ನಟ ರವಿಚಂದ್ರನ್‌ ಅವರ ದ್ವಿತೀಯ ಪುತ್ರ ವಿಕ್ರಮ್‌ ಅಭಿನಯದ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಸುದ್ದಿಯಲ್ಲಿದೆ. ಯೋಗರಾಜ್‌ ಭಟ್ಟರು ರಚಿಸಿರುವ ‘ಶಕುಂತಲಾ..’ ಹಾಡಿನ ಚಿತ್ರೀಕರಣದೊಂದಿಗೆ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಜೂನ್‌ 24ರಂದು ಸಿನಿಮಾ ತೆರೆಕಾಣಲಿದೆ.

ಸಹನಾ ಮೂರ್ತಿ ನಿರ್ದೇಶನದಲ್ಲಿ ತಯಾರಾಗಿರುವ ನಟ ರವಿಚಂದ್ರನ್‌ ಪುತ್ರ ವಿಕ್ರಮ್‌ ಅಭಿನಯದ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ವಿ.ನಾಗೇಂದ್ರಪ್ರಸಾದ್‌ ರಚಿಸಿದ್ದ ‘ಪ್ಲೀಸ್‌ ಮಮ್ಮಿ’ ವೀಡಿಯೋ ಸಾಂಗ್‌ ದೊಡ್ಡ ಮಟ್ಟದ ಯಶಸ್ಸು ಕಂಡು ಟ್ರೆಂಡಿಂಗ್‌ನಲ್ಲಿದೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಇರುವ ಈ ಹಾಡನ್ನು ವಿಜಯಪ್ರಕಾಶ್‌ ಹಾಡಿದ್ದಾರೆ. ಇನ್ನು ಮೊನ್ನೆ ಚಿತ್ರಕ್ಕೆ ‘ಶಕುಂತಲಾ’ ಹಾಡನ್ನು ಚಿತ್ರಿಸಲಾಗಿದೆ. ಯೋಗರಾಜ್‌ ಭಟ್ಟರ ರಚನೆಯಿದು. ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಹಾಕಿದ್ದ ಬೃಹತ್‌ ಸೆಟ್‌ನಲ್ಲಿ ಈ ಹಾಡನ್ನು ಚಿತ್ರಿಸಿದ್ದಾರೆ. ವಿಕ್ರಮ್‌ ಜೊತೆ ಆಕಾಂಕ್ಷಾ ಶರ್ಮಾ ಹೆಜ್ಜೆ ಹಾಕಿದ್ದಾರೆ. ಅಲ್ಲಿಗೆ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಜೂನ್‌ 24ರಂದು ಸಿನಿಮಾ ತೆರೆಕಾಣಲಿದೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಸಂತೋಷ್‌ ರೈ ಪಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನವಿದೆ. ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಇತರರು ಅಭಿನಯಿಸಿದ್ದಾರೆ.

Previous article‘ವಿರಾಟ ಪರ್ವಂ’ ಟ್ರೈಲರ್‌; ರಾಣಾ – ಸಾಯಿ ಪಲ್ಲವಿ ತೆಲುಗು ಸಿನಿಮಾ
Next article‘ಆಫ್ಟರ್‌ ಆಪರೇಷನ್‌ ಲಂಡನ್‌ ಕೆಫೆ’; ಶೀರ್ಷಿಕೆ ಬಿಡುಗಡೆಗೊಳಿಸಿದ ರಿಷಬ್‌ ಶೆಟ್ಟಿ

LEAVE A REPLY

Connect with

Please enter your comment!
Please enter your name here