ಧನಂಜಯ್‌ ಅಭಿನಯದ ‘twenty one hours’ ಸಿನಿಮಾ ನಾಡಿದ್ದು ಬಿಡುಗಡೆಯಾಗುತ್ತಿದೆ. ಸಿನಿಮಾ ವೀಕ್ಷಿಸಿದ ಸುದೀಪ್‌ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಸದ್ದಿಲ್ಲದೆ ಚಿತ್ರೀಕರಣಗೊಂಡು ಬಿಡುಗಡೆಯಾಗುತ್ತಿದೆ ಧನಂಜಯ್‌ ಅವರ ‘twenty one hours’. ಜೈಶಂಕರ್‌ ನಿರ್ದೇಶನದ ಇದು ಇನ್ವೆಸ್ಟಿಗೇಷನ್‌ ಥ್ರಿಲ್ಲರ್‌. ಕೋವಿಡ್‌ ಲಾಕ್‌ಡೌನ್‌ನಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ದುರ್ಗಾ ಕೃಷ್ಣ, ಸುದೇವ್‌ ನಾಯರ್‌, ರಾಹುಲ್‌ ಮಾದೇವ್‌ ನಟಿಸಿದ್ದಾರೆ. ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದ್ದು, ಚಿತ್ರತಂಡ ಸುದೀಪ್‌ ಅವರನ್ನು ಭೇಟಿ ಮಾಡಿ ಸಿನಿಮಾ ತೋರಿಸಿದೆ. ಸಿನಿಮಾ ಮೆಚ್ಚಿದ ಸುದೀಪ್‌ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಈ ಭೇಟಿ ಸಂದರ್ಭದ ಫೋಟೊಗಳನ್ನು ನಟ ಧನಂಜಯ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ತಬ್ಬಿ ಬರಮಾಡಿಕೊಂಡು, ತುಂಬು ಪ್ರೀತಿಯಿಂದ ಇಡಿ ತಂಡಕ್ಕೆ ಕೈಯಾರೆ ದೋಸೆ ಮಾಡಿಕೊಟ್ಟು, #21hours ಸಿನಿಮಾ ನೋಡಿ, ಪ್ರಾಮಾಣಿಕವಾಗಿ ಅನಿಸಿದ್ದೆಲ್ಲವನ್ನು ಹೇಳಿ, ಒಳ್ಳೆಯದನ್ನೆ ಹಾರೈಸಿ ಬೀಳ್ಕೊಟ್ಟ ನಿಮ್ಮ ಆತಿಥ್ಯಕ್ಕೆ ಇಡಿ ತಂಡ ಆಭಾರಿ” ಎಂದು ಸುದೀಪ್‌ರಿಗೆ ಧನ್ಯವಾದ ಹೇಳಿದ್ದಾರೆ.

Previous articleಆವರಿಸುವ ಚಿತ್ರಕಥೆ, ಮರುಗಿಸುವ ಕತೆಯ ಥ್ರಿಲ್ಲರ್ ‘ಅಂತಾಕ್ಷರಿ’
Next articleಮನುರಂಜನ್‌ ‘ಪ್ರಾರಂಭ’; ಪ್ರೀತಿಯ ಕತೆಯಲ್ಲಿ ಸಂದೇಶದ ಹೂರಣ

LEAVE A REPLY

Connect with

Please enter your comment!
Please enter your name here