ಸಾಗರ್‌ ಅಂಬ್ರೆ ಮತ್ತು ಪುಷ್ಕರ್‌ ಓಜಾ ನಿರ್ದೇಶನದ ‘ಯೋಧ’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಸಿದ್ದಾರ್ಥ್‌ ಮಲ್ಹೋತ್ರಾ ಯೋಧನ ಪಾತ್ರದಲ್ಲಿದ್ದು, ದಿಶಾ ಪಟಾನಿ ಮತ್ತು ರಾಶಿ ಖನ್ನಾ ಚಿತ್ರದ ಇಬ್ಬರು ನಾಯಕಿಯರು. ಮಾರ್ಚ್‌ 15ರಂದು ಸಿನಿಮಾ ತೆರೆಕಾಣಲಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಯೋಧ’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರು ಅರುಣ್ ಹೆಸರಿನ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುವ ಹೆಮ್ಮೆಯ ಸೈನಿಕನಾಗಿ ಅರುಣ್‌ನನ್ನು (ಸಿದ್ಧಾರ್ಥ್) ಪರಿಚಯಿಸಲಾಗಿದ್ದು, ಅವನು ಧೈರ್ಯಶಾಲಿಯಾಗಿ ಶತ್ರುಗಳ ವಿರುದ್ಧ ಹೋರಾಡುವುದನ್ನು ಕಾಣಬಹುದು. ಎದುರಾಳಿಗಳು ತಪ್ಪು ಮಾಡಿದರೆ ಒಂದು ಕ್ಷಣವೂ ಯೋಚಿಸದೇ ಬಂದೂಕಿನಿಂದ ಗುಂಡು ಹಾರಿಸಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಮನೋಭಾವದ ಸೈನಿಕನಾಗಿ ಕಾಣಿಸಿಕೊಂಡಿದ್ದಾನೆ.

ಚಿತ್ರದಲ್ಲಿ ಶಾರುಖ್‌ ಅವರ ‘DDLJ’ ಚಿತ್ರದ ಸಿಗ್ನೇಚರ್‌ ಸ್ಟೆಪ್‌ ಅನ್ನು ಸಿದ್ದಾರ್ಥ್‌ ಮರುಕಳಿಸಿದ್ದಾರೆ. ದಿಶಾ ಪಟಾನಿ ಗಗನಸಖಿಯಾಗಿ ಕಾಣಿಸಿಕೊಂಡಿದ್ದಾರೆ. ವಿಮಾನವನ್ನು ವಶಪಡಿಸಿಕೊಂಡಿರುವ ಭಯೋತ್ಪಾದಕರಿಂದ ಪ್ರಯಾಣಿಕರನ್ನು ರಕ್ಷಿಸಲು ಹೋರಾಡುವವರಲ್ಲಿ ಅವರು ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮಾರ್ಚ್ 15 ರಂದು ಬಿಡುಗಡೆಯಾಗಲಿದೆ. ಸಿದ್ಧಾರ್ಥ್ ತಂದೆಯಾಗಿ ರೋನಿತ್ ರಾಯ್ ಪ್ರಮುಖ ಪಾತ್ರದಲ್ಲಿದ್ದಾರೆ. ರಾಶಿ ಖನ್ನಾ, ಸಿದ್ದಾರ್ಥ್‌ ಪ್ರೇಯಸಿಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವನ್ನು Dharma Productions ಬ್ಯಾನರ್‌ ಅಡಿಯಲ್ಲಿ ಹಿರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಶಶಾಂಕ್ ಖೈತಾನ್ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here