ಹಿಂದಿ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್‌ ಅವರು ಬಿಗ್‌ ಬಾಸ್‌ ಹಿಂದಿ ಅವತರಣಿಕೆಯ 15ನೇ ಸೀಸನ್‌ ವಿನ್ನರ್‌ ಆಗಿದ್ದಾರೆ. ನಿನ್ನೆ ನಡೆದ ಫಿನಾಲೆಯಲ್ಲಿ ನಿರೂಪಕ ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ ವಿಜೇತರನ್ನು ಘೋಷಿಸಿದರು. ತೇಜಸ್ವಿ ಪ್ರಕಾಶ್‌ ಟ್ರೋಫಿ ಜೊತೆ 40 ಲಕ್ಷ ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು.

ನಾಲ್ಕು ತಿಂಗಳ ಬಿಗ್‌ಬಾಸ್‌ 15ನೇ ಸೀಸನ್‌ ಪೂರ್ಣಗೊಂಡಿದ್ದು, ಕಿರುತೆರೆ ನಟಿ ತೇಜಸ್ವಿ ಪ್ರಕಾಶ್‌ ಗೆದ್ದು ಬೀಗಿದ್ದಾರೆ. ಬಿಗ್‌ಬಾಸ್‌ ಟ್ರೋಫಿ ಜೊತೆ 40 ಲಕ್ಷ ರೂಪಾಯಿ ಬಹುಮಾನ ಮೊತ್ತ ಅವರದಾಗಿದೆ. ಪ್ರತೀಕ್‌ ಸೆಹಜ್‌ಪಾಲ್‌ ಮತ್ತು ಕರಣ್‌ ಕುಂದ್ರಾ ಮೊದಲ ಮತ್ತು ಎರಡನೇ ರನ್ನರ್‌ ಅಪ್‌ ಆಗಿ ಆಯ್ಕೆಯಾದರು. ಶಮಿತಾ ಶೆಟ್ಟಿ ಮತ್ತು ನಿಶಾಂತ್‌ ಭಟ್‌ ಟಾಪ್‌ ಫೈವ್‌ ಸ್ಪರ್ಧಿಗಳ ಪಟ್ಟಿಯಲ್ಲಿದ್ದರು. ನಿಶಾಂತ್‌ ಅವರು ಹತ್ತು ಲಕ್ಷ ರೂಪಾಯಿ ಹಣದೊಂದಿಗೆ ಸ್ಪರ್ಧೆಯಿಂದ ಹೊರನಡೆದರೆ ನಟಿ ಶಮಿತಾ ಅವರನ್ನು ಸ್ಪರ್ಧೆಯಿಂದ ಎವಿಕ್ಟ್‌ ಅದರು. ಕಿರುತೆರೆಯ ಜನಪ್ರಿಯ ನಟಿ ತೇಜಸ್ವಿ ಪ್ರಕಾಶ್‌ ಬಿಗ್‌ಬಾಸ್‌ ಮನೆಯಲ್ಲಿ ಆರಂಭದಿಂದಲೂ ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಆಗಿ ವೀಕ್ಷಕರ ಗಮನ ಸೆಳೆದ ಸ್ಪರ್ಧಿಯಾಗಿದ್ದರು. ವೋಟಿಂಗ್‌ ಮೂಲಕವೂ ವೀಕ್ಷಕರು ಅವರನ್ನು ಬೆಂಬಲಿಸಿದ್ದಾರೆ.

ಬಿಗ್‌ಬಾಸ್‌ – 15 ಅಕ್ಟೋಬರ್‌ನಲ್ಲಿ ಶುರುವಾಗಿತ್ತು. ಜನವರಿ 16ರಂದು ನಡೆಯಬೇಕಿದ್ದ ಫಿನಾಲೆ ಎರಡು ವಾರ ಮುಂದೂಡಲ್ಪಟ್ಟಿತ್ತು. ಫಿನಾಲೆ ಸಮಾರಂಭದಲ್ಲಿ ನಟ, ನಿರೂಪಕ ಸಲ್ಮಾನ್‌ ಖಾನ್‌ ಅವರು ‘ಗೆಹರಾಯಿಯಾ’ ಹಿಂದಿ ಸಿನಿಮಾದ ಕಲಾವಿದರಾದ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ, ಸಿದ್ಧಾಂತ್‌ ಚತುರ್ವೇದಿ, ಧೈರ್ಯ ಕರ್ವಾ ಅವರೊಂದಿಗೆ ಚಿಟ್‌ಚಾಟ್‌ ನಡೆಸಿದರು. ‘ಗೆಹರಾಯಿಯಾ’ ಚಿತ್ರತಂಡದವರೇ ಬಿಗ್‌ಬಾಸ್‌ ಅಂತಿಮ ಮೂರು ಸ್ಪರ್ಧಿಗಳನ್ನು ಘೋಷಿಸಿದರು. ಅಗಲಿದ ನಟ, ಬಿಗ್‌ಬಾಸ್‌ ಸ್ಪರ್ಧಿ ಸಿದ್ದಾರ್ಥ ಶುಕ್ಲಾ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

LEAVE A REPLY

Connect with

Please enter your comment!
Please enter your name here