‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್’ ಅಕಾಡೆಮಿಯಿಂದ ಭಾರತೀಯ ಸಿನಿಮಾ ತಾರೆಯರು, ನಿರ್ದೇಶಕರಿಗೆ ಸದಸ್ಯತ್ವಕ್ಕೆ ಆಹ್ವಾನ ಸಿಕ್ಕಿದೆ. ಮಣಿರತ್ನಂ, ಕರಣ್‌ ಜೋಹರ್‌, ಜ್ಯೂನಿಯರ್‌ NTR, ರಾಮ್‌ ಚರಣ್‌ ತೇಜಾ, ಎಂ ಎಂ ಕೀರವಾಣಿ, ಚಂದ್ರಬೋ, ಕೆ ಕೆ ಸೆಂಥಿಲ್‌ ಕುಮಾರ್‌, ಸಾಬು ಸಿರಿಲ್‌ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಭಾರತದ ಖ್ಯಾತ ನಿರ್ದೇಶಕರಾದ ಮಣಿರತ್ನಂ ಮತ್ತು ಕರಣ್ ಜೋಹರ್ ಹಾಗೂ ‘RRR’ ತಾರೆಯರಾದ ಜ್ಯೂನಿಯರ್ NTR ಮತ್ತು ರಾಮ್ ಚರಣ್ ಇನ್ನಿತರ ಭಾರತೀಯ ಕಲಾವಿದರನ್ನು ಆಸ್ಕರ್ ಸಮಿತಿಗೆ ಸೇರಲು ಆಹ್ವಾನಿಸಲಾಗಿದೆ. ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್’ (AMPAS) ಅಕಾಡೆಮಿಯು ಇತ್ತೀಚೆಗೆ, ಪ್ರಪಂಚದಾದ್ಯಂತ ಚಲನಚಿತ್ರೋದ್ಯಮದ ಹೆಸರಾಂತ ವ್ಯಕ್ತಿಗಳಿಗೆ ಸುಮಾರು 400 ಆಮಂತ್ರಣಗಳನ್ನು ಕಳುಹಿಸಿ, ಅವರನ್ನು ಸಮಿತಿಗೆ ಸೇರಲು ವಿನಂತಿಸಿದೆ. ಆಹ್ವಾನವನ್ನು ಸ್ವೀಕರಿಸಿದ 398 ಕಲಾವಿದರು ಮತ್ತು ಕಾರ್ಯಕಾರಿ ನಿರ್ಮಾಪಕರಲ್ಲಿ ‘RRR’ ನಟರಾದ ರಾಮ್ ಚರಣ್ ಮತ್ತು ಜ್ಯೂನಿಯರ್ NTR ಕೂಡ ಸೇರಿದ್ದಾರೆ. ಈಗಾಗಲೇ 10,000ಕ್ಕೂ ಹೆಚ್ಚು ಸದಸ್ಯರು, 398 ಕಲಾವಿದರು ಮತ್ತು ನಿರ್ಮಾಪಕರನ್ನು ಹೊಂದಿರುವ ಅಕಾಡೆಮಿಗೆ, ಆಸ್ಕರ್ ಪ್ರಶಸ್ತಿ ವಿಜೇತ ಹಾಡಿನ ನಾಟು ನಾಟು ಸಂಯೋಜಕ ಎಂ ಎಂ ಕೀರವಾಣಿ, ಗೀತರಚನೆಕಾರ ಚಂದ್ರಬೋಸ್, ಛಾಯಾಗ್ರಾಹಕ ಕೆ ಕೆ ಸೆಂಥಿಲ್ ಕುಮಾರ್ ಮತ್ತು ನಿರ್ಮಾಣ ವಿನ್ಯಾಸಕ ಸಾಬು ಸಿರಿಲ್ ಅವರ ತಂಡಕ್ಕೆ ಅಕಾಡೆಮಿಯು ಆಹ್ವಾನಗಳನ್ನು ಕಳುಹಿಸಿದೆ.

