ಇಂದು (ಅ.1) ತಮಿಳು ಚಿತ್ರರಂಗದ ತಾರೆ ಶಿವಾಜಿ ಗಣೇಶನ್ ಅವರ ಜನ್ಮದಿನ. ಗೂಗಲ್‌ ಸಂಸ್ಥೆ ಡೂಡಲ್‌ನಲ್ಲಿ ಮೇರು ನಟನ ಚಿತ್ರ ಹಾಕಿ ಗೌರವ ಸೂಚಿಸಿದೆ.

ತಮಿಳು ಚಿತ್ರರಂಗದ ತಾರೆ ಶಿವಾಜಿ ಗಣೇಶನ್‌ ಅವರ 93ನೇ ಜನ್ಮದಿನವಿಂದು (ಅಕ್ಟೋಬರ್‌ 1). ಡೂಡಲ್‌ನಲ್ಲಿ ಶಿವಾಜಿ ಗಣೇಶನ್‌ ಅವರ ಚಿತ್ರ ಹಾಕಿ ಗೂಗಲ್‌ ಮೇರು ನಟನಿಗೆ ಗೌರವ ಸೂಚಿಸಿದೆ. ಬೆಂಗಳೂರು ಮೂಲದ ಕಲಾವಿದ ನೂಪುರ್‌ ರಾಜೇಶ್‌ ಚೋಕ್ಸಿ ಈ ಡೂಡಲ್‌ ರಚಿಸಿದ್ದಾರೆ. ಭಾರತದ ಸಿನಿಮಾ ಸಂದರ್ಭದಲ್ಲೇ ‘ಮೆಥೆಡ್ ಆಕ್ಟರ್‌’ ಎಂದು ಪರಿಗಣಿಸುವ ನಟರ ಸಾಲಿನಲ್ಲಿ ಶಿವಾಜಿ ಗಣೇಶನ್ ಅವರ ಹೆಸರು ಮುಂಚೂಣಿಯಲ್ಲಿ ಪ್ರಸ್ತಾಪವಾಗುತ್ತದೆ.

1928ರ ಇದೇ ದಿನ ತಮಿಳು ನಾಡಿನ ವಿಳ್ಳುಪುರಂನಲ್ಲಿ ಜನಿಸಿದ ಶಿವಾಜಿ ಗಣೇಶನ್ ಅವರ ಜನ್ಮನಾಮ ಜ್ಞಾನೇಶ್‌ಮೂರ್ತಿ. ಏಳರ ಹರೆಯದಲ್ಲಿ ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ ಅವರು ಮುಂದೆ ಹತ್ತಾರು ನಾಟಕಗಳ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿದರು. ‘ಶಿವಾಜಿ ಮಹಾರಾಜ’ ನಾಟಕದ ಶೀರ್ಷಿಕೆ ಪಾತ್ರ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಅಲ್ಲಿಂದು ಮುಂದೆ ಅವರ ಹೆಸರಿನ ಹಿಂದೆ ‘ಶಿವಾಜಿ’ ಸೇರಿಕೊಂಡಿತು.

‘ಪರಾಶಕ್ತಿ’ (1952) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಶಿವಾಜಿ ಗಣೇಶನ್‌ ಐದು ದಶಕಗಳ ಸಿನಿಮಾ ಜೀವನದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1961ರಲ್ಲಿ ತೆರೆಕಂಡ ‘ಪಸಮಲಾರ್‌’ ಅವರ ವೃತ್ತಿ ಬದುಕಿಗೆ ಬಹುದೊಡ್ಡ ತಿರುವಾಯ್ತು. ನೂರನೇ ಸಿನಿಮಾ ‘ನವರಾತ್ರಿ’ಯಲ್ಲಿ ಅವರು ಒಂಬತ್ತು ಪಾತ್ರ ಪೋಷಿಸಿ ದಾಖಲೆ ಸೃಷ್ಟಿಸಿದರು. 1997ರಲ್ಲಿ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಗೌರವ ಸಂದಿದೆ.

‘ಪರಾಶಕ್ತಿ’ ಚಿತ್ರದಲ್ಲಿ ಶಿವಾಜಿ ಗಣೇಶನ್‌
Previous articleಇದೇ 14ರಿಂದ ಪ್ರೈಮ್‌ನಲ್ಲಿ ‘ಉಡನ್‌ಪಿರಪ್ಪೆ’
Next article‘ಸಲಗ’ ನಡೆದದ್ದೇ ಹಾದಿ ಆಗುತ್ತಾ? ಕೋಟಿ ಕೋಟಿ ಬಾಚ್ತಾನಾ ‘ಕೋಟಿಗೊಬ್ಬ’?

LEAVE A REPLY

Connect with

Please enter your comment!
Please enter your name here