ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು ‘ಘೋಸ್ಟ್‌’. ಈ ಸಿನಿಮಾದ ‘Big Daddy’ ಟೀಸರ್‌ ವೀಡಿಯೋ ಹೀರೋ ಶಿವರಾಜಕುಮಾರ್‌ ಬರ್ತ್‌ಡೇ ಜುಲೈ 12ರಂದು ಬಿಡುಗಡೆಯಾಗಲಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನ ಚಿತ್ರವನ್ನು ಶ್ರೀನಿ ನಿರ್ದೇಶಿಸುತ್ತಿದ್ದಾರೆ.

ಶಿವರಾಜಕುಮಾರ್‌ ಅಭಿನಯದ ‘ಘೋಸ್ಟ್‌’ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಮಲಯಾಳಂ ನಟ ಜಯರಾಂ ಮತ್ತು ಹಿಂದಿ ಸಿನಿಮಾದ ಹಿರಿಯ ನಟ ಅನುಪಮ್‌ ಖೇರ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ವಿಶೇಷ ಪಾತ್ರಕ್ಕಾಗಿ ತಮಿಳು ನಟ ವಿಜಯ್‌ ಸೇತುಪತಿ ಅವರನ್ನು ಸಂಪರ್ಕಿಸುವು ಸುದ್ದಿಯೂ ಇತ್ತು. ಸಿನಿಮಾದ ಫ್ರಾಂಚೈಸ್‌ (ಪಾರ್ಟ್‌ 2) ಕೂಡ ತಯಾರಾಗಲಿದೆ ಎಂದು ನಿರ್ಮಾಪಕರು ಈಗಾಗಲೇ ಘೋಷಿಸಿದ್ದಾರೆ. ಹೀಗೆ, ಹಲವು ಕಾರಣಗಳಿಂದ ಗಮನ ಸೆಳೆಯುತ್ತಿರುವ ಸಿನಿಮಾದ ‘Big Daddy’ ವೀಡಿಯೋ ಶಿವರಾಜಕುಮಾರ್‌ ಬರ್ತ್‌ಡೇಗೆ ಜುಲೈ 12ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಪೋಸ್ಟರ್‌ ರಿಲೀಸ್‌ ಮಾಡಿದ್ದು, ಅಭಿಮಾನಿಗಳು ವೀಡಿಯೋ ನಿರೀಕ್ಷೆಯಲ್ಲಿದ್ದಾರೆ. ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ತಯಾರಾಗುತ್ತಿರುವ ಚಿತ್ರವನ್ನು ಶ್ರೀನಿ ನಿರ್ದೇಶಿಸುತ್ತಿದ್ದಾರೆ. ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿ ಅರ್ಚನಾ ಜೋಯಿಸ್‌ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್‌ ಜನ್ಯ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ.

Previous articleಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ಸೂಜಿಮೊನೆ ‘ಮಾಮನ್ನನ್‌’
Next articleಅಲ್ಲು ಅರ್ಜುನ್‌ – ತ್ರಿವಿಕ್ರಮ್‌ ತೆಲುಗು ಸಿನಿಮಾ | ಮತ್ತೊಮ್ಮೆ ಒಂದಾದ ಹಿಟ್‌ ಜೋಡಿ

LEAVE A REPLY

Connect with

Please enter your comment!
Please enter your name here