ನಿನ್ನೆ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ನಡೆದ Will Smith ಮತ್ತು Chris Rock ಡ್ರಾಮಾ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. ಈ ಘಟನೆಯ ನಂತರ Oscars control roomನಲ್ಲಿ Will Smithರನ್ನು ಸಮಾರಂಭದಿಂದ ಹೊರಹಾಕುವ ಚರ್ಚೆ ನಡೆದಿತ್ತು ಎನ್ನಲಾಗಿದೆ.

ನಿನ್ನೆ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ನಿರೂಪಕ, ಕಮೆಡಿಯನ್‌ Chris Rock ಅವರು ನಟ Will Smith ಪತ್ನಿ Pinkett Smith ಕುರಿತು ಅಪಹಾಸ್ಯ ಮಾಡಿದ್ದರು. ಮೊದಲು ಈ ಜೋಕ್‌ಗೆ ನಕ್ಕ ನಟ ವಿಲ್‌ ಸ್ಮಿತ್‌ ನಂತರ ವೇದಿಕೆಗೆ ತೆರಳಿ ಕ್ರಿಸ್‌ ಕೆನ್ನೆಗೆ ಭಾರಿಸಿದ್ದರು. ಈ ಅನಿರೀಕ್ಷಿತ ಘಟನೆಯಿಂದಾಗಿ ಅಕಾಡೆಮಿ ಮುಜುಗರಕ್ಕೀಡಾಗಿತ್ತು. ಒಂದೆಡೆ ಸೋಷಿಯಲ್‌ ಮೀಡಿಯಾದಲ್ಲಿ ವಿಲ್‌ ಸ್ಮಿತ್‌ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಇದು ಸಮಾರಂಭದ ಘನತೆಗೆ ತಕ್ಕುದಲ್ಲ ಎಂದೇ ಅಕಾಡೆಮಿ ಭಾವಿಸಿತ್ತು. ಘಟನೆಯ ನಂತರ Oscar control roomನಲ್ಲಿ ಗಂಭೀರ ಚರ್ಚೆಗಳು ನಡೆದಿದ್ದವು. ಒಂದು ಹಂತದಲ್ಲಿ Will Smithರನ್ನು ಆಸ್ಕರ್ಸ್‌ನಿಂದ ಎವಿಕ್ಟ್‌ ಮಾಡುವ ನಿರ್ಧಾರವೂ ಬಂದಿತ್ತು ಎನ್ನಲಾಗಿದೆ. ಆದರೆ ಹಾಗಾಗದೆ Smith ಅತ್ಯುತ್ತಮ ನಟ ಪ್ರಶಸ್ತಿ ಪಡೆದರು ಕಪಾಳಮೋಕ್ಷ ಘಟನೆ ನಡೆದ ನಂತರದ ಒಂದು ಗಂಟೆಯಲ್ಲೇ Will Smith ಆಸ್ಕರ್‌ ಟ್ರೋಫಿ ಪಡೆದು ಗೆಲುವಿನ ನಗೆ ಬೀರಿದರು.

ಸಮಾರಂಭದಲ್ಲಿನ ಈ ಕಪಾಳಮೋಕ್ಷ ಘಟನೆ ಅಮೆರಿಕದಲ್ಲಿ ಸೆನ್ಸಾರ್‌ ಆದರೆ, ಜಗತ್ತಿನ ಇತರೆಡೆ ಬಿತ್ತರವಾಯ್ತು. ಲೈವ್‌ ಶೋನಲ್ಲಿ ಆದ ಈ ಘಟನೆಗೆ ಯಾವ ಕ್ರಮ ಕೈಗೊಳ್ಳಬೇಕೆನ್ನುವ ಬಗ್ಗೆ ಅಕಾಡೆಮಿಗೆ ತೀವ್ರ ಗೊಂದಲವಾಗಿತ್ತು ಎನ್ನಲಾಗಿದೆ. ಕೆಲವರು ಇದನ್ನು ಖಂಡಿಸಿದರೆ, ಮತ್ತೆ ಕೆಲವರು Will Smith ಪರ ಮಾತನಾಡಿದ್ದಾರೆ. “ಆದದ್ದು ಆಗಿಹೋಯ್ತು, ದಿ ಶೋ ಮಸ್ಟ್‌ ಗೋ ಆನ್‌” ಎನ್ನುವ ತೀರ್ಮಾನದೊಂದಿಗೆ ಸಮಾರಂಭ ಮುಂದುವರೆಯಿತು. ಆದರೆ ಇವೆಂಟ್‌ ಮುಗಿಯುತ್ತಿದ್ದಂತೆ ಅಕಾಡೆಮಿ ಟ್ವೀಟ್‌ ಮಾಡಿ, “ಕಳೆದ ರಾತ್ರಿಯ ಶೋನಲ್ಲಿ Smith ನಡೆದುಕೊಂಡ ರೀತಿಯನ್ನು ಅಕಾಡೆಮಿ ಖಂಡಿಸುತ್ತದೆ. ಅಕಾಡೆಮಿ Bylaws, Standards ಮತ್ತು California law ಪ್ರಕಾರ ಏನು ಮಾಡಬೇಕೆನ್ನುವ ಕುರಿತು ಗಂಭೀರವಾಗಿ ಯೋಚಿಸುತ್ತೇವೆ” ಎಂದು ಬರೆದಿತು.

