ಕಿರುತೆರೆ ನಟ Smile Guru ರಕ್ಷಿತ್‌ ಸಿನಿಮಾ ಹೀರೋ ಆಗುತ್ತಿದ್ದಾರೆ. ‘ಆಕಾಶ್‌’, ‘ಅರಸು’ ಸಿನಿಮಾಗಳ ಖ್ಯಾತಿಯ ಮಹೇಶ್‌ ಬಾಬು ಚಿತ್ರ ನಿರ್ದೇಶಿಸಲಿದ್ದಾರೆ. ಇದೊಂದು ಲವ್‌ ಸ್ಟೋರಿ ಎನ್ನಲಾಗಿದ್ದು, ಲೀಡಿಂಗ್ ಸ್ಟ್ಯಾಂಡಿಂಗ್ ಮೇಕರ್ಸ್ ಎಂಎಂಎಂ ಗ್ರೂಪ್ಸ್‌ ಚಿತ್ರ ನಿರ್ಮಿಸುತ್ತಿದೆ.

Smile Guru ರಕ್ಷಿತ್‌ ಎಂದೇ ಹೆಸರಾಗಿರುವ ಕನ್ನಡ ಕಿರುತೆರೆ ನಟ ರಕ್ಷಿತ್‌ ಸಿನಿಮಾ ಹೀರೋ ಆಗುತ್ತಿದ್ದಾರೆ. ‘ಪದ್ಮಾವತಿ’, ‘ಕನ್ನಡತಿ’ ಧಾರಾವಾಹಿಗಳಲ್ಲಿ ಅವರು ಜನರಿಗೆ ಪರಿಚಯವಾಗಿದ್ದರು. ತಕಧಿಮಿತ, ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ರಕ್ಷಿತ್‌ ತಮ್ಮದೇ ಒಂದು ಡ್ಯಾನ್ಸ್‌ ಸ್ಕೂಲ್‌ ನಡೆಸುತ್ತಿದ್ದಾರೆ. ಅವರೀಗ ಸೂಕ್ತ ತಯಾರಿಯೊಂದಿಗೆ ಸಿನಿಮಾ ಹೀರೋ ಆಗುತ್ತಿದ್ದಾರೆ. ‘ಆಕಾಶ್‌’, ‘ಅರಸು’ ಸಿನಿಮಾಗಳ ಖ್ಯಾತಿಯ ಮಹೇಶ್‌ ಬಾಬು ಈ ಸಿನಿಮಾ ನಿರ್ದೇಶಿಸುತ್ತಿರುವುದು ವಿಶೇಷ. ಇದೊಂದು ಕಲ್ಟ್‌ ಲವ್‌ಸ್ಟೋರಿ ಎನ್ನಲಾಗಿದ್ದು, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸದ್ಯ ಸಿನಿಮಾ ಘೋಷಣೆಯಾಗಿದ್ದು, ಸ್ಕ್ರಿಪ್ಟ್‌ ಅಂತಿಮ ಹಂತದಲ್ಲಿದೆ. ಮುಂದಿನ ವರ್ಷ ಜನವರಿ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ. ಲೀಡಿಂಗ್ ಸ್ಟ್ಯಾಂಡಿಂಗ್ ಮೇಕರ್ಸ್ ಎಂಎಂಎಂ ಗ್ರೂಪ್ಸ್‌ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ನಟನೆ ಜೊತೆಗೆ ಉತ್ತಮ ಡ್ಯಾನ್ಸರ್ ಆಗಿರುವ ಸ್ಮೈಲ್ ಗುರು ರಕ್ಷಿತ್ ತಮ್ಮದೇ ‘ಸ್ಮೈಲ್ ಗುರು ಡ್ಯಾನ್ಸ್ ಗ್ಯಾರೇಜ್’ ಮೂಲಕ ಡ್ಯಾನ್ಸ್‌ ತರಬೇತಿ ನೀಡುತ್ತಿದ್ದಾರೆ. ಒಂದಷ್ಟು ತಯಾರಿಗಳೊಂದಿಗೆ ರಕ್ಷಿತ್ ಸ್ಯಾಂಡಲ್‌ವುಡ್‌ಗೆ ಅಡಿ ಇಡುತ್ತಿದ್ದು, ಮಹೇಶ್ ಬಾಬು ಈ ಚಿತ್ರ ನಿರ್ದೇಶಿಸುತ್ತಿರುವುದು ಭರವಸೆ ಮೂಡಿಸಿದೆ.

LEAVE A REPLY

Connect with

Please enter your comment!
Please enter your name here