ಬಾಲಿವುಡ್‌ ಹೀರೋ ಶಾರುಖ್‌ ಖಾನ್‌ ಕಡೆಯಿಂದ ಇದು ದೊಡ್ಡ ಸುದ್ದಿ. Red Chillies Entertainment ಆರಂಭಿಸಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ನಟ ಇದೀಗ ‘SRK+’ OTT App ಲಾಂಚ್‌ ಮಾಡಿದ್ದಾರೆ.

ನಟ ಶಾರುಖ್‌ ಖಾನ್‌ OTT ಜಗತ್ತು ಪ್ರವೇಶಿಸುತ್ತಿದ್ದಾರೆ. ಇಂದು ಅವರು ತಮ್ಮ ನೂತನ OTT App ‘SRK+’ ಲಾಂಚ್‌ ಮಾಡುತ್ತಿರುವ ಮಾಹಿತಿ ಅರುಹಿದ್ದಾರೆ. “Kuch kuch hone wala hai, OTT ki duniya meinʼʼ ಎನ್ನುವ ಸಂದೇಶದೊಂದಿಗೆ ನಟ ಶಾರುಖ್‌ “SRK+, coming soon” ಪೋಸ್ಟರ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ Red Chillies Entertainment ಬ್ಯಾನರ್‌ನಡಿ ಈಗಾಗಲೇ ಅವರು ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ಅವರು ‘Bard of Blood’ ಮತ್ತು ‘Betaal’ ವೆಬ್‌ ಸರಣಿಗಳನ್ನು ನಿರ್ಮಿಸಿದ್ದಿದೆ. ಈಗ ಅವರೇ OTT App ಲಾಂಚ್‌ ಮಾಡಲಿದ್ದು, ಇದರ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚು ಮಾಹಿತಿ ಸಿಗಲಿದೆ.

ಶಾರುಖ್‌ ಟ್ವೀಟ್‌ ಶೇರ್‌ ಮಾಡಿರುವ ಅವರ ಆಪ್ತ ಗೆಳೆಯ, ನಟ ಸಲ್ಮಾನ್‌ ಖಾನ್‌, “Aaj ki party teri taraf se @iamsrk. Congrats on your new OTT app, SRK+,” ಎಂದು ಅಭಿನಂದನೆ ತಿಳಿಸಿದ್ದಾರೆ. ಖ್ಯಾತ ಚಿತ್ರನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರು ಶಾರುಖ್‌ ಓಟಿಟಿ ಜೊತೆ ಗುರುತಿಸಿಕೊಳ್ಳುವುದಾಗಿ ಹೇಳಿದ್ದು, Dream come true! Collaborating with @iamsrk on his new OTT app, SRK+,” ಎಂದು ಟ್ವೀಟ್‌ ಮಾಡಿದ್ದಾರೆ. ಬಾಲಿವುಡ್‌ನ ಹಲವರು ಶಾರುಖ್‌ ಹೊಸ ಯೋಜನೆಗೆ ಶುಭಹಾರೈಸಿದ್ದು, ಓಟಿಟಿ ಆಪ್‌ನ ಮುಂದಿನ ಸುದ್ದಿಗಳ ನಿರೀಕ್ಷೆಯಲ್ಲಿದ್ದಾರೆ.

Biggest news of the year! @iamsrk, this is going to change the face of OTT. Super excited!!!” ಎನ್ನುವ ಸಂದೇಶದೊಂದಿಗೆ ಶಾರುಖ್‌ ಅಪ್ತ, ಚಿತ್ರನಿರ್ದೇಶಕ ಕರಣ್‌ ಜೋಹರ್‌ ಅಭಿನಂದನೆ ತಿಳಿಸಿದ್ದಾರೆ. 56ರ ಹರೆಯದ ಶಾರುಖ್‌ ಖಾನ್‌ ‘Zero’ (2018) ನಂತರ ತೆರೆ ಮೇಲೆ ಕಾಣಿಸಕೊಂಡಿಲ್ಲ. ಇದೀಗ ಅವರ ”Pathaan’ ಸಿನಿಮಾ ಚಿತ್ರೀಕರಣದಲ್ಲಿದ್ದು, 2023ರ ಜನವರಿ 25ರಂದು ಥಿಯೇಟರ್‌ಗೆ ಬರಲಿದೆ. ಯಶ್‌ ರಾಜ್‌ ಫಿಲ್ಮ್ಸ್‌ ನಿರ್ಮಾಣದ ಚಿತ್ರವನ್ನು ಸಿದ್ದಾರ್ಥ್‌ ಆನಂದ್‌ ನಿರ್ದೇಶಿಸುತ್ತಿದ್ದಾರೆ.

Previous articleಮಾನವ ಸಂಬಂಧಗಳ ತಳಮಳ ‘ಪಿಂಕಿ ಎಲ್ಲಿ?’
Next articleಅಪ್ಪು ಬಯೋಗ್ರಫಿ ‘ನೀನೇ ರಾಜಕುಮಾರ’ ಬಿಡುಗಡೆ ಮಾಡಿದ ನಟ ಸುದೀಪ್

LEAVE A REPLY

Connect with

Please enter your comment!
Please enter your name here