ಸುಭಾಷ್‌ ಘಾಯ್‌ ಚಿತ್ರಕಥೆ ಬರೆದು ನಿರ್ಮಿಸಿರುವ ’36 ಫಾರ್ಮ್‌ಹೌಸ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಂಜಯ್‌ ಮಿಶ್ರಾ, ವಿಜಯ್‌ ರಾಝ್‌, ಅಮೋಲ್‌ ಪರಾಶರ್‌ ನಟನೆಯ ಸಿನಿಮಾ ಜನವರಿ 21ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

“ಸುದೀರ್ಘ ಅವಧಿಯ ನಂತರ ಚಿತ್ರವೊಂದನ್ನು ತಯಾರಿಸಿದ್ದೇನೆ. ಮೊದಲ ಬಾರಿಗೆ OTT ಪ್ಲಾಟ್‌ಫಾರ್ಮ್‌ಗೆ ಸಿನಿಮಾ ಮಾಡಿದ್ದು, ಇದು ನನಗೆ ಹೊಸ ಅನುಭವ. ಮತ್ತೊಮ್ಮೆ ಸಿನಿಮಾ ಮೇಕಿಂಗ್‌ಗೆ ಸಂಬಂಧಿಸಿದಂತೆ ನನ್ನೆಲ್ಲಾ ಪ್ರತಿಭೆಯನ್ನು ಬಳಸಿ ’36 ಫಾರ್ಮ್‌ ಹೌಸ್‌’ ಮಾಡಿದ್ದೇನೆ. ಆಸಕ್ತಿಕರ ಕತೆ, ಅದಕ್ಕೆ ಹೊಂದುವಂತಹ ಕಲಾವಿದರು ಇದ್ದಾರೆ. ಹಾಡುಗಳನ್ನು ರಚಿಸಿ ಎರಡು ಹಾಡುಗಳಿಗೆ ನಾನೇ ಸಂಗೀತ ಸಂಯೋಜಿಸಿದ್ದೇನೆ” ಎಂದಿದ್ದಾರೆ ಬಾಲಿವುಡ್‌ ನಿರ್ದೇಶಕ ಸುಭಾಷ್‌ ಘಾಯ್‌. ರಾಮ್‌ ಲಖನ್‌, ಖಳ್‌ನಾಯಕ್‌, ಪರ್‌ದೇಸ್‌ನಂತಹ ಹಿಟ್‌ ಹಿಂದಿ ಸಿನಿಮಾಗಳ ನಿರ್ದೇಶಕ ಘಾಯ್‌ ಮೊದಲ ಬಾರಿ ಓಟಿಟಿಗೆ ಸಿನಿಮಾ ಮಾಡಿದ್ದಾರೆ. ಕತೆ, ಚಿತ್ರಕತೆ, ನಿರ್ಮಾಣ ಅವರದ್ದಾದರೆ ರಾಮ್‌ ರಮೇಶ್‌ ಶರ್ಮಾ ಚಿತ್ರದ ನಿರ್ದೇಶಕ.

ZEE5ನಲ್ಲಿ 21ರಿಂದ ಸ್ಟ್ರೀಮ್‌ ಅಗಲಿರುವ ’36 ಫಾರ್ಮ್‌ಹೌಸ್‌’ ಟ್ರೈಲರ್‌ ಬಿಡುಗಡೆಯಾಗಿದ್ದು, ಇದೊಂದು ಕಾಮಿಡಿ ಆಫ್‌ ಎರರ್ಸ್‌ ಎನ್ನುವ ಸೂಚನೆ ನೀಡುತ್ತದೆ. ಭವ್ಯವಾದ ಫಾರ್ಮ್‌ಹೌಸ್‌, ಆ ಮನೆಯ ತುಂಬಾ ಜನರು, ಭಿನ್ನ ಪಾತ್ರಗಳ ಮೂಲಕ ಟ್ರೈಲರ್‌ ಕಲರ್‌ಫುಲ್‌ ಆಗಿದೆ. ಸಂಜಯ್‌ ಮಿಶ್ರಾ, ವಿಜಯ್‌ ರಾಜ್‌, ಅಮೋಲ್‌ ಪರಾಶರ್‌, ಫ್ಲೋರಾ ಸೈನಿ, ಬರ್ಖಾ ಸಿಂಗ್‌, ಮಾಧುರಿ ಭಾಟಿಯಾ, ಅಶ್ವಿನಿ ಕಲ್ಸೇಕರ್‌ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Previous articleತಿಳಿಹಾಸ್ಯದ ಫೀಲ್‌ಗುಡ್‌ ಮೂವೀ ‘ಮೀನಾಕ್ಷಿ ಸುಂದರೇಶ್ವರ್’
Next articleನಟ ಅನೀಶ್‌ ಹೊಸ ಸಿನಿಮಾ ‘ಬೆಂಕಿ’; ಬರ್ತ್‌ಡೇಗೆ ರಿವೀಲ್‌ ಆಯ್ತು ಫಸ್ಟ್‌ ಲುಕ್‌

LEAVE A REPLY

Connect with

Please enter your comment!
Please enter your name here