ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾದ OTT ಬಿಡುಗಡೆ ದಿನಾಂಕ ನಿಗಧಿಯಾಗಿದೆ. ಆಗಸ್ಟ್‌ 25ರಂದು ತೆರೆಕಂಡಿದ್ದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಚೈತ್ರ ಜೆ ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಾಸಿಲ್ ಅಲ್ಚಾಲಕ್ಕಲ್ ನಿರ್ದೇಶನ, ರಾಜ್‌ ಬಿ ಶೆಟ್ಟಿ ಚಿತ್ರಕಥೆ – ನಟನೆಯ ‘ಟೋಬಿ’ ಸಿನಿಮಾದ OTT ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೇ ಡಿಸೆಂಬರ್‌ 22ರಿಂದ ಸಿನಿಮಾ SonyLIVನಲ್ಲಿ ಸ್ಟ್ರೀಮ್‌ ಆಗಲಿದೆ. ಮಾತನಾಡಲು ಬಾರದ ಮೂಗ ಹುಡುಗನೊಬ್ಬನ ಜೀವನದ ಕಥೆ. ರಿಮಾಂಡ್ ಹೋಮ್‌ನಲ್ಲಿ ಬೆಳೆದ ಕೋಪಿಷ್ಟ ಬಾಲಕನಿಗೆ ಪಾದ್ರಿಯೊಬ್ಬ ‘ಟೋಬಿ’ ಎಂದು ನಾಮಕರಣ ಮಾಡುತ್ತಾನೆ. ಅವನ ಜೀವನದಲ್ಲಿ ಜೆನ್ನಿ ಆಗಮನವಾಗುತ್ತದೆ. ಅವಳನ್ನೇ ತನ್ನ ಮಗಳೆಂದುಕೊಂಡು ಟೋಬಿ ಸಾಕುತ್ತಾನೆ. ಮುಂದೆ ಇವರಿಬ್ಬರು ಸಂಕಷ್ಟದ ಜೀವನವನ್ನು ಎದುರಿಸುತ್ತಾರೆ. ಸಿನಿಮಾವನ್ನು ಕುಮಟಾ ಪ್ರದೇಶದ ಉತ್ತರ ಕನ್ನಡದ ಹೃದಯಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ರಾಜ್ ದೀಪಕ್ ಶೆಟ್ಟಿ, ಸಂಧ್ಯಾ ಅರಕೆರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟಿ ಕೆ ದಯಾನಂದ್‌ ಅವರ ಕತೆ, ಮಿಧುನ್ ಮುಕುಂದನ್ ಸಂಗೀತ ಸಂಯೋಜನೆಯಿದೆ. ಆಗಸ್ಟ್ 25ರಂದು ಥಿಯೇಟರ್‌ಗೆ ಬಂದಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

LEAVE A REPLY

Connect with

Please enter your comment!
Please enter your name here