ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್‌’ ಆಕ್ಷನ್‌ – ಥ್ರಿಲ್ಲರ್‌ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ರಣಬೀರ್‌ ಕಪೂರ್‌ ಹೀರೋ ಆಗಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅನಿಲ್‌ ಕಪೂರ್‌, ಬಾಬ್ಬಿ ಡಿಯೋಲ್‌, ರಶ್ಮಿಕಾ ಮಂದಣ್ಣ ಇದ್ದಾರೆ. ಆಗಸ್ಟ್‌ 11ರಂದು ಸಿನಿಮಾ ತೆರೆಕಾಣಲಿದೆ.

ಕೈಲಿ ಕೊಡಲಿ ಹಿಡಿದು ಬಡಿದಾಡುವ ರಣಬೀರ್‌ ಕಪೂರ್‌ ‘ಅನಿಮಲ್‌’ ಟೀಸರ್‌, ಆಕ್ಷನ್‌ – ಥ್ರಿಲ್ಲರ್‌ ಸಿನಿಮಾ ಎನ್ನುವುದಕ್ಕೆ ಇಂಬು ನೀಡುತ್ತದೆ. ಮುಖವಾಡ ತೊಟ್ಟ ಎದುರಾಳಿಗಳ ಜೊತೆ ಏಕಾಂಗಿಯಾಗಿ ಕಾದುವ ಬಿಳಿ ಕುರ್ತಾ ಮತ್ತು ಧೋತಿ ತೊಟ್ಟ ರಣಬೀರ್‌ ಪಾತ್ರ ತುಂಬಾ ಸಂಕೀರ್ಣವಾಗಿದೆ. ಟೀಸರ್‌ ವೀಡಿಯೋದ ಹಿನ್ನೆಲೆಯಲ್ಲಿ ಪಂಜಾಗಿ ಹಾಡೊಂದು ಕೇಳಿಸುತ್ತದೆ. ಈ ಹಿಂದೆ ಕೊಡಲಿಯೊಂದಿಗಿನ ರಕ್ತಸಿಕ್ತ ಹೀರೋ ‘ಅನಿಮಲ್‌’ ಫಸ್ಟ್‌ ಪೋಸ್ಟರ್‌ ಬಿಡುಗಡೆಯಾಗಿತ್ತು. ಇದೊಂದು ಗ್ಯಾಂಗ್‌ಸ್ಟರ್‌ ಸ್ಟೋರಿ ಎಂದಿದ್ದರು ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ. ಈಗ ಟೀಸರ್‌ ಬಿಡುಗಡೆಯಾಗಿದ್ದು ರಣಬೀರ್‌ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ನಾನಾ ರೀತಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ನಟ ರಣಬೀರ್‌ ಕಪೂರ್‌, ‘ಚಿತ್ರದಲ್ಲಿನ ನನ್ನ ಪಾತ್ರದ ಮೇಕಪ್‌ನೊಂದಿಗೆ ಕನ್ನಡ ಎದುರು ಹೋಗಿ ನಿಂತಾಗ ನನಗೇ ಭಯವಾಗಿತ್ತು!’ ಎಂದಿದ್ದರು. ಕನ್ನಡತಿ ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ಸಂದೀಪ್‌ ಕೂಡ ದಕ್ಷಿಣ ಭಾರತೀಯ. ಹೀಗಾಗಿ ಚಿತ್ರವನ್ನು ದಕ್ಷಿಣದ ಭಾಷೆಗಳಲ್ಲೂ ತೆರೆಗೆ ತರುವುದು ನಿರ್ಮಾಪಕ ಯೋಜನೆ. ‘ಅನಿಮಲ್‌ ಚಿತ್ರದಲ್ಲಿ ಲಾರ್ಜರ್‌ ದ್ಯಾನ್‌ ಲೈಫ್‌ ವಿಶ್ಯುಯಲ್ಸ್‌ ಇರಲಿವೆ. ನಮಗೆ ಇದೊಂದು ಸವಾಲಿನ ಚಿತ್ರ. ಇಲ್ಲಿ ಆಕ್ಷನ್‌, ಎಮೋಷನ್ಸ್‌, ಹೀರೋಯಿಸಂ ಇವೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಮುರದ್‌ ಖೇತಾನಿ. ರಣಬೀರ್‌ ಕಪೂರ್‌ ಅಭಿನಯದ ಕೊನೆಯ ಸಿನಿಮಾ ‘Tu Jhoothi Main Makkaar’. ಶ್ರದ್ಧಾ ಕಪೂರ್‌ ನಾಯಕಿಯಾಗಿ ನಟಿಸಿದ್ದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಕಂಡಿತ್ತು.

Previous article‘Supplier ಶಂಕರ’ ಶೂಟಿಂಗ್‌ ಕಂಪ್ಲೀಟ್‌ | ನಿಶ್ಚಿತ್‌ – ದೀಪಿಕಾ ಜೋಡಿ ಸಿನಿಮಾ
Next articleರಂಜನೆ ಜೊತೆ ಸಂದೇಶ ‘ರೇವ್‌ ಪಾರ್ಟಿ’ | ರಾಜು ಬೋನಗಾನಿ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here