ಟಾಮ್‌ ಕ್ರ್ಯೂಸ್‌ ಅಭಿನಯದ ‘ಮಿಷನ್‌ ಇಂಪಾಸಿಬಲ್‌ 7’ 2023ರ ಜುಲೈ 14ರಂದು ಥಿಯೇಟರ್‌ಗೆ ಬರಲಿದೆ. 2023ರ ಜುಲೈಗೆ ಬರಬೇಕಿದ್ದ ‘ಮಿಷನ್‌ ಇಂಪಾಸಿಬಲ್‌ 8’ 2024ರ ಜೂನ್‌ 28ಕ್ಕೆ ಮುಂದೂಡಲ್ಪಟ್ಟಿದೆ.

ಕೋವಿಡ್‌ ಪ್ಯಾಂಡೆಮಿಕ್‌ನಿಂದಾಗಿ ಜನಪ್ರಿಯ ‘ಮಿಷನ್‌ ಇಂಪಾಸಿಬಲ್‌’ ಸಿನಿಮಾದ ಎರಡು ಸೀಕ್ವೆಲ್‌ಗಳು ಮುಂದೂಡಲ್ಪಟ್ಟಿವೆ. ಪ್ಯಾರಾಮೌಂಟ್‌ ಪಿಕ್ಚರ್ಸ್‌ ಮತ್ತು ಸ್ಕೈಡ್ಯಾನ್ಸ್‌ ನಿರ್ಮಾಣ ಸಂಸ್ಥೆಗಳು ಈ ಮಾಹಿತಿ ನೀಡಿವೆ. “ಕೋವಿಡ್‌ ಪರಿಸ್ಥಿತಿಯನ್ನು ಅವಲೋಕಿಸಿ ಮಿಷನ್‌ ಇಂಪಾಸಿಬಲ್‌ 7 ಮತ್ತು 8 ಸೀಕ್ವೆಲ್‌ಗಳನ್ನು ಮುಂದೂಡಲಾಗಿದೆ. ವಿಳಂಬವಾಗುತ್ತಿರುವುದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇವೆ. ಈ ಸಿನಿಮಾಗಳಲ್ಲಿ ಅವರಿಗೆ ಅದ್ಭುತ ಸಿನಿಮ್ಯಾಟಿಕ್‌ ಎಕ್ಸ್‌ಪೀರಿಯನ್ಸ್‌ ಸಿಗಲಿದೆ ಎನ್ನುವ ಭರವಸೆ ನೀಡಲಿದ್ದೇವೆ” ಎಂದು ಚಿತ್ರನಿರ್ಮಾಣ ಸಂಸ್ಥೆಗಳು ಹೇಳಿವೆ. ‘ಮಿಷನ್‌ ಇಂಪಾಸಿಬಲ್‌ 7’ ಚಿತ್ರದಲ್ಲಿ ಟಾಮ್‌ ಕ್ರ್ಯೂಸ್‌, ‘ಈಥನ್‌ ಹಂಟ್‌’ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ 2022ರ ಸೆಪ್ಟೆಂಬರ್‌ 30ಕ್ಕೆ ತೆರೆಕಾಣಬೇಕಿತ್ತು. ಈ ಸಿಕ್ವೆಲ್‌ ಈಗ 2023ರ ಜುಲೈ 14ಕ್ಕೆ ಪೋಸ್ಟ್‌ಪೋನ್‌ ಆಗಿದೆ.

‘ಮಿಷನ್‌ ಇಂಪಾಸಿಬಲ್‌ 8’ ಸಿನಿಮಾ ಜುಲೈ 2023ರ ಜುಲೈ 7ರಂದು ತೆರೆಗೆ ಬರಬೇಕಿತ್ತು. ಈ ಸಿನಿಮಾ 2024ರ ಜೂನ್‌ 28ಕ್ಕೆ ಮುಂದೂಡಲ್ಪಟ್ಟಿದೆ. ಕ್ರಿಸ್ಟೋಫರ್‌ ಮ್ಯಾಕ್‌ಕ್ವರಿ ನಿರ್ದೇಶನದ ‘ಮಿಷನ್‌ ಇಂಪಾಸಿಬಲ್‌ 7’ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರೆಬೆಕ್ಕಾ ಫರ್ಗ್ಯೂಸನ್‌, ಹೇಲೆ ಅಟ್‌ವೆಲ್‌, ವಿಂಗ್‌ ರೇಮ್ಸ್‌, ಹೆನ್ರಿ ಝೆರ್ನೀ, ಸೈಮನ್‌ ಪೆಗ್‌ ನಟಿಸಿದ್ದಾರೆ. ಪ್ಯಾರಾಮೌಂಟ್‌ ನಿರ್ಮಾಣದಲ್ಲಿ ಟಾಮ್‌ ಕ್ಯ್ರೂಸ್‌ ಮತ್ತೊಂದು ಹೈ-ಪ್ರೊಫೈಲ್‌ ಸಿನಿಮಾ ‘ಟಾಪ್‌ ಗನ್‌: ಮಾವೆರಿಕ್‌’ನಲ್ಲಿ ನಟಿಸುತ್ತಿದ್ದಾರೆ. ಇದು ಟಾಮ್‌ ಕ್ರ್ಯೂಸ್‌ರ 1986ರ ಬ್ಲಾಕ್‌ಬಸ್ಟರ್‌ನ ಸಿಕ್ವೆಲ್‌. ಈ ಸಿನಿಮಾ 2022ರ ಮೇ 27ರಂದು ತೆರೆಕಾಣಲಿದೆ.

‘ಮಿಷನ್‌ ಇಂಪಾಸಿಬಲ್‌ 6’ ಟ್ರೈಲರ್‌

LEAVE A REPLY

Connect with

Please enter your comment!
Please enter your name here