು ಅಡಿ ಇಡುತ್ತಿರೋದು ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ‘ಸಲಗ’ ಚಿತ್ರ. ಇನ್ನು ಇದರ ಜೊತೆಗೆ, ಕರೋನಾ ಮೂರನೇ ಅಲೆ ಬರಲ್ಲ ಅನ್ನೋ ನಂಬಿಕೆಯಲ್ಲಿ ‘ಕೋಟಿಗೊಬ್ಬ 3’ ಕೂಡ ಬಿಡುಗಡೆ ಆಗ್ತಾ ಇದೆ. ಈ ಎರಡು ಚಿತ್ರಗಳು ಸೊರಗಿರುವ ಕನ್ನಡ ಚಿತ್ರರಂಗಕ್ಕೆ ಹೊಸ ಕಳೆ ತಂದುಕೊಡುತ್ತವೆ ಎಂಬ ನಿರೀಕ್ಷೆಯಲ್ಲಿ ಸಿನಿಪ್ರಿಯರು ಕಾಯುತ್ತಿದ್ದಾರೆ.

ಎರಡು ದೊಡ್ಡ ಸ್ಟಾರ್‌ಗಳ ಸಿನಿಮಾ ಬಿಡುಗಡೆ ಆಗುತ್ತಿರೋದು ದೊಡ್ಡ ವಿಷಯ ಏನಲ್ಲ. ಆದರೆ, ಇವು ಸುಮ್ಮನೆ ಗಾಳಿ ಬಂದಾಗ ತೂರಿಕೋ ಎನ್ನುವಂಥ ಚಿತ್ರಗಳೂ ಅಲ್ಲ. ಯಾಕಂದ್ರೆ, ಒಂದು ಲೆಕ್ಕದಲ್ಲಿ ಈ ಎರಡೂ ಚಿತ್ರಗಳು ಒಂದಲ್ಲ ಒಂದು ಕಾರಣಕ್ಕೆ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳೇ. ದುನಿಯಾ ವಿಜಿ ಅವರ ನಿರ್ದೇಶನದ ಮೊದಲ ಚಿತ್ರ ಅನ್ನೋ ಕಾರಣಕ್ಕೆ ‘ಸಲಗ’ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇದರಲ್ಲಿ ವಿಜಿ ಅವರ ಗೆಟಪ್ ಎಲ್ಲರ ಗಮನ ಸೆಳೆದಿದೆ. ವಿಜಯ್ ಅವರಿಗೆ ಈ ಚಿತ್ರ ಬೇರೆಯದ್ದೇ ಇಮೇಜ್ ತಂದುಕೊಡಬಹುದು ಅನ್ನೋದು ಸಿನಿಮಾ ಪಂಡಿತರ ಲೆಕ್ಕಾಚಾರ. ಈಗ ಬಿಡುಗಡೆ ಆಗಿರುವ ತುಣುಕುಗಳು ಮತ್ತು ಹಾಡುಗಳಲ್ಲಿ ವಿಜಯ್ ಅವರ ಗೆಟಪ್ ನೋಡಿ ಕಬಾಲಿಯ ರಜಿನೀಕಾಂತ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಸಿನಿ ರಸಿಕರು. ಇನ್ನು ಚಿತ್ರದ ಪ್ರಮೋಷನಲ್ ಸಾಂಗ್ ಆಗಿ ಬಿಡುಗಡೆ ಆಗಿರುವ “ಟಿನಿಂಗ ಮಿನಿಂಗ ಟಿಷ್ಕ್ಯಾವ್” ಮತ್ತು “ಸೂರಿ ಅಣ್ಣಾ” ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಹಾಗಾಗಿ ಸಲಗ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಸಲಗ ನಡೆದಿದ್ದೇ ಹಾದಿ ಅನ್ನುವ ಮಟ್ಟಕ್ಕೆ ಚಿತ್ರ ಸಕ್ಸಸ್ ಆಗುತ್ತಾ ಎಂದು ಎಲ್ಲರೂ ಕಾತುರದಿಂದ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಕೂಡಾ ಭಾರೀ ಬಜೆಟ್ಟಿನ ಭಾರೀ ನಿರೀಕ್ಷೆ ಇರುವ ಚಿತ್ರ. ಈ ಹಿಂದೆ ‘ಕೋಟಿಗೊಬ್ಬ 2’ ಸಕ್ಸಸ್ ಆಗಿ ನಿರ್ಮಾಪಕರಿಗೆ ಕೋಟಿಗಟ್ಟಲೆ ಲಾಭ ತಂದುಕೊಟ್ಟಿತ್ತು. ಈಗ ಅದರ ಮುಂದಿನ ಭಾಗದಲ್ಲೂ ಈ ಚಿತ್ರದ ಯಶಸ್ಸು ಮುಂದುವರಿಯುವ ಎಲ್ಲ ಲಕ್ಷಣಗಳೂ ಇವೆ. ಅಲ್ಲದೆ, ಸುದೀಪ್ ಅಬಿಮಾನಿಗಳು ಬಹಳ ದಿನಗಳಿಂದ ತಮ್ಮ ನೆಚ್ಚಿನ ನಟನನ್ನು ತೆರೆಯ ಮೇಲೆ ನೋಡಿ ಆನಂದಿಸಲು ಕಾಯುತ್ತಿದ್ದಾರೆ. ಹಾಗಾಗಿ ‘ಕೋಟಿಗೊಬ್ಬ’ ಚಿತ್ರಕ್ಕೆ ಕೂಡ ಬಾಕ್ಸ್ ಆಫೀಸ್ ತುಂಬಿಸುವ ಎಲ್ಲ ಸಾಮರ್ಥ್ಯ ಇದೆ. ಒಟ್ಟಿನಲ್ಲಿ ಸಿನಿಮಾಗಳ ಬಿಡುಗಡೆ ಆಗದೆ ಕಂಗೆಟ್ಟಿರುವ ಕನ್ನಡ ಚಿತ್ರರಂಗ ಈ ಎರಡು ಚಿತ್ರಗಳ ಬಿಡುಗಡೆಗಾಗಿ  ಕಾದು ಕೂತಿದೆ ಎಂದರೆ ತಪ್ಪಿಲ್ಲ.

LEAVE A REPLY

Connect with

Please enter your comment!
Please enter your name here