ನೆಟ್‌ಫ್ಲಿಕ್ಸ್‌ ಸಿನಿಮಾ ‘ಥಾರ್‌’ನಲ್ಲಿ ಅಪ್ಪ (ಅನಿಲ್‌ ಕಪೂರ್‌) – ಮಗ (ಹರ್ಷವರ್ಧನ್‌) ಜೊತೆಯಾಗಿ ನಟಿಸುತ್ತಿದ್ಧಾರೆ. ರಾಜ್‌ ಸಿಂಗ್‌ ಚೌಧರಿ ನಿರ್ದೇಶನದ ಈ ರಿವೇಂಜ್‌ ಡ್ರಾಮಾದ ಫಸ್ಟ್‌ಲುಕ್‌ ಇಂದು ಬಿಡುಗಡೆಯಾಗಿದೆ.

ಬಾಲಿವುಡ್‌ ನಟ ಅನಿಲ್‌ ಕಪೂರ್‌ ತಾವು ನಟಿಸುತ್ತಿರುವ ನೆಟ್‌ಫ್ಲಿಕ್ಸ್‌ ರಿವೇಂಜ್‌ ಡ್ರಾಮಾ ‘ಥಾರ್‌’ ಹಿಂದಿ ಸಿನಿಮಾದ ಫಸ್ಟ್‌ಲುಕ್‌ ಶೇರ್‌ ಮಾಡಿದ್ದಾರೆ. ಚಿತ್ರದಲ್ಲಿ ಅನಿಲ್‌ ಕಪೂರ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿದ್ದು, ಅವರ ಪುತ್ರ ಹರ್ಷವರ್ಧನ್‌ ಜೊತೆ ತೆರೆ ಹಂಚಿಕೊಳ್ಳುತ್ತಿದ್ಧಾರೆ. ಈ ಹಿಂದೆ ಅಪ್ಪ – ಮಗ ಇಬ್ಬರೂ ‘AK v/s AK’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈಗ ‘ಥಾರ್‌’ನಲ್ಲಿ ಎರಡನೇ ಬಾರಿಗೆ ಜೊತೆಯಾಗಿದ್ಧಾರೆ. ಹರ್ಷವರ್ಧನ್‌ ಅವರು ಇಲ್ಲಿ ‘ಸಿದ್ದಾರ್ಥ್‌’ ಪಾತ್ರದಲ್ಲಿ ನಟಿಸುತ್ತಿದ್ದು, ತಂದೆಯ ಪಾತ್ರದೊಂದಿಗೆ ಮುಖಾಮುಖಿಯಾಗುತ್ತಿದ್ಧಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫಸ್ಟ್‌ಲುಕ್‌ ಶೇರ್‌ ಮಾಡಿರುವ ಹರ್ಷವರ್ಧನ್‌, “You either brave the storm or fall for the mirage. Watch as @anilskapoor and I clash in ‘Thar’ Arriving soon on Netflix!” ಎಂದು ಬರೆದಿದ್ದಾರೆ.

ಅನಿಲ್‌ ಕಪೂರ್‌ ಅವರ ಲುಕ್‌ ಕುರಿತು ಬಾಲಿವುಡ್‌ ನೃತ್ಯ ಸಂಯೋಜಕಿ, ಚಿತ್ರನಿರ್ದೇಶಕಿ ಪರ್ಹಾ ಖಾನ್‌, “What you looking ya papaji,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪ್ರಾಜೆಕ್ಟ್‌ ಬಗ್ಗೆ ಮಾತನಾಡುವ ಅನಿಲ್‌ ಕಪೂರ್‌, “ರಾಜಸ್ಥಾನದ ಹಿನ್ನೆಲೆಯಲ್ಲಿ ನಡೆಯುವ noir thriller ಕತೆಯಿದು. ಕ್ಲಾಸಿಕ್‌ ವೆಸ್ಟರ್ನ್‌ ಶೈಲಿಯ ನಿರೂಪಣೆ, ಮೇಕಿಂಗ್‌ನೊಂದಿಗೆ ಪ್ರೇಕ್ಷಕರಿಗೆ ಸಿನಿಮಾ ಹೊಸ ಎಕ್ಸ್‌ಪೀರಿಯನ್ಸ್‌ ನೀಡಲಿದೆ. ಈ ಸಿನಿಮಾದ ನಟ, ನಿರ್ಮಾಪಕನಾಗಿ ನಾನು ನೆಟ್‌ಫ್ಲಿಕ್ಸ್‌ ಜೊತೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ” ಎನ್ನುತ್ತಾರೆ. ಫಾತಿಮಾ ಸನಾ ಶೇಕ್‌, ಸತೀಶ್‌ ಕೌಶಿಕ್‌ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗೆ ಚಿತ್ರಕಥೆ ಬರೆದ ಅನುಭವವಿದ್ದ ರಾಜ್‌ ಸಿಂಗ್‌ ಚೌಧರಿ ‘ಥಾರ್‌’ನೊಂದಿಗೆ ನಿರ್ದೇಶಕನಾಗುತ್ತಿದ್ಧಾರೆ.

Previous article‘ಶಾಕುಂತಲಂ’ ಸಿನಿಮಾ ಫಸ್ಟ್‌ಲುಕ್‌; ಸೋಷಿಯಲ್‌ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡ ಸಮಂತಾ
Next articleಟ್ರೈಲರ್‌ | ಪವನ್‌ ಕಲ್ಯಾಣ್‌, ರಾಣಾ ದಗ್ಗುಬಾಟಿ ತೆಲುಗು ಡ್ರಾಮಾ ‘ಭೀಮ್ಲಾ ನಾಯಕ್‌’

LEAVE A REPLY

Connect with

Please enter your comment!
Please enter your name here