ಕಾರ್ತೀಕ್‌ ಸುಬ್ಬರಾಜ್‌ ನಿರ್ದೇಶನದ ‘ಮಹಾನ್‌’ ತಮಿಳು ಸಿನಿಮಾದ ಟ್ರೈಲರ್‌ ಇಂದು ಬಿಡುಗಡೆಯಾಗಿದೆ. ವಿಕ್ರಂ ಮತ್ತು ಅವರ ಪುತ್ರ ಧ್ರುವ್‌ ನಟಿಸಿರುವ ಸಿನಿಮಾ ಫೆ.10ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಸ್ಕೂಲ್‌ ಮೇಷ್ಟ್ರಾಗಿದ್ದ ಮಹಾನ್‌ ಗಾಂಧಿ (ವಿಕ್ರಂ) ವಿಚಿತ್ರ ಸನ್ನಿವೇಶದಲ್ಲಿ ಕ್ರಿಮಿನಲ್‌ ಆಗಿ ಆಲ್ಕೋಹಾಲ್‌ ಕಿಂಗ್‌ಪಿನ್‌ ಆಗುವ ಕತೆಯನ್ನು ಹೇಳುತ್ತದೆ ‘ಮಹಾನ್‌’ ಟ್ರೈಲರ್‌. ನಟ ವಿಕ್ರಂ ಅವರದ್ದು ಇಲ್ಲಿ ತೀರಾ ಸಂಕೀರ್ಣವಾದ ಪಾತ್ರವಿದ್ದಂತಿದೆ. ಅವರ ತಾರಾಪುತ್ರ ಧ್ರುವ್‌ ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ಸೂಚನೆ ಸಿಗುತ್ತದೆ. ವಿಕ್ರಂ ಪತ್ನಿಯಾಗಿ ಸಿಮ್ರನ್‌ ಪಾತ್ರ ಮೊದಲ ಬಾರಿಗೆ ವೀಕ್ಷಕರಿಗೆ ಪರಿಚಯವಾಗಿದ್ದು, ನಿರ್ದೇಶಕ ಕಾರ್ತೀಕ್‌ ಸುಬ್ಬರಾಜ್‌ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪಾತ್ರಗಳನ್ನು ಹೆಣೆದಿದ್ದಾರೆ. ಬಾಬ್ಬಿ ಸಿಂಹ, ವಾಣಿ ಭೋಜನ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾದ ಅಫಿಷಿಯಲ್‌ ಸಿನಾಪ್ಸಿಸ್‌ ಹೀಗಿದೆ – ”ಸ್ವಾತಂತ್ರ್ಯ ಮತ್ತು ಹಣ ಗಳಿಕೆಯ ಆಸೆಯಿಂದ ವ್ಯಕ್ತಿಯೊಬ್ಬ ತನ್ನ ಕುಟುಂಬದಿಂದ ಬೇರ್ಪಡುತ್ತಾನೆ. ತನ್ನ ಗುರಿಯನ್ನು ತಲುಪುವ ಆತ ಪುತ್ರನ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ. ಶ್ರೀಮಂತನಾಗುವ ಆತನ ಆಸೆಯೇನೋ ಈಡೇರುತ್ತದೆ. ಆದರೆ ಬದುಕು ತಂದೆಯ ಪ್ರೀತಿಯನ್ನು ಅವನಿಗೆ ಮರಳಿ ಗಳಿಸಿಕೊಡುತ್ತದೆಯೇ?” ಮೂಲ ತಮಿಳು ಭಾಷೆಯ ಜೊತೆ ಕನ್ನಡ, ಮಲಯಾಳಂ ಮತ್ತು ತೆಲುಗಿನಲ್ಲೂ ಸಿನಿಮಾ ತೆರೆಕಾಣಲಿದೆ. ಕನ್ನಡದಲ್ಲಿ ಚಿತ್ರದ ಶೀರ್ಷಿಕೆ ‘ಮಹಾ ಪುರುಷ’ ಎಂದಿದೆ. ಫೆಬ್ರವರಿ 10ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here