ಸುದೀಪ್‌ ಅಭಿನಯದ 46ನೇ ಸಿನಿಮಾದ ಕ್ಯಾರಕ್ಟರ್‌ ಟೀಸರ್‌ ಬಿಡುಗಡೆಯಾಗಿದೆ. ‘ವಿಕ್ರಾಂತ ರೋಣ’ ನಂತರ ಸೆಟ್ಟೇರುತ್ತಿರುವ ಚಿತ್ರವಿದು. ಇದೊಂದು ಆಕ್ಷನ್‌ ಎಂಟರ್‌ಟೇನರ್‌ ಎನ್ನುವುದನ್ನು ಟ್ರೈಲರ್‌ ಹೇಳುತ್ತದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಟೀಸರ್‌ ಬಿಡುಗಡೆಯಾಗಿದೆ.

‘I’m not a human, I’m a demon’ – ಸುದೀಪ್‌ ನೂತನ ಸಿನಿಮಾದ ಟೀಸರ್‌ ಕೊನೆಯಲ್ಲಿ ಇಂಥದ್ದೊಂದು ಒಕ್ಕಣಿ ಬರುತ್ತದೆ. ಟೀಸರ್‌ನ ಆರಂಭದಲ್ಲಿ, ‘ದೊಡ್ಡ ಕತೆಯ ಚಿಕ್ಕ ಸಿಚ್ಯುಯೇಷನ್‌ ಹೇಳ್ತೀನಿ’ ಎನ್ನುವ ಸುದೀಪ್‌ ಮಾತು. ಮಧ್ಯೆ ಒಂದು ಡೈಲಾಗ್‌ – ‘ಯುದ್ಧ ಹುಟ್ಟುಹಾಕೋರನ್ನು ಕಂಡ್ರೂ ನನಗಾಗಲ್ಲ. ಯುದ್ಧಕ್ಕೆ ಹೆದರಿಕೊಂಡು ಓಡೋರನ್ನು ಕಂಡರೂ ನನಗಾಗಲ್ಲ. ಅಖಾಡಕ್ಕಿಳಿದ ಎದುರಾಳಿಗಳ ಎದೆ ಬಗೆದು ಆ ರಕ್ತ ಚೆಲ್ಲಾಡಿಕೊಂಡು ಓಡಿ ಹೋಗೋದನ್ನು ನೋಡೋನು ನಾನು’. ತಮ್ಮ ನೆಚ್ಚಿನ ನಟನ ನೂತನ ಸಿನಿಮಾ ಯಾವಾಗ ಎಂದು ಕಾಯುತ್ತಿದ್ದ ಅಭಿಮಾನಿಗಳಿಗಾಗಿ ಸುದೀಪ್‌ ಕಲರ್‌ಫುಲ್‌ ಟೀಸರ್‌ ಬಿಟ್ಟಿದ್ದಾರೆ. ಮೇಲ್ನೋಟಕ್ಕೆ ಇದೊಂದು PAN ಇಂಡಿಯಾ ಪ್ರಾಜೆಕ್ಟ್‌ ಎನ್ನುವುದು ತಿಳಿದುಬರುತ್ತದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಕ್ಯಾರಕ್ಟರ್‌ ಟೀಸರ್‌ ರಿಲೀಸ್‌ ಆಗಿದೆ. ವಿಜಯ್‌ ಕಾರ್ತಿಕೇಯ ನಿರ್ದೇಶಿಸುತ್ತಿರುವ ಚಿತ್ರದ ಶೀರ್ಷಿಕೆಯಿನ್ನೂ ರಿವೀಲ್‌ ಆಗಿಲ್ಲ. ಅಜನೀಶ್‌ ಲೋಕನಾಥ್‌ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

Previous articleಕನ್ನಡ ಸಿನಿಮಾ ನಿರ್ಮಾಪಕ, ವಿತರಕ, ಪ್ರದರ್ಶಕ ಕೆ ಸಿ ಎನ್‌ ಮೋಹನ್‌ ನಿಧನ
Next articleಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ಸೂಜಿಮೊನೆ ‘ಮಾಮನ್ನನ್‌’

LEAVE A REPLY

Connect with

Please enter your comment!
Please enter your name here