ಹೇಮಂತ್‌ ರಾವ್‌ ನಿರ್ದೇಶನದಲ್ಲಿ ರಕ್ಷಿತ್‌ ಶೆಟ್ಟಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ‘ಹೋರಾಟ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಎಂ ಸಿ ಬಿಜ್ಜು ಮತ್ತು ಕಿರಣ್‌ ಕಾವೇರಪ್ಪ ರಚನೆಯ ಗೀತೆಗೆ ಚರಣ್‌ ರಾಜ್‌ ಸಂಗೀತವಿದೆ. ಎಂ ಸಿ ಬಿಜ್ಜು ಮತ್ತು ಕೀರ್ತನ್ ಹೊಳ್ಳ ಹಾಡಿದ್ದಾರೆ.

ರಕ್ಷಿತ್‌ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ‘ಹೋರಾಟ’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. Rapper ಎಂ ಸಿ ಬಿಜ್ಜು ಮತ್ತು ಕಿರಣ್‌ ಕಾವೇರಪ್ಪ ರಚನೆಯ ಗೀತೆಗೆ ಚರಣ್‌ ರಾಜ್‌ ಸಂಗೀತವಿದೆ. ಎಂ ಸಿ ಬಿಜ್ಜು ಮತ್ತು ಕೀರ್ತನ್ ಹೊಳ್ಳ ಹಾಡಿದ್ದಾರೆ. ಹೀರೋ ರಕ್ಷಿತ್‌ ಶೆಟ್ಟಿ ಅವರೇ ನಿರ್ಮಿಸಿರುವ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ರುಕ್ಮಿಣಿ ವಸಂತ್, ಚೈತ್ರ ಜೆ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್‌ಕುಮಾರ್‌, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಇದ್ದಾರೆ. ಹೇಮಂತ್‌ ರಾವ್‌ ನಿರ್ದೇಶನದ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಸುನೀಲ್ ಭಾರದ್ವಾಜ್ ಸಂಕಲನವಿದೆ. ಈ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ತೆರೆಕಾಣಲಿದೆ. ಮೊದಲ ಭಾಗ ಸೆಪ್ಟೆಂಬರ್‌ 1ರಂದು (ಸೈಡ್‌ 1) ಮತ್ತು 2ನೇ ಪಾರ್ಟ್‌ (ಸೈಡ್‌ 2) ಅಕ್ಟೋಬರ್‌ 20ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here