ಯತಿರಾಜ್‌ ನಿರ್ದೇಶನದ ‘ಸಂಜು’ ಸಿನಿಮಾಗೆ ಗಾಯಕರಾದ ವಾಸುಕಿ ವೈಭವ್‌, ನವೀನ್‌ ಸಜ್ಜು ಮತ್ತು ಐಶ್ವರ್ಯ ರಂಗರಾಜನ್‌ ಹಾಡಿದ್ದಾರೆ. ವಿಜಯ್‌ ಹರಿತ್ಸ ಸಂಗೀತ ಸಂಯೋಜನೆಯಲ್ಲಿ ಹಾಡುಗಳ ಧ್ವನಿಮುದ್ರಣ ನೆರವೇರಿದೆ.

ಯತಿರಾಜ್‌ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ‘ಸಂಜು’ ಸಿನಿಮಾದ ಹಾಡುಗಳ ಧ್ವನಿಮುದ್ರಣ ಪೂರ್ಣಗೊಂಡಿದೆ. ಇದು ಪ್ರೀತಿ ಮತ್ತು ಭಾವನೆಗಳ ಸುತ್ತ ಹೆಣೆದ ಚಿತ್ರಕಥೆ ಎನ್ನುತ್ತಾರೆ ನಿರ್ದೇಶಕರು. ವಿಜಯ್‌ ಹರಿತ್ಸ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಎರಡು ಹಾಡುಗಳಿಗೆ ಮೊನ್ನೆ ಧ್ವನಿಮುದ್ರಣ ನೆರವೇರಿದೆ. ಈ ಎರಡೂ ಹಾಡುಗಳನ್ನು ಆಕಾಸ ಹಾಸನ್‌ ರಚಿಸಿದ್ದಾರೆ. ಡ್ಯುಯೆಟ್ ಹಾಡನ್ನು ವಾಸುಕಿ ವೈಭವ್ ಮತ್ತು ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಮತ್ತೊಂದು ವಿಭಿನ್ನ ಶೈಲಿಯ ಗೀತೆಗೆ ನವೀನ್ ಸಜ್ಜು ದನಿಯಾಗಿದ್ದಾರೆ. ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸುತ್ತಿರುವ ಚಿತ್ರಕ್ಕೆ ವಿದ್ಯಾ ನಾಗೇಶ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸವಿದೆ. ಮನ್ವಿತ್ ಮತ್ತು ‍ಶ್ರಾವ್ಯ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಯತಿರಾಜ್, ಸುಂದರಶ್ರೀ, ಬಾಲ ರಾಜ್ವಾಡಿ, ಮಹಂತೇಶ್, ಅಪೂರ್ವ, ಚಂದ್ರಪ್ರಭ, ಪ್ರಕಾಶ್ ಶೆಣೈ, ವಿನೋದ್ ಚಿತ್ರದ ಇತರೆ ಕಲಾವಿದರು. ಮಡಿಕೇರಿಯ ಮೂರ್ನಾಡು ಸ್ಥಳದಲ್ಲೇ ಬಹುಪಾಲು ಚಿತ್ರೀಕರಣ ನಡೆದಿದೆ. ಅಲ್ಲಿ ಬಸ್‌ ನಿಲ್ದಾಣದ ಸೆಟ್‌ ಹಾಕಿ ಚಿತ್ರಿಸಿದ್ದಾರೆ. ಚಿತ್ರದಲ್ಲಿ ಈ ಬಸ್‌ ನಿಲ್ದಾಣ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ ನಿರ್ದೇಶಕ ಯತಿರಾಜ್‌.

Previous articleಮುಟ್ಟಿನ ಬಗ್ಗೆ ಹೇಳುವ ‘ಋತು’ | ಸಮರ್ಥ್‌ ನಾಗರಾಜ್‌ ನಿರ್ದೇಶನ ಕಿರುಚಿತ್ರ
Next articleನಟಿ ರಮ್ಯಗೆ ಹಿನ್ನಡೆ | ನಿಗದಿಯಂತೆ ನಾಳೆ ರಿಲೀಸ್‌ ಆಗಲಿದೆ ‘ಹಾಸ್ಟೆಲ್‌ ಹುಡುಗರ’ ಸಿನಿಮಾ

LEAVE A REPLY

Connect with

Please enter your comment!
Please enter your name here