ಯಹೂದಿಗಳ ಮೇಲಿನ ನಾಜಿಗಳ ಹಿಂಸೆಯನ್ನು ದೊಡ್ಡವರ ದೃಷ್ಟಿಕೋನದಲ್ಲಿ ತೋರಿಸದೆ ಅದನ್ನು ಎಂಟು ವರ್ಷದ ಬಾಲಕನೊಬ್ಬನ ಕಣ್ಣಿನಿಂದ ನೋಡಲು ಪ್ರಯತ್ನಿಸಿರುವ ಚಿತ್ರವಿದು. ‘The boy in the striped pajamas’ ಇಂಗ್ಲಿಷ್‌ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಯಹೂದಿಗಳನ್ನು ಬಂಧಿಸಿಟ್ಟು ಮಾರಣ ಹೋಮ ನಡೆಸುತ್ತಿದ್ದ ಕಾನ್ಸಂಟ್ರೇಷನ್ ಕ್ಯಾಂಪಿನೊಳಗೆ…. ಬಂಧಿಯಾಗಿರುವ ಎಂಟು ವರ್ಷದ ಪುಟ್ಟ ಹುಡುಗನಿಗೂ, ಅದೇ ಕಾನ್ಸಂಟ್ರೇಷನ್ ಕ್ಯಾಂಪಿನಲ್ಲಿ ಸೈನಿಕನಾಗಿರುವವನೊಬ್ಬನ ಮಗನಿಗೂ ಹೀಗೆ ಗೆಳೆತನವಾಗುತ್ತದೆ. ಆ ಮೂಲಕ ಎರಡೂ ಬದಿಯ ಪ್ರಪಂಚವನ್ನು ನಮಗೆ ಅರ್ಥ ಮಾಡಿಸುವ ಸಿನಿಮಾ ‘The boy in the striped pajamas’.

ಎಂಟು ವರ್ಷದ ಬಾಲಕ Bruno, ಮತ್ತು ಅವನಿಗೆ ಮನೆಗೆ ಬಂದು ಪಾಠ ಹೇಳಿಕೊಡುವ (ನಾಜಿ ಪ್ರಾಪಗ್ಯಾಂಡಾದ ಮೇಲೆ ವಿಶೇಷ ಒಲವು ಇರುವ) Herr Liszt ನಡುವಿನ ಸಂಭಾಷಣೆ….

Herr Liszt: Yes Bruno?
Bruno: I don’t understand, the Jew is down to this one man?
Herr Liszt: The Jew here means the entire Jewish race. If it was just this one man I’m sure something would be done about him.
Bruno: There is such thing as a nice Jew isn’t there?
Herr Liszt: [Sarcastically] I think Bruno if you ever find a nice Jew, you’d be the best explorer in the world.

ತುಂಬಾ ದಿನಗಳಾದ ಮೇಲೆ ಬಾಕಿ ಇದ್ದ ಸಿನಿಮಾಗಳ ಪೈಕಿ ಇದನ್ನು ನೋಡಿದೆ. ಮುಗಿದ ಮೇಲೆ ಈ ಸಿನಿಮಾಗೆ ಪ್ರತಿ ಪಾತ್ರವನ್ನು ಕಟ್ಟಿರುವ ರೀತಿ ಮತ್ತು ಅವುಗಳಿಗೆ ಸಂಭಾಷಣೆ ಬರೆದ ರೀತಿ ಅದ್ಭುತ ಅನ್ನಿಸಿತು. ಬರೀ ಈ ನಾಲ್ಕು ಪಾತ್ರಗಳನ್ನು ಗಮನಿಸಿ.

ಸೈನಿಕ – ಆತನಿಗೆ ತಾನು ಮಾಡುತ್ತಿರುವುದು ಒಳ್ಳೆಯದು, ಕೆಟ್ಟದ್ದು ಎಲ್ಲವೂ ಗೊತ್ತಿದೆ. ಆದರೆ “ಹಿಟ್ಲರ್ ಮಾಡುತ್ತಿರುವುದೆಲ್ಲ ಈ ದೇಶವನ್ನು ಮತ್ತೆ ಉತ್ತುಂಗಕ್ಕೇರಿಸಲು” ಅಂತ ನಂಬಿರುವ ನಾಜಿ ಪಡೆಯ ಹಿರಿಯ ಸೈನಿಕ
ಸೈನಿಕನ ಹೆಂಡತಿ – ಸ್ವತಃ ಗಂಡನೇ ಸೈನಿಕನಾಗಿದ್ದರೂ ಆತ ತೊಡಗಿರುವ ಪಾಪಕೃತ್ಯವನ್ನು ನೋಡಿ ಪ್ರಶ್ನಿಸುವವಳು, ಪ್ರತಿರೋಧಿಸುವವಳು
ಮಗಳು (12 ವರ್ಷ) – ದೊಡ್ಡವರು ಹೇಳಿದ್ದನ್ನು ಕಣ್ಣುಮುಚ್ಚಿ ನಂಬಿ, “ಯಹೂದಿಗಳೆಲ್ಲ ಪಾಪಿಗಳು, ಅವರೆಲ್ಲ ಈ ಭೂಮಿಯಿಂದ ಸರ್ವನಾಶವಾಗಬೇಕು” ಅಂತ ಬ್ರೈನ್ ವಾಶ್ ಆಗಿರುವವಳು
ಮಗ (8 ವರ್ಷ) – ಯಾರು ಏನು ಹೇಳಿದರೂ ಅದನ್ನು ನಂಬದೇ, ತಾನೇ ಪ್ರತಿಯೊಂದನ್ನು explore ಮಾಡಿ ಅದರ ಮೂಲಕವಷ್ಟೇ ಸತ್ಯಾಸತ್ಯತೆಗಳನ್ನು ಪರಿಶೀಲಿಸುವವನು!
ಯಹೂದಿಗಳ ಮೇಲಿನ ನಾಜಿಗಳ ಹಿಂಸೆಯನ್ನು ದೊಡ್ಡವರ ದೃಷ್ಟಿಕೋನದಲ್ಲಿ ತೋರಿಸದೆ ಅದನ್ನು ಎಂಟು ವರ್ಷದ ಬಾಲಕನೊಬ್ಬನ ಕಣ್ಣಿನಿಂದ ನೋಡಲು ಪ್ರಯತ್ನಿಸಿರುವುದು ಈ ಸಿನಿಮಾದಲ್ಲಿ ಬೆಸ್ಟ್. ನೋಡಿ ಚರ್ಚೆ ಮಾಡಲು ಸಕ್ಕತ್ ಸಿನಿಮಾ ಇದು.
ಸೈನಿಕನ ಮಗನ Explore ಮಾಡುವ, ಅನುಕಂಪ ತೋರುವ ಕಣ್ಣುಗಳು
ಮತ್ತು
ಯಹೂದಿ ಹುಡುಗನ ಅಮಾಯಕ, ದೈನ್ಯ ಕಣ್ಣುಗಳು
ಸಿನಿಮಾ ಮುಗಿದ ಮೇಲೂ ಕಾಡುವುದು ಗ್ಯಾರಂಟಿ.
ನೋಡಿರದಿದ್ದರೆ ನೋಡಿ. ನೆಟ್‍ಫ್ಲಿಕ್ಸ್’ನಲ್ಲಿದೆ.

ಸಿನಿಮಾ : The boy in the striped pajamas | ನಿರ್ದೇಶನ : Mark Herman | OTT : Netflix

https://youtu.be/9ypMp0s5Hiw

LEAVE A REPLY

Connect with

Please enter your comment!
Please enter your name here