ರಜನೀಕಾಂತ್ ಅಭಿನಯದ ‘ಅನ್ನಾತ್ತೆ’ ತಮಿಳು ಚಿತ್ರದ ಇಂಟ್ರಡಕ್ಷನ್ ಸಾಂಗ್ ರಿಲೀಸ್ ಆಗಿದೆ. ಇದು ಮೇರು ಗಾಯಕ ಎಸ್‌ಪಿಬಿ ಹಾಡಿದ ಕೊನೆಯ ಹಾಡು ಎನ್ನುವುದು ವಿಶೇಷ.

ಜನಪ್ರಿಯ ನಟ ರಜನೀಕಾಂತ್‌ ಅಭಿನಯದ ‘ಅನ್ನಾತ್ತೆ’ ತಮಿಳು ಚಿತ್ರದ ಇಂಟ್ರಡಕ್ಷನ್ ಸಾಂಗ್ ಬಿಡುಗಡೆಯಾಗಿದೆ. ನಾಯಕನನ್ನು ಪರಿಚಯಿಸುವ ಈ ಹಾಡಿಗೆ ಎಸ್‌ಪಿಬಿ ದನಿಯಾಗಿದ್ದಾರೆ. ಸಾಮಾನ್ಯವಾಗಿ ರಜನೀಕಾಂತ್‌ ಸಿನಿಮಾಗಳ ಇಂಟ್ರಡಕ್ಷನ್ ಸಾಂಗ್‌ಗಳನ್ನು ಎಸ್‌ಪಿಬಿಯವರೇ ಹಾಡುವುದು ವಾಡಿಕೆ. ಅಂತೆಯೇ ‘ಅನ್ನಾತ್ತೆ’ ಚಿತ್ರಕ್ಕೂ ಅವರು ಹಾಡಿದ್ದರು. ಈ ಬಗ್ಗೆ ರಜನೀಕಾಂತ್‌, “ಕಳೆದ ನಲವತ್ತೈದು ವರ್ಷಗಳಿಂದ ಅವರು ನನಗೆ ಹಾಡುತ್ತಿದ್ದರು. ನನ್ನ ವೃತ್ತಿ ಬದುಕಿನ ಯಶಸ್ಸಿನಲ್ಲಿ ಅವರ ಹಾಡುಗಳ ಕೊಡುಗೆ ಮಹತ್ವದ್ದು. ನನ್ನ ಚಿತ್ರದ ಹಾಡೇ ಅವರ ಕೊನೆಯ ಹಾಡಾಗುತ್ತದೆ ಎಂದು ನಾನು ಎಣಿಸಿರಲಿಲ್ಲ” ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

‘ಅನ್ನಾತ್ತೆ’ ಹಾಡಿದ ಕೆಲವೇ ದಿನಗಳಲ್ಲಿ ಎಸ್‌.ಪಿ.ಬಿ ಅವರು ಕೋವಿಡ್‌ ಸಂಕಷ್ಟಕ್ಕೀಡಾದರು. ಮುಂದೆ ಚೇತರಿಸಿಕೊಳ್ಳದೆ ಇಹಲೋಕ ತ್ಯಜಿಸಿದರು. ‘ಅನ್ನಾತ್ತೆ’ ಹಾಡು ಮತ್ತು ರಜನೀಕಾಂತ್‌ ಟ್ವೀಟ್‌ನಿಂದ ಸಿನಿಮಾ ಲೋಕಕ್ಕೆ ಎಸ್‌ಪಿಬಿ ನೆನಪು ಮರುಕಳಿಸಿದೆ. ಈ ಹಾಡಿಗೆ ಸಂಗೀತ ಸಂಯೋಜಿಸಿರುವವರು ಡಿ.ಇಮಾನ್‌. ವಿವೇಕ್ ರಚನೆಯ ಗೀತೆ. ಎಸ್‌ಪಿಬಿ ಹಾಡಿರುವ ‘ಅನ್ನಾತ್ತೆ’ ಹಾಡು ಎನರ್ಜಟಿಕ್ ಆಗಿದ್ದು, ಅವರ ಅಭಿಮಾನಿಗಳು ಇಷ್ಟಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಶಿವ ನಿರ್ದೇಶನದ ‘ಅನ್ನಾತ್ತೆ’ ನವೆಂಬರ್‌ ತಿಂಗಳಲ್ಲಿ ದೀಪಾವಳಿಗೆ ತೆರೆಗೆ ಬರಲಿದೆ. ನಯನತಾರಾ ಮತ್ತು ಕೀರ್ತಿ ಸುರೇಶ್ ಈ ಚಿತ್ರದ ಇಬ್ಬರು ನಾಯಕಿಯರು.

LEAVE A REPLY

Connect with

Please enter your comment!
Please enter your name here