ಈ ವರ್ಷದ ಬಹುನಿರೀಕ್ಷಿತ ತಮಿಳು ಸಿನಿಮಾ ‘ಲಿಯೋ’ ಟ್ರೈಲರ್‌ ಬಿಡುಗಡೆಯಾಗಿದೆ. ವಿಜಯ್‌ ಹೀರೋ ಆಗಿ ನಟಿಸಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅರ್ಜುನ್‌ ಸರ್ಜಾ, ಸಂಜಯ್‌ ದತ್‌, ತ್ರಿಷಾ, ಗೌತಮ್‌ ಮೆನನ್‌ ಇದ್ದಾರೆ. ಇದೊಂದು ಆಕ್ಷನ್‌ – ಎಂಟರ್‌ಟೇನರ್‌ ಎನ್ನುವುದನ್ನು ಟ್ರೈಲರ್‌ ಹೇಳುತ್ತದೆ.

ವಿಜಯ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಲಿಯೋ’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಲೋಕೇಶ್ ಕನಗರಾಜ್ ಬರೆದು, ನಿರ್ದೇಶಿಸಿರುವ ಚಿತ್ರದಲ್ಲಿ ಅರ್ಜುನ್ ಸರ್ಜಾ, ಸಂಜಯ್ ದತ್ ಮತ್ತು ತ್ರಿಷಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೊಂದು ಕಂಪ್ಲೀಟ್‌ ಆಕ್ಷನ್‌ – ಎಂಟರ್‌ಟೇನರ್‌ ಎನ್ನುವುದು ಟ್ರೈಲರ್‌ ಮೂಲಕ ತಿಳಿದುಬರುತ್ತದೆ. ಟ್ರೈಲರ್‌ನಲ್ಲಿ ತೋರಿಸಿರುವಂತೆ ಒಬ್ಬ ಸೀರಿಯಲ್‌ ಕಿಲ್ಲರ್‌ ರಸ್ತೆಯಲ್ಲಿ ಸಿಕ್ಕ-ಸಿಕ್ಕವರನೆಲ್ಲಾ ಸಾಯಿಸುತ್ತಿರುತ್ತಾನೆ. ಆಗ ಪೊಲೀಸ್‌ ಅಧಿಕಾರಿ (ಗೌತಮ್‌ ಮೆನನ್) ಆ ಸೀರಿಯಲ್‌ ಕಿಲ್ಲರ್‌ನನ್ನು ಶೂಟ್‌ ಮಾಡುತ್ತಾನೆ. ಅವನು ರಿವಾಲ್ವರ್‌ ಅನ್ನು ಮತ್ತೆ ಲೋಡ್‌ ಮಾಡುವಷ್ಟರಲ್ಲಿ ಆ ಸೀರಿಯಲ್‌ ಕಿಲ್ಲರ್‌, ಪೊಲೀಸ್‌ ಅಧಿಕಾರಿ ಮೇಲೆ ಫೈರ್‌ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ‘ಈಗ ಆ ಪೊಲೀಸ್‌ ಅಧಿಕಾರಿ ಗನ್‌ ನಿನ್ನ ಕೈಯಲ್ಲಿ ಇದೆ. ಗುರಿ ಕೂಡಾ ನಿನ್ನ ಮುಂದೆ ಇದೆ, ಏನು ಮಾಡುತ್ತೀಯ’ ಎಂದು ವಿಜಯ್‌ಗೆ ಕೇಳುತ್ತಾನೆ. ನಂತರ ಅರ್ಜುನ್‌ ಸರ್ಜಾ, ಸಂಜಯ್‌ ದತ್‌, ತ್ರಿಷಾ ಎಲ್ಲರ ಪಾತ್ರಗಳೂ ಪರಿಚಯವಾಗುತ್ತವೆ.

ಟ್ರೈಲರ್‌ನಲ್ಲಿ ವಿಜಯ್‌ – ತ್ರಿಷಾ ದಂಪತಿಯಾಗಿ, ಅವರಿಗೊಬ್ಬಳು ಮಗಳನ್ನು ತೋರಿಸಲಾಗಿದೆ. ಆಕ್ಷನ್‌, ರಕ್ತಪಾತ, ಸೇಡಿನ ಜೊತೆ ಭಾವನಾತ್ಮಕ ಅಂಶಗಳು ಕಾಣಿಸುತ್ತವೆ. ವಿಜಯ್‌ ಅವರು ಲಿಯೋ ದಾಸ್‌ ಹಾಗೂ ಪಾರ್ಥಿ ಎಂಬ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ.‌ ಚಿತ್ರದಲ್ಲಿ ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಮ್ಯಾಥ್ಯೂ ಥಾಮಸ್, ಪ್ರಿಯಾ ಆನಂದ್, ಸ್ಯಾಂಡಿ, ಜನನಿ, ಅಭಿರಾಮಿ ವೆಂಕಟಾಚಲಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫ್ಯಾನ್‌ ಇಂಡಿಯಾ ಚಲನಚಿತ್ರವನ್ನು 7 Screen Studio ಮತ್ತು The Routeಗಳು ನಿರ್ಮಿಸಿದ್ದು, ಇದು ಅಕ್ಟೋಬರ್ 19ರಂದು ಮೂಲ ತಮಿಳು ಸೇರಿದಂತೆ ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

https://x.com/Dir_Lokesh/status/1671586282022084620?s=20

LEAVE A REPLY

Connect with

Please enter your comment!
Please enter your name here