ಗುರು ರಾಂಧ್ವಾ ಮತ್ತು ರೊಮ್ಯಾನಿಯನ್‌ ಗಾಯಕಿ ಲೂಲಿಯಾ ವ್ಯಾಂಟೂರ್‌ ಹಾಡಿರುವ ‘ಮೈ ಚಲಾ’ ವೀಡಿಯೋ ಸಾಂಗ್‌ ಇಂದು ಬಿಡುಗಡೆಯಾಗಿದೆ. ಶಬೀನಾ ಖಾನ್‌ ಮತ್ತು ಗಿಫ್ಟಿ ನಿರ್ದೇಶನದ ಮ್ಯೂಸಿಕ್‌ ವೀಡಿಯೋದಲ್ಲಿ ಸಲ್ಮಾನ್‌ ಖಾನ್‌ ಮತ್ತು ಪ್ರಜ್ಞಾ ಜಸ್ವಾಲ್‌ ಇದ್ದಾರೆ.

T – Series ಇಂದು ರೊಮ್ಯಾಂಟಿಕ್‌ ವೀಡಿಯೋ ಆಲ್ಬಂ ‘ಮೈ ಚಲಾ’ ಬಿಡುಗಡೆಗೊಳಿಸಿದೆ. ಶಬ್ಬೀರ್‌ ಅಹ್ಮದ್‌ ರಚಿಸಿ, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಶಬೀನಾ ಖಾನ್‌ ಮತ್ತು ಗಿಫ್ಟಿ ನಿರ್ದೇಶಿಸಿದ್ದಾರೆ. ಖ್ಯಾತ ಗಾಯಕ ಗುರು ರಾಂಧ್ವಾ ಮತ್ತು ಲೂಲಿಯಾ ವ್ಯಾಂಟೂರ್‌ ಹಾಡಿದ್ದು, ಸಲ್ಮಾನ್‌ ಖಾನ್‌ ಮತ್ತು ಪ್ರಜ್ಞಾ ಜಸ್ವಾಲ್‌ ಕಾಣಿಸಿಕೊಂಡಿದ್ದಾರೆ. ಈ ಆಲ್ಬಂನಲ್ಲಿ ಇತ್ತೀಚೆಗೆ ಬಿಡುಗಡೆಯಾದ ತಮ್ಮ ಅಂತಿಮ್‌ ಚಿತ್ರದ ಲುಕ್‌ನಲ್ಲಿದ್ದಾರೆ ಸಲ್ಮಾನ್‌ ಖಾನ್‌. “Tune in to listen #MainChala. Song is out now!” ಎನ್ನುವ ಒಕ್ಕಣಿಯೊಂದಿಗೆ ಸಲ್ಲೂ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಶೇರ್‌ ಮಾಡಿದ್ದಾರೆ.

ರೊಮ್ಯಾನಿಯನ್‌ ಗಾಯಕಿ ಮತ್ತು ನಟಿ ಲೂಲಿಯಾ ವ್ಯಾಂಟೂರ್‌ ಮಾತನಾಡಿ, “ಪ್ರೀತಿಯಿಂದ ರಚಿಸಿರುವ ಹಾಡಿದು. ನಾವು ಮನದುಂಬಿ ಹಾಡಿದ್ದು, ಖಂಡಿತವಾಗಿ ಇದು ಜನರ ಮನಸ್ಸನ್ನು ಮುಟ್ಟಲಿದೆ. ನನ್ನ ಮೇಲಿನ ನಂಬುಗೆಯಿಂದ ಹಾಡಿಸಿರುವ ಗುರು ರಾಂಧ್ವಾಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಈ ಹಾಡಿನೊಂದಿಗೆ ಎಲ್ಲರ ಹೃದಯದಲ್ಲಿ ಪ್ರೀತಿಯ ಕಂಪನಗಳು ಸೃಜಿಸಲಿವೆ” ಎಂದಿದ್ದಾರೆ. ನಟ ಸಲ್ಮಾನ್‌ ಈ ಹಿಂದೆ ‘ಭಾಯಿ ಭಾಯಿ’, ‘ತೇರೆ ಬಿನಾ’ ವೀಡಿಯೋ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದರು.

LEAVE A REPLY

Connect with

Please enter your comment!
Please enter your name here