ಮುಂದೆ ಪ್ರಶಸ್ತಿ ಪಡೆದ ನಂತರ ಮಾತನಾಡಿದ Will Smith ಘಟನೆಗೆ ಸಂಬಂಧಿಸಿದಂತೆ ಅಕಾಡೆಮಿ ಮತ್ತು ಇತರೆ ನಾಮಿನಿಗಳೆಲ್ಲರಲ್ಲಿ ಕ್ಷಮೆ ಯಾಚಿಸಿದರು. ಕೆಲವು ಗಂಟೆಗಳ ನಂತರ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ಅವರು ಕಮೆಡಿಯನ್‌ Chris Rock ಅವರ ಕ್ಷಮೆಯಾಚಿಸಿದ್ದಾರೆ. ಅಕಾಡೆಮಿ ಸದಸ್ಯ ಮತ್ತು ಆಸ್ಕರ್‌ ವಿನ್ನರ್‌ Whoopi Goldberg ಈ ಬಗ್ಗೆ ಮಾತನಾಡಿ, “ವಿಲ್‌ ಸ್ಮಿತ್‌ ಬಗ್ಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಗಂಭೀರ ಚರ್ಚೆ ನಡೆಯಿತು. Chris Rock ಬಗ್ಗೆಯೂ ಚರ್ಚೆಯಾಯ್ತು. ಅಂತಿಮವಾಗಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸದಸ್ಯರೆಲ್ಲರೂ ಇವೆಂಟ್‌ಗೆ ತೊಂದರೆಯಾಗುವುದು ಬೇಡೆವೆಂದು ನಿರ್ಧರಿಸಿದರು” ಎಂದಿದ್ದಾರೆ.

ಹಾಸ್ಯ ಲಿಮಿಟ್ಸ್‌ ದಾಟಕೂಡದು | ವಿಲ್‌ ಸ್ಮಿತ್‌ ಮತ್ತು ಕ್ರಿಸ್‌ ರಾಕ್‌ ಘಟನೆ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಘಟನೆ ಬಗ್ಗೆ ಹಲವರು ಪೋಸ್ಟ್‌, ಕಾಮೆಂಟ್‌ಗಳನ್ನು ಹಾಕಿದ್ದಾರೆ. ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಘಟನೆ ಬಗ್ಗೆ ಪ್ರತಿಕ್ರಿಯಿಸಿ, “ನಿರೂಪಕ ಸೆನ್ಸಿಟೀವ್‌ ಆಗಿರಬೇಕು. ಹಾಸ್ಯ ಉತ್ತಮ ಅಭಿರುಚಿಯಿಂದ ಕೂಡಿರಬೇಕು. ನಾನು ಕೂಡ Bigg Boss, Dus Ka Dum ಸೇರಿದಂತೆ ಹಲವು ಶೋಗಳನ್ನು ನಿರೂಪಿಸಿದ್ದೇನೆ. ಕೆಲವು ಬಾರಿ ಸ್ಪರ್ಧಿಗಳ ಬಗ್ಗೆ ತೀವ್ರ ಬೇಸರವಾಗುವುದಿದೆ. ಹಾಗೆಂದು ಅವರ ವ್ಯಕ್ತಿತ್ವಕ್ಕೆ ಕುಂದುಂಟಾಗುವಂತೆ ನಡೆದುಕೊಳ್ಳುವುದಿಲ್ಲ. ಎಲ್ಲಾ ಸ್ಪರ್ಧಿಗಳು ಒಂದೇ ಮನೆಯಲ್ಲಿರಬೇಕಾದ ಸಂದರ್ಭದಲ್ಲಿ ನಿರೂಪಕನಾದ ನಾನು ಸೂಕ್ಷ್ಮತೆಯಿಂದ ವರ್ತಿಸಬೇಕಾಗುತ್ತದೆ” ಎಂದು ಅವರು Chriss Rock ಮಾತುಗಳನ್ನು ಖಂಡಿಸಿದ್ದಾರೆ.

LEAVE A REPLY

Connect with

Please enter your comment!
Please enter your name here