ಸಡಗರ ರಾಘವೇಂದ್ರ ನಿರ್ದೇಶನದಲ್ಲಿ ಕವೀಶ್‌ ಶೆಟ್ಟಿ ಮತ್ತು ಮೇಘಾ ಶೆಟ್ಟಿ ನಟಿಸುತ್ತಿರುವ ಬಹುಭಾಷಾ ಸಿನಿಮಾಗೆ ಶೀರ್ಷಿಕೆ ನಿಗದಿಯಾಗಿದೆ. ನಟ, ನಿರ್ದೇಶಕ ರಿಷಬ್‌ ಶೆಟ್ಟಿ ‘ಆಫ್ಟರ್‌ ಆಪರೇಷನ್‌ ಲಂಡನ್‌ ಕೆಫೆ’ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಜೋಡಿಯ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಚಿತ್ರದ ಶೀರ್ಷಿಕೆಗೆ ಸಂಬಂಧಿಸಿದಂತೆ ಆರಂಭದಿಂದಲೂ ಕುತೂಹಲವಿತ್ತು. ನಾಯಕ ಕವೀಶ್ ಶೆಟ್ಟಿ ಹುಟ್ಟುಹಬ್ಬದ ಉಡುಗೊರೆಯಾಗಿ ಪ್ಯಾನ್ ಇಂಡಿಯಾ ಮಟ್ಟದ ಆಕರ್ಷಕ ಟೈಟಲ್ ಬಿಡುಗಡೆ ಮಾಡಿ ಚಿತ್ರತಂಡ ಇನ್ನಷ್ಟು ಕುತೂಹಲ ಮೂಡಿಸಿದೆ. ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಎನ್ನುವ ಶೀರ್ಷಿಕೆ ನಿಗದಿಯಾಗಿದ್ದು, ಇದೊಂದು ದೊಡ್ಡ ಮಟ್ಟದ ಆಕ್ಷನ್ ಪ್ಯಾಕೇಜ್ ಸಿನಿಮಾ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತದೆ. ಗಾಢ ವರ್ಣ, ಹೀರೋ ಕವೀಶ್‌ ಶೆಟ್ಟಿ ಲುಕ್‌ ಇಂಪ್ರೆಸಿವ್‌ ಆಗಿದೆ. ನುರಿತ ತಾಂತ್ರಿಕ ವರ್ಗ ಹಾಗೂ ಕನ್ನಡ, ಮರಾಠಿ ಮತ್ತು ಬಹುಭಾಷಾ ಕಲಾವಿದರನ್ನು ಹೊಂದಿರುವ ಲಂಡನ್ ಕೆಫೆಯ ಗುಟ್ಟು ಬಿಟ್ಟು ಕೊಡದ ನಿರ್ದೇಶಕ ಸಡಗರ ರಾಘವೇಂದ್ರ ಹೆಸರಿಗೆ ತಕ್ಕಂತೆ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ನಿರಾಸೆಗೊಳಿಸುವುದಿಲ್ಲ ಎನ್ನುತ್ತಾ ಚಿತ್ರದ ಟೈಟಲ್ ಬಿಡುಗಡೆಗೆ ಸಹಕರಿಸಿದ ಗೆಳೆಯ ರೀಷಬ್ ಶೆಟ್ಟಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ಮರಾಠಿಯ ಡ್ರೀಮರ್ಸ್ ಪ್ರೊಡಕ್ಷನ್ ದೀಪಕ್ ರಾಣೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Previous article‘ಪ್ಲೀಸ್‌ ಮಮ್ಮಿ’ ಹಾಡಿಗೆ ಉತ್ತಮ ರೆಸ್ಪಾನ್ಸ್‌; ಜೂನ್‌ 24ಕ್ಕೆ ವಿಕ್ರಮ್‌ ‘ತ್ರಿವಿಕ್ರಮ’
Next article‘ಸಾಲ್ಟ್‌ ಸಿಟಿ’ ಟ್ರೈಲರ್‌; ಸೋನಿ ಲೈವ್‌ನಲ್ಲಿ ವೆಬ್‌ ಸರಣಿ ಜೂನ್‌ 16ರಿಂದ

LEAVE A REPLY

Connect with

Please enter your comment!
Please enter your name here