2023ರ ಅಕಾಡೆಮಿಯ ಆಹ್ವಾನಿತ ವರ್ಗವು ಆಸ್ಕರ್ ನಾಮನಿರ್ದೇಶಿತ ಸಾಕ್ಷ್ಯಚಿತ್ರ ‘ಆಲ್‌ ದಟ್‌ ಬ್ರೀತ್ಸ್‌’ ನಿರ್ದೇಶಕ ಶೌನಕ್ ಸೇನ್, ಮತ್ತು ಛೆಲ್ಲೋ ಶೋ ‘ಲಾಸ್ಟ್‌ ಫಿಲ್ಮ್‌ ಶೋ’ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ಚೈತನ್ಯ ತಮ್ಹಾಣೆ ಅವರನ್ನು ಒಳಗೊಂಡಿತ್ತು. ಇನ್ನಿತರ ಆಹ್ವಾನಿತರಲ್ಲಿ ನಿರ್ಮಾಣ ಮತ್ತು ತಂತ್ರಜ್ಞಾನದ ಗಿರೀಶ್ ಬಾಲಕೃಷ್ಣನ್ ಮತ್ತು ಕ್ರಾಂತಿ ಶರ್ಮಾ, ವಿಶುವಲ್‌ ಎಪೆಕ್ಟ್ ಕಲಾವಿದರಾದ ಹರೇಶ್ ಹಿಂಗೋರಾಣಿ ಮತ್ತು ಪಿ ಸಿ ಸನತ್, ಚಲನಚಿತ್ರ ನಿರ್ಮಾಪಕ ಶಿವಾನಿ ರಾವತ್ ಮತ್ತು ಸೌದಿ ಅರೇಬಿಯಾದ ರೆಡ್ ಸೀ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವ್ಯವಸ್ಥಾಪಕ ನಿರ್ದೇಶಕಿ ಶಿವಾನಿ ಪಾಂಡ್ಯ ಮಲ್ಹೋತ್ರಾ ಸೇರಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಅಕಾಡೆಮಿ CEO ಆದ ಬಿಲ್ ಕ್ರಾಮರ್ ಮತ್ತು ಅಧ್ಯಕ್ಷ ಜಾನೆಟ್ ಯಾಂಗ್, ‘ನಮ್ಮ ಅಕಾಡೆಮಿಯ ಸದಸ್ಯತ್ವಕ್ಕೆ ಕಲಾವಿದರು ಮತ್ತು ವೃತ್ತಿಪರರನ್ನು ಸ್ವಾಗತಿಸಲು ಈ ಸಂಸ್ಥೆಯು ಹೆಮ್ಮೆಪಡುತ್ತದೆ. ಅವರು ಸಿನಿಮಾ ವಿಭಾಗಗಳಲ್ಲಿ ಅಸಾಮಾನ್ಯ ಪ್ರತಿಭೆಗಳನ್ನು ಪ್ರತಿನಿಧಿಸುತ್ತಾರೆ. ಜೊತೆಗೆ ವಿಶ್ವದಾದ್ಯಂತ ಸಿನಿ ಅಭಿಮಾನಿಗಳ ಮೇಲೆ ಇವರು ಪ್ರಮುಖವಾದ ಪ್ರಭಾವ ಬೀರಿದ್ದಾರೆʼ. ಎಂದಿದ್ದಾರೆ. 2022ರಲ್ಲಿ ಸಂಸ್ಥೆಯು 397 ಹೊಸ ಸದಸ್ಯರನ್ನು ಆಹ್ವಾನಿಸಿತ್ತು. ಇದರಲ್ಲಿ ಭಾರತೀಯ ಸಿನಿಮಾ ತಾರೆಯರಾದ ಕಾಜೋಲ್, ಸೂರ್ಯ, ನಿರ್ಮಾಪಕರಾದ ರೀಮಾ ಕಾಗ್ತಿ, ಸುಶ್ಮಿತ್ ಘೋಷ್, ರಿಂಟು ಥಾಮಸ್ ಮತ್ತು ಪ್ಯಾನ್ ನಳಿನ್ ಹೆಸರುಗಳು ಸೇರಿದ್ದವು.

LEAVE A REPLY

Connect with

Please enter your comment!
Please enter your name here