ದುನಿಯಾ ಸೂರಿ ಮತ್ತು ಶಿವರಾಜ್ ಕುಮಾರ್ ಅಂದ್ರೆ ಅಲ್ಲೊಂದು ವಿಶೇಷ ಇದ್ದೇ ಇರುತ್ತದೆ ಅನ್ನೋದು ಚಿತ್ರರಸಿಕರ ಅನಿಸಿಕೆ. ಈ ಅನಿಸಿಕೆ  ಶಿವರಾಜ್ ಕುಮಾರ್ ಅವರಿಗೂ ಇರೋದ್ರಿಂದ ಅವರು ಮತ್ತೆ ದುನಿಯಾ ಸೂರಿ ಜೊತೆ ಮತ್ತೊಂದು ಸಿನಿಮಾ ಮಾಡಲು ಸಿದ್ಧವಾಗಿರೋ ಸುದ್ದಿ ಬಂದಿದೆ.

‘ಕಡ್ಡಿ ಪುಡಿ’ ಮತ್ತು ‘ಟಗರು’ ಸೂರಿ ಮತ್ತು ಶಿವರಾಜ್ ಕುಮಾರ್ ಅವರ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಎರಡು ಸಿನಿಮಾಗಳು. ಸೂರಿ ಅವರು ಪುನೀತ್ ರಾಜ್ ಕುಮಾರ್ ಅವರಿಗೆ ‘ಜಾಕಿ’, ‘ಅಣ್ಣಾಬಾಂಡ್’, ‘ದೊಡ್ಮನೆ ಹುಡುಗ’ ಚಿತ್ರಗಳನ್ನು ಮಾಡಿದ್ದರೂ, ಅವರು ಶಿವಣ್ಣ ಅವರ ಜೊತೆ ಸಿನಿಮಾ ಮಾಡಿದರೆ ಅದರ ಖದರ್ರೇ ಬೇರೆ ಎಂಬ ಮಾತಿದೆ. ಈ ಮಾತಿಗೆ ಕಾರಣ. ‘ಕಡ್ಡಿ ಪುಡಿ’ ಮತ್ತು ‘ಟಗರು’ ಚಿತ್ರಗಳು. ‘ಕಡ್ಡಿ ಪುಡಿ’ ಚಿತ್ರದಲ್ಲಿ ರೌಡಿಸಂ ಬಿಟ್ಟ ರೌಡಿಯೊಬ್ಬನ ಕಥೆ ಹೇಳಿದ್ದ ಸೂರಿ ಅಲ್ಲಿ ಮಾಸ್ ಸಬ್ಜೆಕ್ಟ್‌ ನಲ್ಲೂ ಕ್ಲಾಸ್ ಅಂಶಗಳನ್ನು ಸೇರಿಸಿ ಅಪರೂಪದ ಸಿನಿಮಾ ಮಾಡಿದ್ದರು. ಅದಾದ ನಂತರ ‘ಟಗರು’ ಚಿತ್ರದಲ್ಲಿ ಶಿವಣ್ಣ ಅವರನ್ನು ಪೊಲೀಸ್ ಆಗಿ ತೋರಿಸಿ, ಅದರಲ್ಲಿ ಡಾಲಿ ಫ್ಲೇವರ್ ಸೇರಿಸಿ ಧನಂಜಯ ಅವರ ಮೂಲಕ ಇನ್ನೊಂದು ವಿಭಿನ್ನ ರೀತಿಯ ಸಿನಿಮಾ ಮಾಡಿದ್ದರು. ಹಾಗಾಗಿ ಇದೇ ನಂಬಿಕೆಯಲ್ಲಿ ಇವರಿಬ್ಬರೂ ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದು ‘ಟಗರು 2’ ಆಗುತ್ತೆ ಅಂತ ಕೆಲವು ಸುದ್ದಿಗಳೂ ಇದ್ದವು.

ಆದರೆ ಇನ್ನೂ ಯಾವುದೂ ಅಫಿಷಿಯಲ್ ಆಗಿಲ್ಲ ಎನ್ನುವಂಥ ಪರಿಸ್ಥಿತಿಯಲ್ಲಿ ಶಿವರಾಜ್ ಕುಮಾರ್ ಸೂರಿ ಅವರ ಜೊತೆಗಿನ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಹಾಗಂತ ಈಗಲೂ ಕೂಡ ಯಾವ ಅಫಿಷಿಯಲ್ ಸುದ್ದಿಯೂ ಇಲ್ಲ. ಇದೂ ಕೇವಲ ಬರಿ ಮಾತಿನ ಭರವಸೆ ಅಷ್ಟೇ. ಸೂರಿ ಸದ್ಯಕ್ಕೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮಾಡ್ತಾ ಇದ್ದಾರೆ. “ಆದಷ್ಟು ಬೇಗ ಇಬ್ಬರೂ ಭೇಟಿ ಮಾಡಿ ಚರ್ಚಿಸುತ್ತೇವೆ. ಅವರ ಮೇಕಿಂಗ್ ಸ್ಟೈಲ್ RAW ಆಗಿಕುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ನನ್ನ ಜೊತೆ ಮಾಡುವ ಸಿನಿಮಾದಲ್ಲಿ ಅವರು ಇನ್ನೂ ವಿಭಿನ್ನವಾಗಿ ಯೋಚನೆ ಮಾಡುತ್ತಾರೆ. ನಮ್ಮ ಕಾಂಬಿನೇಷನ್ ನ ಹಿಂದಿನ ಎರಡೂ ಸಿನಿಮಾಗಳಿಗಿಂತ ಮುಂದಿನ ಸಿನಿಮಾ ಹೆಚ್ಚು ಇಂಟರೆಸ್ಟಿಂಗ್ ಆಗಿರುತ್ತದೆ” ಎಂದು ಹೇಳಿದ್ದಾರೆ ಶಿವರಾಜ್ ಕುಮಾರ್. ಹಾಗಾಗಿ, ಇದು ಸೂರಿ ಮತ್ತು ಶಿವಣ್ಣ ಮತ್ತೆ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿಗೆ ಮತ್ತೊಮ್ಮೆ ಪುಷ್ಠಿ ನೀಡುವ ಸುದ್ದಿ ಎನ್ನಬಹುದು. ಆದರೆ ಇನ್ನೂ ಚಿತ್ರ ಮಾಡೋದು, ಅದರ ಹೆಸರು ಮುಂತಾದ ವಿವರಗಳು ಕನ್ಫರ್ಮ್ ಆಗಿಲ್ಲ ಎಂದೇ ಹೇಳಬಹುದು.

LEAVE A REPLY

Connect with

Please enter your comment!
Please enter your name here