ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಸಿನಿಮಾಗೆ ಬಾದಾಮಿಯಲ್ಲಿ ಚಿತ್ರೀಕರಣ ನಡೆದಿದೆ. ಕುಸ್ತಿ ಸುತ್ತ ಹೆಣೆದ ಕತೆಯಿದು. ಸೂರ್ಯ, ಸೋನಾಲ್‌ ಮಾಂಟೆರೊ ಮತ್ತು ಬಿ.ಸಿ.ಪಾಟೀಲ್‌ ಮುಖ್ಯ ಪಾತ್ರಗಳಲ್ಲಿದ್ದು, ನಟ ದರ್ಶನ್‌ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನ, ವನಜಾ ಪಾಟೀಲ್ ನಿರ್ಮಾಣದ ‘ಗರಡಿ’ ಸಿನಿಮಾ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ ತಾಣ ಬಾದಾಮಿಯಲ್ಲಿ ನಡೆದಿದೆ. ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಸುಂದರ ತಾಣದಲ್ಲಿ ‘ಗರಡಿ’ ಚಿತ್ರದ ಟೈಟಲ್ ಸಾಂಗ್ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ. ಕರ್ನಾಟಕ ರಾಜ್ಯದ ಮಂತ್ರಿಗಳು, ನಟರು, ನಿರ್ಮಾಪಕರೂ ಆಗಿರುವ ಬಿ.ಸಿ.ಪಾಟೀಲ್ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಗರಡಿ ಮನೆಯಲ್ಲಿ ತರಬೇತಿ ಪಡೆದಿರುವ ಸಾಕಷ್ಟು ಕುಸ್ತಿಪಟುಗಳು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಬರೀ ಹಾಡಿನ ಚಿತ್ರೀಕರಣವಷ್ಟೇ ಅಲ್ಲದೇ ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂಟೆರೊ, ಕೌರವ ಬಿ‌.ಸಿ.ಪಾಟೀಲ್ ಮುಂತಾದವರ ಅಭಿನಯದಲ್ಲಿ ಮಾತಿನ ಭಾಗದ ಚಿತ್ರೀಕರಣ ಸಹ ನಡೆದಿದೆ.

ಈ ಚಿತ್ರದ ಹೀರೋ ಸೂರ್ಯ ಅವರು ನಟ ದರ್ಶನ್‌ ಅವರ ಆತ್ಮೀಯ ಸ್ನೇಹಿತ. ಈ ವಿಶ್ವಾಸಕ್ಕೆ ದರ್ಶನ್‌ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಕೋವಿಡ್‌ನಿಂದಾಗಿ ಯೋಗರಾಜ್‌ ಭಟ್ಟರ ‘ಗಾಳಿಪಟ 2’ ಸಿನಿಮಾದ ಚಿತ್ರೀಕರಣ ಸುದೀರ್ಘ ಅವಧಿ ತೆಗೆದುಕೊಂಡಿತು. ಚಿತ್ರವೀಗ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿದ್ದು, ಭಟ್ಟರು ‘ಗರಡಿ’ ಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಚಿತ್ರಕ್ಕಿದೆ. ರವಿಶಂಕರ್, ಎಸ್.ಟಿ.ಸೋಮಶೇಖರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ(ಟಗರು), ರವಿಚೇತನ್, ತೇಜಸ್ವಿನಿ ಪ್ರಕಾಶ್ ಇತರರು ನಟಿಸಿದ್ದಾರೆ.

Previous articleಪುರಿ ಜಗನ್ನಾಥ್ – ವಿಜಯ್ ದೇವರಕೊಂಡ ಸಿನಿಮಾ ‘JGM’
Next articleChris Rock ಕೆನ್ನೆಗೆ ಹೊಡೆದ Will Smithರನ್ನು Oscarsನಿಂದ ಹೊರಹಾಕಲು ನಿರ್ಧರಿಸಲಾಗಿತ್ತೇ?

LEAVE A REPLY

Connect with

Please enter your comment!
Please enter your name here