81ನೇ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಸಮಾರಂಭದಲ್ಲಿ ‘Oppenheimer’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಈ ಚಿತ್ರದ ನಿರ್ದೇಶನಕ್ಕಾಗಿ ಕ್ರಿಸ್ಟೋಫರ್‌ ನೋಲನ್‌ ಅತ್ಯುತ್ತಮ ನಿರ್ದೇಶಕ ಗೌರವಕ್ಕೆ ಪಾತ್ರರಾಗಿದ್ದಾರೆ. ‘Killers of the Flower Moon’ ಚಿತ್ರದ ಉತ್ತಮ ಅಭಿನಯಕ್ಕಾಗಿ Lily Gladstone ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಂದಿದೆ.

81ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಇಂದು (ಜನವರಿ 8) ಬೆಳಗ್ಗೆ US ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿರುವ ದಿ ಬೆವರ್ಲಿ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿತರಿಸಲಾಗಿದೆ. ಈ ವರ್ಷ ಕ್ರಿಸ್ಟೋಫರ್ ನೋಲನ್ ಅವರ ಬ್ಲಾಕ್‌ಬಸ್ಟರ್ ಸಿನಿಮಾ ‘Oppenheimer’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದೆ. Christopher Nolan ಅವರು ‘Oppenheimer’ ಚಿತ್ರದ ನಿರ್ದೇಶನಕ್ಕಾಗಿ ‘ಅತ್ಯುತ್ತಮ ನಿರ್ದೇಶಕʼ ಪ್ರಶಸ್ತಿ ಪಡೆದುಕೊಂಡರು. ಈ ಚಿತ್ರವು ಪರಮಾಣು ಬಾಂಬ್‌ ಪಿತಾಮಹ ಜೆ ರಾಬರ್ಟ್ ಓಪನ್‌ಹೈಮರ್ ಅವರ ಬಯೋಪಿಕ್‌. ‘Killers of the Flower Moon’ ಚಿತ್ರಕ್ಕಾಗಿ Lily Gladstone ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ. ‘Poor Things’ ಸಂಗೀತ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ‘Barbie’ ಚಲನಚಿತ್ರವು ‘ಬಾಕ್ಸ್ ಆಫೀಸ್ ಅಚೀವ್‌ಮೆಂಟ್’ ಪ್ರಶಸ್ತಿ ಗೆದ್ದಿದೆ.

‘ಅತ್ಯುತ್ತಮ ಹಾಸ್ಯ ನಟ’ ಪ್ರಶಸ್ತಿಯನ್ನು Paul Giamatti ಅವರು ಪಡೆದುಕೊಂಡಿದ್ದಾರೆ. ಅವರು ತಮ್ಮ ಗೆಲುವನ್ನು ಇತ್ತೀಚೆಗಷ್ಟೇ ಪದವೀದರನಾದ ತಮ್ಮ ಪುತ್ರನಿಗೆ ಅರ್ಪಿಸಿದ್ದಾರೆ. ‘Succession’ ಸರಣಿಯು ‘ಅತ್ಯುತ್ತಮ ಟಿವಿ ಸರಣಿ’ ಪ್ರಶಸ್ತಿ ಪಡೆದುಕೊಂಡಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿರುವ ಈ ಸರಣಿಯು ರಾಯ್ ಕುಟುಂಬ ಮತ್ತು ಕಂಪನಿ (Waystar RoyCo)ಯ ಸುತ್ತ ಸುತ್ತುತ್ತದೆ. ಜಾಗತಿಕ ಮಾಧ್ಯಮದ ಮಾಲೀಕರು ಮತ್ತು ಅವರ ಅಧಿಕಾರದ ಹೋರಾಟಗಳು, ದ್ರೋಹ ಮತ್ತು ಕಾರ್ಪೊರೇಟ್ ಒಳಸಂಚುಗಳ ಕಥಾಹಂದರದ 4 ಕಂತುಗಳ ಈ ಸರಣಿಯು 2018ರಿಂದ ಸ್ಟ್ರೀಮಿಂಗ್‌ ಅರಂಭಿಸಿದೆ.

Sarah Snook ಅವರು ‘Succession’ ಸರಣಿಯ ‘Shiobhan’ (Shiv) ಪಾತ್ರಕ್ಕಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದು ಅವರ ಎರಡನೇ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯಾಗಿದೆ. ‘The Bear’ ಸರಣಿಯು ಅತ್ಯುತ್ತಮ ಹಾಸ್ಯ ಸರಣಿ ಪ್ರಶಸ್ತಿ ಗೆದ್ದಿದೆ. ಈ ಸರಣಿಯು ಬಾಣಸಿಗನೊಬ್ಬನ ಕಥೆಯನ್ನು ಹೇಳುತ್ತದೆ ತನ್ನ ಸಹೋದರನಿಗಾಗಿ ಅವನ ಸಮರ್ಪಣಾ ಮನೋಭಾವದ ಭಾವನೆಗಳನ್ನು ಈ ಸರಣಿಯಲ್ಲಿ ತೋರಿಸಲಾಗಿದೆ. ‘Anthology’ ಸರಣಿಯು ‘Made For Television’ ಪ್ರಶಸ್ತಿ ಪಡೆದುಕೊಂಡಿದೆ.

‘Barbie’ ಚಲನಚಿತ್ರದ ‘Billie Eilish’ ಹಾಡು ‘ಅತ್ಯುತ್ತಮ ಮೂಲ ಗೀತೆ’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ‘Ludwig Goransson’ ಸಿನಿಮಾವು ‘Best Motion Picture Score’ ಪ್ರಶಸ್ತಿ ಪಡೆದುಕೊಂಡಿದೆ. ‘Cillian Murphy’ ಅವರು ‘Oppenheimer’ ಚಿತ್ರದ ಪಾತ್ರಕ್ಕಾಗಿ ‘ಅತ್ಯತ್ತಮ ನಟ’ ಪ್ರಶಸ್ತಿ ಪಡೆದಿದ್ದಾರೆ. Emma Stone ಅವರು ‘Poor Things’ ಚಲನಚಿತ್ರದಲ್ಲಿನ ನಟನೆಗಾಗಿ ‘ಅತ್ಯುತ್ತಮ ಹಾಸ್ಯ ನಟಿ’ ಪ್ರಶಸ್ತಿಯನ್ನು ಪಡೆದುಕೊಂಡರು.

ʼThe Boy And The Heronʼ ಸಿನಿಮಾವು ʼಅತ್ಯುತ್ತಮ ಅನಿಮೇಟೆಡ್ ಚಲನಚಿತ್ರʼ ಪ್ರಶಸ್ತಿಯನ್ನು ಪಡೆದುಕೊಂಡಿದೆ. ʼKieran Culkinʼ ಅವರು ʼSuccessionʼ ಸರಣಿಯಲ್ಲಿನ Roman Roy ಪಾತ್ರಕ್ಕಾಗಿ ಸರಣಿ ವಿಭಾಗದಲ್ಲಿನ ನಟನೆಗಾಗಿ ʼಅತ್ಯುತ್ತಮ ನಟʼ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ‘Anatomy of a Fall’ ಚಲನಚಿತ್ರವು ಅತ್ಯುತ್ತಮ ಚಲನಚಿತ್ರ (Non-English) ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ‘Ricky Gervais’ ದೂರದರ್ಶನದಲ್ಲಿನ ಸ್ಟ್ಯಾಂಡ್-ಅಪ್ ಕಮೆಡಿಯನ್‌ ವಿಭಾಗದಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here