ಬಾಲಿವುಡ್‌ ಮೇರು ನಟ ಅಮಿತಾಭ್ ಬಚ್ಚನ್ ತಮ್ಮ ABCL ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮಿಸ್ ವರ್ಲ್ಡ್‌ ಸ್ಪರ್ಧೆ ನಡೆದು ಇಂದಿಗೆ 25 ವರ್ಷ. ಸಾಕಷ್ಟು ಪ್ರತಿರೋಧದ ಮಧ್ಯೆ ನಡೆದ ಸಮಾರಂಭದಲ್ಲಿ ಗ್ರೀಸ್ ಚೆಲುವೆ ಇರೆನ್ ಸ್ಕ್ಲಿವಾ ವಿಶ್ವಸುಂದರಿ ಕಿರೀಟ ಅಲಂಕರಿಸಿದ್ದರು.

1996ರ ಮಿಸ್‌ ವರ್ಲ್ಡ್‌ ಸ್ಪರ್ಧೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಬಾಲಿವುಡ್‌ ತಾರೆ ಅಮಿತಾಭ್ ಬಚ್ಚನ್ ಅವರ ABCL ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿತ್ತು ಎನ್ನುವುದು ವಿಶೇಷ. ನವೆಂಬರ್‌ 23ರ ಸಂಜೆ ಆರಂಭವಾದ ಭವ್ಯ ಸಮಾರಂಭ ತಡರಾತ್ರಿಯವರೆಗೂ (ನವೆಂಬರ್‌ 24) ನಡೆದು ಗ್ರೀಸ್‌ ಚೆಲುವೆ ಇರೆನ್‌ ಸ್ಕ್ಲಿವಾ ಮಿಸ್‌ ವರ್ಲ್ಡ್‌ ಕಿರೀಟ ತೊಟ್ಟಿದ್ದರು. 1995ರಲ್ಲಿ ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದ ವೆನಿಝುಯೆಲಾದ ಜಾಕ್ವಲಿನ್ ಅಕ್ವಿಲಿರಾ ಅವರು ಇರೆನ್‌ ಸ್ಕ್ಲಿವಾಗೆ ಕಿರೀಟ ತೊಡಿಸಿದ್ದರು. ಬಾಲಿವುಡ್‌ ತಾರೆಯರಾದ ಐಶ್ವರ್ಯ ರೈ ಮತ್ತು ಅಮೀರ್ ಖಾನ್‌ ಹಾಗೂ ಪರಮೇಶ್ವರ್ ಗೋದ್ರೇಜ್‌ ತೀರ್ಪುಗಾರರಾಗಿ ಭಾಗವಹಿಸಿದ್ದರು. ಈ ಸಮಾರಂಭಕ್ಕೆ ಬೆಂಗಳೂರಿನಲ್ಲಿ ವಿವಿದ ಸಂಘಟನೆಗಳಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿತ್ತು. ಈ ಎಲ್ಲಾ ಅಡೆತಡೆಗಳ ಮಧ್ಯೆ ಬೆಂಗಳೂರಿನಲ್ಲಿ ಈ ಪ್ರತಿಷ್ಠಿತ ಸಮಾರಂಭ ನಡೆಯಿತು. ಈ ಸಮಾರಂಭ ಆಯೋಜಿಸಿದ್ದ ABCL ತೀವ್ರ ನಷ್ಟಕ್ಕೆ ಗುರಿಯಾಗಿ ಅಮಿತಾಭ್ ಬಚ್ಚನ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.

Previous articleರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಅಕ್ಷಿ’ ಡಿಸೆಂಬರ್‌ 3ಕ್ಕೆ ತೆರೆಗೆ; ನೇತ್ರದಾನಕ್ಕೆ ಪ್ರೇರೇಪಿಸುವ ಮಾದರಿ ಸಿನಿಮಾ
Next articleಟ್ರೈಲರ್ | ಅಕ್ಷಯ್‌, ಧನುಷ್‌, ಸಾರಾ ‘ಅತ್ರಂಗಿ ರೇ’; ಡಿಸ್ನೀಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಡಿಸೆಂಬರ್ 24ರಿಂದ

LEAVE A REPLY

Connect with

Please enter your comment!
Please enter your name here